For Quick Alerts
  ALLOW NOTIFICATIONS  
  For Daily Alerts

  ಮುಂಬೈ ಮೇಯರ್ ಸ್ಥಾನಕ್ಕೆ ಸೋನು ಸೂದ್, ಮಿಲಿಂದ್, ರಿತೇಶ್ ಹೆಸರನ್ನು ಸೂಚಿಸಿದ ಕಾಂಗ್ರೆಸ್

  |

  ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಚುನಾವಣೆಯಲ್ಲಿ ಎಲ್ಲಾ 227 ಸ್ಥಾನಗಳಲ್ಲೂ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮುಂಬೈ ಮೇಯರ್ ಹುದ್ದೆಗೆ ಮೂವರು ಖ್ಯಾತ ನಟರ ಹೆಸರನ್ನು ಕಾಂಗ್ರೆಸ್ ಶಿಫಾರಸು ಮಾಡುವ ಮೂಲಕ ಗಮನ ಸೆಳೆದಿದೆ. ಮುಂಬೈ ಕಾಂಗ್ರೆಸ್ ಘಟಕದ ಕಾರ್ಯತಂತ್ರ ಸಮಿತಿಯು ಬಿಎಂಸಿ ಚುನಾವಣೆಗೆ ವರದಿಯನ್ನು ಸಿದ್ಧಪಡಿಸಿದ್ದು ಸೋಮವಾರ ಉನ್ನತ ನಾಯಕರ ಜೊತೆ ಚರ್ಚೆಗೆ ಕಳುಹಿಸಿದೆ.

  ಕಾರ್ಯತಂತ್ರ ಸಮಿತಿಯು 25 ಪುಟಗಳ ಕಾರ್ಯತಂತ್ರ ರಚಿಸಿದ್ದು, ಬಾಲಿವುಡ್ ನಟರಾದ ಸೋನು ಸೂದ್, ರಿತೇಶ್ ದೇಶಮುಖ್ ಮತ್ತು ಫಿಟ್ನೆಸ್ ಉತ್ಸಾಹಿ, ಮಾಡೆಲ್ ಮಿಲಿಂದ ಸೋಮನ್ ಹೆಸರನ್ನು ಮುಂಬೈ ಮೇಯರ್ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳಾಗಿ ಶಿಫಾರಸು ಮಾಡಿದೆ. ತನ್ನ ಕಮಿಟಿಯೂ ತನ್ನ ವರದಿಯಲ್ಲಿ, ಮೇಯರ್ ಅಭ್ಯರ್ಥಿಗಳು ಪ್ರಮುಖವಾಗಿ ಯುವಕರನ್ನು ಆಕರ್ಷಣೆ ಮಾಡಬೇಕು ಮತ್ತು ಸಾರ್ವಜನಿಕರು ತನ್ನ ಕಡೆ ಸೆಳೆಯುವಂತಿರಬೇಕು ಎಂದು ಹೇಳಿದೆ.

  ಹುಟ್ಟುಹಬ್ಬದ ದಿನ ತನ್ನ ದೊಡ್ಡ ಕನಸನ್ನು ಬಹಿರಂಗ ಪಡಿಸಿದ ಸೋನು ಸೂದ್ಹುಟ್ಟುಹಬ್ಬದ ದಿನ ತನ್ನ ದೊಡ್ಡ ಕನಸನ್ನು ಬಹಿರಂಗ ಪಡಿಸಿದ ಸೋನು ಸೂದ್

  ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗ್ತಾಪ್ ಪಕ್ಷದ ಹಿರಿಯ ನಾಯಕರೊಂದಿಗೆ ದಾಖಲೆ ಕುರಿತು ಚರ್ಚಿಸಲಿದ್ದಾರೆ ಎಂದು ಮುಂಬೈ ಕಾಂಗ್ರೆಸ್ ಕಾರ್ಯದರ್ಶಿ ಗಣೇಶ್ ಯಾದವ್ ಹೇಳಿದ್ದಾರೆ. ಚುನಾವಣೆಗೂ ಮೊದಲು ಮೇಯರ್ ಅಭ್ಯರ್ಥಿಗಳನ್ನು ಘೋಷಿಸಬೇಕು ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ಅಭ್ಯರ್ಥಿಗಳನ್ನು ಹುದ್ದೆಗೆ ಪರಿಗಣಿಸಬೇಕೆಂದು ವರದಿಯಲ್ಲಿ ಸೂಚಿಸಿದೆ.

  ಅಂದಹಾಗೆ ಬಿಎಂಸಿ ಚುನಾವಣೆ 2022ರಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಂಬೈ ಮುನ್ಸಿಪಾಲ್ ಕಾರ್ಪೊರೇಶನ್ ಅನ್ನು ಏಷ್ಯಾದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆ ಎಂದು ಪರಿಗಣಿಸಲಾಗಿದ್ದು, ವಾರ್ಷಿಕ ರೂ. 37,000 ಕೋಟಿ ರೂ.ಗಳ ಬಜೆಟ್ ಹೊಂದಿದೆ.

  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರ ಪುತ್ರ, ರಿತೇಶ್ ದೇಶಮುಖ್ ಮತ್ತು ಮಾನವೀಯ ಕೆಲಸಗಳ ಜನರ ಗಮನ ಸೆಳೆದಿರುವ ಸೋನು ಸೂದ್ ಮತ್ತು ಫಿಟ್ನೆಸ್ ಫ್ರೀಕ್ ಮಿಲಿಂದ್ ಹೆಸರುಗಳನ್ನು ಕಾಂಗ್ರೆಸ್ ಸೂಚಿಸುವ ಮೂಲಕ ಈ ಬಾರಿ ಜನರಲ್ಲಿ ಕುತೂಹಲ ಮೂಡಿಸಿದೆ.

  English summary
  BMC polls 2022; Congress recommended three Actor names likes Sonu Sood, Riteish Deshmukh, Milind Soman for Mumbai Mayor's post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X