twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಕೊಲೆ!? ಮರಣೋತ್ತರ ಪರೀಕ್ಷೆ ವೇಳೆ ಮುಚ್ಚಿಟ್ರಾ ಸತ್ಯ?

    |

    ಬಾಲಿವುಡ್ ನಟ ಸುಶಾಂತ್ ಸಿಂಗ್‌ ನಿಧನ ಹೊಂದಿ ಎರಡು ವರ್ಷವಾಯ್ತು, ಆದರೆ ಈಗಲೂ ಅವರ ಸಾವು ನಿಗೂಢವಾಗಿಯೇ ಉಳಿದಿದೆ.

    ಜೂನ್ 14, 2020 ರಂದು ಸುಶಾಂತ್ ಸಿಂಗ್‌ ರ ಮೃತದೇಹ ಮುಂಬೈನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದ್ದರು. ಸಿಬಿಐ ತನಿಖೆ ಇನ್ನೂ ಜಾರಿಯಲ್ಲಿದೆ.

    ಸುಶಾಂತ್‌ರದ್ದು ಕೊಲೆಯೊ, ಆತ್ಮಹತ್ಯೆಯೊ ಅಥವಾ ಆತ್ಮಹತ್ಯೆಗೆ ಪ್ರೇರೇಪಣೆ ನೀಡಲಾಗಿದೆಯೋ ಎಂಬ ಚರ್ಚೆ ಇಂದಿಗೂ ಜಾರಿಯಲ್ಲಿದೆ. ಈ ನಡುವೆ ಸುಶಾಂತ್ ಸಿಂಗ್‌ರ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೋರ್ವ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದ್ದಾರೆ.

    ಎರಡು ವರ್ಷದ ಹಿಂದೆ ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ನಡೆದಾಗ ನಾನೂ ಅಲ್ಲಿದ್ದ ಎಂದು ಹೇಳಿಕೊಂಡಿರುವ ಆಸ್ಪತ್ರೆಯ ಮಾಜಿ ಸಿಬ್ಬಂದಿ ರೂಪಕುಮಾರ್ ಶಾ, ''ಸುಶಾಂತ್‌ ಸಿಂಗ್‌ ಮರಣೋತ್ತರ ಪರೀಕ್ಷೆಯ ವೇಳೆ ನಾನು ಗಮನಿಸಿದಂತೆ ಅವರ ದೇಹದ ಮೇಲೆ ಗಾಯಗಳಿದ್ದವು. ಆದರೆ ಅವನ್ನು ವರದಿಯಲ್ಲಿ ಮುಚ್ಚಿಡಲಾಗಿದೆ'' ಎಂದಿದ್ದಾರೆ.

    ಅಂದು ಐದು ಶವಗಳ ಮರಣೋತ್ತರ ಪರೀಕ್ಷೆ

    ಅಂದು ಐದು ಶವಗಳ ಮರಣೋತ್ತರ ಪರೀಕ್ಷೆ

    ''ಸುಶಾಂತ್ ಸಿಂಗ್ ನಿಧನ ಹೊಂದಿದ ದಿನ ಕೂಪರ್ ಆಸ್ಪತ್ರೆಗೆ ಐದು ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿದ್ದವು ಅವುಗಳಲ್ಲಿ ಒಂದು ಸುಶಾಂತ್‌ ಸಿಂಗ್‌ರದ್ದು. ನಾನು ಮೊದಲು ಸುಶಾಂತ್ ಸಿಂಗ್ ದೇಹ ನೋಡಿದಾಗ ದೇಹದ ಮೇಲೆ ಕೆಲವು ಗಾಯಗಳಿದ್ದವು. ಅದರಲ್ಲಿಯೂ ಕತ್ತಿನ ಭಾಗದಲ್ಲಿ ಮೂರು ಗಾಯಗಳಾಗಿದ್ದವು. ಮರಣೋತ್ತರ ಪರೀಕ್ಷೆಯನ್ನು ನಾವು ರೆಕಾರ್ಡ್ ಮಾಡಿಕೊಳ್ಳುವುದು ಕಡ್ಡಾಯ ಆದರೆ ಆ ಮರಣೋತ್ತರ ಪರೀಕ್ಷೆಯನ್ನು ರೆಕಾರ್ಡ್ ಮಾಡಿಕೊಳ್ಳಲಿಲ್ಲ. ಬದಲಿಗೆ ಫೋಟೊಗಳನ್ನಷ್ಟೆ ತೆಗೆಯಲು ಸೂಚಿಸಲಾಗಿತ್ತು'' ಎಂದಿದ್ದಾರೆ ರೂಪಕುಮಾರ್ ಶಾ.

    ಕೊಲೆಯೆಂದು ಹೇಳಿದ್ದೆ: ರೂಪಕುಮಾರ್ ಶಾ

    ಕೊಲೆಯೆಂದು ಹೇಳಿದ್ದೆ: ರೂಪಕುಮಾರ್ ಶಾ

    ''ಅಂದು ಸುಶಾಂತ್‌ ಸಿಂಗ್‌ರ ದೇಹವನ್ನು ನೋಡಿದ ಕೂಡಲೇ ನಾನಗೆ ಖಾತ್ರಿಯಾಯಿತು ಇದು ಕೊಲೆಯೆಂದು. ಅದನ್ನು ನನ್ನ ಸೀನಿಯರ್‌ಗಳ ಬಳಿಯೂ ನಾನು ಹೇಳಿದೆ. ನಾವು ನಿಯಮಾನುಸಾರ ವ್ಯವಹರಿಸಬೇಕು ಎಂದೆ ಆದರೆ ಅವರು ನನ್ನ ಮಾತಿನ ಬಗ್ಗೆ ನಿಗಾ ವಹಿಸಲಿಲ್ಲ ಹಾಗೂ ಕೆಲವು ಫೊಟೊಗಳನ್ನಷ್ಟೆ ತೆಗೆಯಲು ನನಗೆ ಹೇಳಿದರು'' ಎಂದಿದ್ದಾರೆ ರೂಪಕುಮಾರ್ ಶಾ. ಅಂದಹಾಗೆ ರೂಪಕುಮಾರ್ ಶಾ ಎರಡು ತಿಂಗಳ ಹಿಂದೆ ನಿವೃತ್ತರಾಗಿದ್ದಾರೆ.

    ಅನುಮಾನ ವ್ಯಕ್ತಪಡಿಸಿದ್ದ ಏಮ್ಸ್ ಆಸ್ಪತ್ರೆ ವೈದ್ಯರು

    ಅನುಮಾನ ವ್ಯಕ್ತಪಡಿಸಿದ್ದ ಏಮ್ಸ್ ಆಸ್ಪತ್ರೆ ವೈದ್ಯರು

    ಕೂಪರ್ ಆಸ್ಪತ್ರೆ ವೈದ್ಯರು ಕೆಲವು ತಪ್ಪುಗಳನ್ನು ಮರಣೋತ್ತರ ಪರೀಕ್ಷೆ ಮಾಡುವ ವೇಳೆ ಮಾಡಿದ್ದಾರೆ ಎಂದು ಏಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಅದೇ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮರಣೋತ್ತರ ಪರೀಕ್ಷೆಯ ವೇಳೆ ಸತ್ಯವನ್ನು ತಿರುಚಲಾಗಿದೆ ಎಂದು ಹೇಳಿರುವುದು ಸುಶಾಂತ್ ಸಿಂಗ್ ಸಾವಿನ ಬಗ್ಗೆ ಇನ್ನಷ್ಟು ಅನುಮಾನವನ್ನು ಹುಟ್ಟುಹಾಕಿದೆ.

    English summary
    Cooper hospital staff reveals shocking information about Sushant Singh Rajput's postmortem. He said Sushant's body has some injury marks.
    Monday, December 26, 2022, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X