For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣೌತ್ ಹೊಸ ಸಿನಿಮಾ ಆರಂಭಕ್ಕೆ ಮುನ್ನವೇ ವಿಘ್ನ!

  |

  ಈ ಹಿಂದೆ ಕಂಗನಾ ರಣೌತ್ ನಟಿಸಿದ್ದ ಬಾಲಿವುಡ್‌ ಸಿನಿಮಾ 'ಮಣಿಕರ್ಣಿಕಾ; ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾದ ಮುಂದುವರೆದ ಭಾಗದಲ್ಲಿ ತಾವೇ ನಟಿಸುವುದಾಗಿ ಕೆಲವು ದಿನಗಳ ಹಿಂದಷ್ಟೆ ಕಂಗನಾ ಹೇಳಿದ್ದರು. 'ಮಣಿಕರ್ಣಿಕಾ; ದಿ ಲಿಜೆಂಡ್ ಆಫ್ ದಿದ್ದಾ' ಎಂದು ಸಿನಿಮಾಕ್ಕೆ ಹೆಸರಿಡಲಾಗಿತ್ತು.

  ಆದರೆ ಈ ಸಿನಿಮಾ ಪ್ರಾರಂಭವಾಗುವ ಮೊದಲೇ ಸಿನಿಮಾಕ್ಕೆ ವಿಘ್ನ ಎದುರಾಗಿದೆ. ಬರಹಗಾರರೊಬ್ಬರು, ಕಂಗನಾ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

  ಕಂಗನಾ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಬರಹಗಾರ ಆಶಿಶ್ ಕೌಲ್, ಕಂಗನಾ ರಣೌತ್ ತಮ್ಮ ಕತೆಯನ್ನು ಕದ್ದಿದ್ದಾರೆ' ಎಂದು ಆರೋಪಿಸಿದ್ದಾರೆ.

  'ದಿದ್ದಾ; ಕಶ್ಮೀರ್‌ ಕಿ ಯೋಧಾ ರಾಣಿ' ಹೆಸರಿನ ಪುಸ್ತಕ ಬರೆದಿರುವ ಆಶಿಶ್, ರಾಣಿ ದಿದ್ದಾ ಬಗೆಗೆ ಆರು ವರ್ಷ ಸಂಶೋಧನೆ ಮಾಡಿ ಕತೆ ಬರೆದಿದ್ದೇನೆ. ಕಂಗನಾ ತಮ್ಮ ಅನುಮತಿ ಇಲ್ಲದೆ ರಾಣಿ ದಿದ್ದಾ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ದಿದ್ದಾಳ ಕತೆಯ ಮೇಲಿನ ಹಕ್ಕು ನನ್ನ ಬಳಿ ಮಾತ್ರವೇ ಇದೆ' ಎಂದಿದ್ದಾರೆ ಬರಹಗಾರ ಆಶಿಶ್.

  ನಾನು, ನನ್ನ ಪುಸ್ತಕ 'ದಿದ್ದಾ; ಕಶ್ಮೀರ್‌ ಕಿ ಯೋಧಾ ರಾಣಿ' ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಂತೆ ಕಂಗನಾ ರಣೌತ್‌ಗೆ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಇ-ಮೇಲ್ ಮಾಡಿದ್ದೆ. ಇ-ಮೇಲ್‌ನಲ್ಲಿಯೇ ರಾಣಿ ದಿದ್ದಾಳ ಸಾಹಸಗಾಥೆಗಲ ಬಗ್ಗೆ ವಿವರಣೆ ನೀಡಿದ್ದೆ, ನನಗೆ ಪ್ರತಿಕ್ರಿಯೆ ಬರಲಿಲ್ಲ, ಆದರೆ ಈಗ ನಾನೇ ಬರೆದಿರುವ ಕತೆಯನ್ನು ಸಿನಿಮಾ ಮಾಡುವುದಾಗಿ ಕಂಗನಾ ಘೋಷಿಸಿದ್ದಾರೆ ಎಂದಿದ್ದಾರೆ ಆಶಿಶ್.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

  ಆರು ವರ್ಷ ನಾನು ಹಲವು ಜಾಗಗಳಿಗೆ ಸುತ್ತಿ ಸಂಶೋಧನೆ ನಡೆಸಿ, ದಾಖಲೆಗಳನ್ನು ಕಲೆ ಹಾಕಿ ಪುಸ್ತಕ ಬರೆದಿದ್ದೇನೆ. ಆದರೆ ಕಂಗನಾ ನನ್ನ ಕತೆಯನ್ನು ನನ್ನ ಅನುಮತಿ ಇಲ್ಲದೆ ಸಿನಿಮಾ ಮಾಡುವುದಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ ಆಶಿಶ್.

  English summary
  Writer Ashish Kaul alleged that Kangana Ranaut took his story without consulting him. He said Kangana violated copyrights act.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X