For Quick Alerts
  ALLOW NOTIFICATIONS  
  For Daily Alerts

  ತೌಕ್ತೆ ಚಂಡಮಾರುತ ಹೊಡೆತಕ್ಕೆ ಸಿಲುಕಿದ ಪ್ರಸಿದ್ಧ ಧಾರಾವಾಹಿ ತಂಡ

  |

  ತೌಕ್ತೆ ಚಂಡಮಾರುತದಿಂದ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಭಾರಿ ಮಳೆಯಾಗುತ್ತಿದೆ. ಈಗಾಗಲೇ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ.

  ಭಾರಿ ಮಳೆಯ ನಡುವೆಯೂ ಚಿತ್ರೀಕರಣ ಮಾಡುತ್ತಿದ್ದ ಹಿಂದಿಯ ಪ್ರಸಿದ್ಧ ಧಾರಾವಾಹಿ ಸೆಟ್ ಚಂಡಮಾರುತದ ಹೊಡೆತಕ್ಕೆ ಹಾನಿಗೊಳಗಾಗಿದೆ. ಗುಜರಾತ್ ನ ಸಿಲ್ವಾಸ್ಸಾದಲ್ಲಿ ಅನೇಕ ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದೆ. ಹಿಂದೆಯ ಪ್ರಸಿದ್ಧ ಹೇ ರಿಷ್ತಾ ಕ್ಯಾ ಕೆಹಲಾತಾ ಹೇ ಧಾರಾವಾಹಿ ಚಿತ್ರೀಕರಣ ಕೂಡ ಗುಜರಾತ್ ನಲ್ಲಿ ನಡೆಯುತ್ತಿದ್ದು, ಚಂಡಮಾರುತದ ಪರಿಣಾಮ ಸೆಟ್ ಹಾರಿಹೋಗಿದೆ.

  ಚಂಡಮಾರುತದ ಹೊಡೆತಕ್ಕೆ ಮುಳುಗಿದ ಅಮಿತಾಬ್ ಬಚ್ಚನ್ ಕಚೇರಿಚಂಡಮಾರುತದ ಹೊಡೆತಕ್ಕೆ ಮುಳುಗಿದ ಅಮಿತಾಬ್ ಬಚ್ಚನ್ ಕಚೇರಿ

  ಸೆಟ್ ನಲ್ಲಿ ಹಾಕಿದ್ದ ಕುರ್ಚಿ ಮತ್ತು ಚಿತ್ರೀಕರಣದ ಪ್ರಾಪರ್ಟಿ ಗಾಳಿ ಮಳೆಯಿಂದ ಉರಳಿ ಬಿದ್ದಿವೆ. ಸಿಬ್ಬಂದಿ ಕ್ಯಾಮರಾ ಮತ್ತು ದುಬಾರಿ ವಸ್ತುಗಳನ್ನು ಜೋಪಾನ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಗುಜರಾತ್ ನ ರೆಸಾರ್ಟ್ ಒಂದರಲ್ಲಿ ಚಿತ್ರೀಕರಣ ಮಾಡುತ್ತಿದ್ದು, ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಮುನ್ಸೂಚನೆ ಇದ್ದಿದ್ದರಿಂದ ರೆಸಾರ್ಟ್ ಒಳಗೆ ಚಿತ್ರೀಕರಣ ಮಾಡಲು ತಂಡ ಪ್ಲಾನ್ ಮಾಡಿದೆ. ಆದರೆ ಕೆಲವು ದೃಶ್ಯಗಳನ್ನು ಮಾತ್ರ ಹೊರಾಂಗಣದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ತಕ್ಷಣ ಎಲ್ಲಾ ಎಚ್ಚೆತ್ತುಕೊಂಡು ಉಪಕರಣಗಳನ್ನು ಜೋಪಾನ ಮಾಡಿರುವುದಾಗಿ ಧಾರಾವಾಹಿ ತಂಡ ತಿಳಿಸಿದೆ.

  ಎಲ್ಲರಿಗೂ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ ಎಂದ ಕುರಿ ಪ್ರತಾಪ್

  ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಚಂಡಮಾರುತದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾಮಾಜಿಕ ಜಾಲತಾಣದ ಮೂಲಕ ಕೇಳಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಭಾರಿ ಮಳೆಯಾಗುತ್ತಿದ್ದು ಅಮಿತಾಬ್ ಬಚ್ಚನ್ ಜನಕ್ ಕಚೇರಿ ಪ್ರವಾಹದಲ್ಲಿ ಮುಳುಗಿರುವುದಾಗಿ ಹೇಳಿದ್ದಾರೆ. ಸಿಬ್ಬಂದಿ ಕಚೇರಿ ಸರಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅಮಿತಾಬ್ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

  English summary
  Cyclone Tauktae effect for Yeh Rishta Kya Kehlata Hai sets in Gujarat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X