»   » ವರ್ಲ್ಡ್ ವೈಡ್ 5ನೇ ಸ್ಥಾನ ಪಡೆದ ಅಮೀರ್ ಖಾನ್ 'ದಂಗಲ್'

ವರ್ಲ್ಡ್ ವೈಡ್ 5ನೇ ಸ್ಥಾನ ಪಡೆದ ಅಮೀರ್ ಖಾನ್ 'ದಂಗಲ್'

Posted By:
Subscribe to Filmibeat Kannada

ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ದಾಖಲೆ ಮೇಲೆ ದಾಖಲೆಗಳನ್ನ ಬರೆಯುತ್ತಲೇ ಇದೆ. ಕಳೆದ ತಿಂಗಳಿನಲ್ಲಷ್ಟೇ ಚೀನಾದಲ್ಲಿ ರಿ-ರಿಲೀಸ್ ಆಗಿದ್ದ 'ದಂಗಲ್' ಈಗ ವಿಶ್ವ ಸಿನಿಲೋಕದಲ್ಲಿ ಹೊಸ ದಾಖಲೆ ನಿರ್ಮಿಸಿದೆ. 'ಬಾಹುಬಲಿ'ಯ 1700 ಕೋಟಿಯನ್ನ ಹಿಂದಿಕ್ಕಿ ಅತಿ ಹೆಚ್ಚು ಗಳಿಸಿದ ಭಾರತದ ಸಿನಿಮಾ ಎನಿಸಿಕೊಂಡಿರುವ 'ದಂಗಲ್' ಈಗ ವಿಶ್ವದಲ್ಲಿ 5ನೇ ಚಿತ್ರವಾಗಿದೆ.

ಪ್ರಭಾಸ್ ಮತ್ತು ಅಮೀರ್ ನಡುವೆ ಮೆಗಾಫೈಟ್.! ಭಾರತದ ನಂ.1 ನಟ ಯಾರು?

ಹೌದು, 'ದಂಗಲ್' ಚಿತ್ರ ಭಾರತವೂ ಸೇರಿ ವಿಶ್ವದಾದ್ಯಂತ ಸುಮಾರು 301 ಮಿಲಿಯನ್ ಅಮೆರಿಕನ್ ಡಾಲರ್ (1924 ಕೋಟಿ ರು.) ಗಳಿಸಿದೆ. ಈ ಮೂಲಕ ವಿಶ್ವದಲ್ಲಿ ಇಂಗ್ಲೀಷೇತರ ಚಿತ್ರಗಳ ಗಳಿಕೆಯಲ್ಲಿ ದಂಗಲ್ 5ನೇ ಸ್ಥಾನ ಪಡೆದುಕೊಂಡಿದೆ.

 Dangal Becomes 5th Highest Non English

ಈವರೆಗೆ, ವಿಶ್ವಮಟ್ಟದಲ್ಲಿ ಹೀಗೆ ಭಾರೀ ಸದ್ದು ಮಾಡಿದ ಚಿತ್ರಗಳೆಂದರೆ, ಚೀನಾದ 'ದ ಮೆರ್ಮೇಯ್ಡ್' (533 ಮಿಲಿಯನ್ ಅಮೆರಿಕನ್ ಡಾಲರ್ - 3425 ಕೋಟಿ ) ಹಾಗೂ 'ಮಾನ್ ಸ್ಟರ್ ಹಂಟ್' (386 ಮಿಲಿಯನ್ ಅಮೆರಿಕನ್ ಡಾಲರ್ - 2481 ಕೋಟಿ ರು.), ಫ್ರಾನ್ಸ್ ನ 'ದ ಇನ್ ಟ ಚಬಲ್ಸ್' (427 ಮಿಲಿಯನ್ ಅಮೆರಿಕನ್ ಡಾಲರ್ - 2744 ಕೋಟಿ ರು.) ಹಾಗೂ ಜಪಾನ್ ನ 'ಯುವರ್ ನೇಮ್' (354 ಮಿಲಿಯನ್ ಅಮೆರಿಕನ್ ಡಾಲರ್ - 2275 ಕೋಟಿ ರು.). ಇದೀಗ ಈ ಚಿತ್ರಗಳ ಸಾಲಿಗೆ 'ದಂಗಲ್' ಕೂಡಾ ಸೇರಿದೆ.

ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ.1', ಹಳೆ ದಾಖಲೆಗಳೆಲ್ಲ ಪುಡಿ.. ಪುಡಿ!

ಅಂದ್ಹಾಗೆ, 'ದಂಗಲ್' ಸಿನಿಮಾ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಜೀವನಾಧಾರಿತ ಕಥೆ. ನಿತಿಶ್ ತಿವಾರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅಮೀರ್ ಖಾನ್ ಜೊತೆಯಲ್ಲಿ ಸಾಕ್ಷಿ ತನ್ವೀರ್, ಫಾತಿಮಾ ಸನಾ ಶೇಖ್, ಸನ್ಯಾ ಮಲ್ಹೋತ್ರ ಸೇರಿದಂತೆ ಹಲವರು ಅಭಿನಯಿಸಿದ್ದರು.

English summary
Amir Khan Starrer Dangal is now the 5th highest grossing non-English film ever. (At Rs 1930 cr)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada