twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಮಾನ್ ಬಳಿಕ ಈಗ ಬಾಲಿವುಡ್ ನಟಿಯ ಮನೆಗೆ ಬಂತು ಬೆದರಿಕೆ ಪತ್ರ

    |

    ಸಲ್ಮಾನ್ ಖಾನ್‌ಗೆ ಭೂಗತ ಜಗತ್ತಿನ ಗ್ಯಾಂಗ್ ಒಂದು ಕೊಲೆ ಬೆದರಿಕೆ ಹಾಕಿರುವ ಬೆನ್ನಲ್ಲೆ ಇದೀಗ ಬಾಲಿವುಡ್‌ನ ನಟಿಯೊಬ್ಬರಿಗೂ ಅದೇ ಮಾದರಿಯಲ್ಲಿ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ.

    ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಾಸವಿರುವ ಮುಂಬೈನ ವರ್ಸೋವಾದ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರವೊಂದು ಬಂದಿದ್ದು, ಪತ್ರದಲ್ಲಿ ಯಾರಿಂದ ಬೆದರಿಕೆ ಹಾಕಲಾಗಿದೆ ಎಂಬ ಅಂಶ ನಮೂದಾಗಿಲ್ಲ. ನಟಿಯು ಬೆದರಿಕೆ ಪತ್ರ ಬಂದಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಪತ್ರದಲ್ಲಿ, 'ಈ ದೇಶದ ಯುವಕರು ವೀರ ಸಾವರ್ಕರ್ ಬಗೆಗಿನ ಅವಹೇಳನವನ್ನು ಸಹಿಸುವುದಿಲ್ಲ'' ಎಂದು ಬರೆಯಲಾಗಿದೆ. ಸಾರ್ವಕರ್ ಬಗ್ಗೆ ಅವಹೇಳನ ಮಾಡಿದವರನ್ನು ಬಿಡುವುದಿಲ್ಲ ಎಂದು ಎಂಬರ್ಥದಲ್ಲಿ ಈ ಪತ್ರ ಇದ್ದು, ಪತ್ರವನ್ನು ಹಿಂದಿಯಲ್ಲಿ ಬರೆಯಲಾಗಿದೆ.

    Death Threat To Bollywood Actress Swara Bhaskar Over Comment About Veer Sawarkar

    ನಟಿ ಸ್ವರಾ ಭಾಸ್ಕರ್ ಆರಂಭದಿಂದಲೂ ಆರ್‌ಎಸ್‌ಎಸ್, ಹಿಂದೂ ಮೂಲಭೂತವಾದಿತನ, ಬಿಜೆಪಿಯ ಕೆಲವು ನಡೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಸಾವರ್ಕರ್ ಬಗ್ಗೆಯೂ ಕೆಲವು ಟೀಕೆಗಳನ್ನು ಸ್ವರಾ ಭಾಸ್ಕರ್ ಮಾಡಿದ್ದರು. ಅದೇ ಕಾರಣದಿಂದ ಈಗ ಸ್ವರಾ ಅವರಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಗುತ್ತಿದೆ.

    ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಸ್ವರಾ ಭಾಸ್ಕರ್‌ ಈ ಬಗ್ಗೆ ದೂರು ನೀಡಿದ್ದು, ದೂರಿನ ಬಗ್ಗೆ ಮಾತನಾಡಿರುವ ಅಲ್ಲಿನ ಅಧಿಕಾರಿ, ''ಅನಾಮಿಕರಿಂದ ಕೃತ್ಯ ಎಂದು ದೂರು ದಾಖಲಿಸಿಕೊಳ್ಳಲಾಗಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ'' ಎಂದಿದ್ದಾರೆ.

    ಸ್ವರಾ ಭಾಸ್ಕರ್‌ ವಿರುದ್ಧ ಕೊಲೆ ಬೆದರಿಕೆ ಬರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಸ್ವರಾ ವಿರುದ್ಧ ಕೊಲೆ, ಅತ್ಯಾಚಾರ ಬೆದರಿಕೆಗಳು ಬಂದಿವೆ. ಆದರೆ ಈ ಬಾರಿ ಪತ್ರದ ಮೂಲಕ ಬೆದರಕೆ ಹಾಕಲಾಗಿದೆ.

    ಜೂನ್ 05 ರಂದು ಸಲ್ಮಾನ್ ಖಾನ್‌ಗೆ ಭೂಗತ ಜಗತ್ತಿಗೆ ಸೇರಿದ ಕೆಲವು ವ್ಯಕ್ತಿಗಳು ಇದೇ ಮಾದರಿಯಲ್ಲಿ ಪತ್ರ ಮುಖೇನ ಬೆದರಿಕೆ ಒಡ್ಡಿದ್ದರು. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಪ್ರತಿ ದಿನ ಜಾಗಿಂಗ್ ಮುಗಿಸಿ ಕುಳಿತುಕೊಳ್ಳುವ ಜಾಗದಲ್ಲಿ ಬೆದರಿಕೆ ಪತ್ರ ಇಡಲಾಗಿತ್ತು. ಪತ್ರದಲ್ಲಿ ''ಸಲೀಂ ಖಾನ್, ಸಲ್ಮಾನ್ ಖಾನ್‌ಗೆ ಆದಷ್ಟು ಬೇಗ ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ'' ಎಂದು ಬರೆದಿತ್ತು. ಪತ್ರದಲ್ಲಿ 'ಎಲ್‌.ಬಿ' ಹಾಗೂ 'ಜಿ.ಬಿ' ಎಂಬ ಅಕ್ಷರಗಳನ್ನು ಸಹ ಬರೆಯಲಾಗಿತ್ತು. ಎಲ್‌.ಬಿ ಎಂದರೆ ಲಾರೆನ್ಸ್ ಬಿಷ್ಣೋಯಿ ಹಾಗೂ ಜಿಬಿ ಎಂದರೆ ಗೋಲ್ಡಿ ಬ್ರಾರ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಗ್ಯಾಂಗ್‌ಸ್ಟರ್‌ಗಳಾಗಿದ್ದಾರೆ.

    English summary
    Death threat to Bollywood actress Swara Bhaskar over comment about Veer Sawarkar. She gave complaint at Varsova police station Mumbai.
    Thursday, June 30, 2022, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X