For Quick Alerts
  ALLOW NOTIFICATIONS  
  For Daily Alerts

  ಈ ತರ ಕಂಡಿಷನ್ ಹಾಕಿದ್ರೆ ದೀಪಿಕಾ ಜೊತೆ ಯಾರ್ ಸಿನಿಮಾ ಮಾಡ್ತಾರೆ.?

  By Bharath Kumar
  |

  ಬಾಲಿವುಡ್ ಲೋಕದ ಕ್ವೀನ್ ಆಗಿರುವ ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡ್ಬೇಕಂದ್ರೆ ನಿರ್ದೇಶಕರಿಗೆ ಎರಡು ಗುಂಡಿಗೆ ಬೇಕು. ಯಾಕಂದ್ರೆ, ಸದ್ಯ, ದೀಪಿಕಾ ಹಾಕೋ ಕಂಡಿಷನ್ ಗಳೇ ಆಗಿರುತ್ತೆ.

  ಚೊಚ್ಚಲ ಚಿತ್ರದಲ್ಲೇ ಶಾರೂಖ್ ಖಾನ್ ಜೊತೆ ಅಭಿನಯಿಸುವುದಕ್ಕೆ ಅವಕಾಶ ಸಿಕ್ತು. ನೋಡು ನೋಡುತ್ತಲೇ ಉಳಿದ ನಾಯಕಿಯರನ್ನ ಹಿಂದಿಕ್ಕೆ ಬೆಳದು ನಿಂತರು. ಬಾಲಿವುಡ್ ಮಾತ್ರವಲ್ಲ, ಹಾಲಿವುಡ್ ನಲ್ಲೂ ಮೋಡಿ ಮಾಡಿದರು.

  ಅರೇ... RK ಟಾಟ್ಯೂ ಏನಾಯ್ತು ದೀಪಿಕಾ.?ಅರೇ... RK ಟಾಟ್ಯೂ ಏನಾಯ್ತು ದೀಪಿಕಾ.?

  ಈ ಮಧ್ಯೆ 'ರಾಮ್ ಲೀಲಾ', 'ಪದ್ಮಾವತ್' ಅಂತಹ ಸಿನಿಮಾಗಳಲ್ಲಿ ನಟಿಸಿ, ಹೀರೋಗಳಿಗಿಂತ ಬೇಡಿಕೆ ಹೆಚ್ಚಿಸಿಕೊಂಡರು. ಇದರ ಪರಿಣಾಮ ಈಗ ದೀಪಿಕಾ ಪಡುಕೋಣೆ ನಿರ್ದೇಶಕರ ಬಳಿ ಕಂಡಿಷನ್ ಹಾಕ್ತಿದ್ದಾರಂತೆ. ಈ ಕಂಡಿಷನ್ ಗಳನ್ನ ನೋಡಿ ಯುವ ನಿರ್ದೇಶಕರು ಬೆಚ್ಚಿಬಿದ್ದಿದ್ದಾರೆ. ಹಾಗಿದ್ರೆ, ದೀಪಿಕಾ ಬೇಡಿಕೆಗಳೇನು.?

  ಶಾರೂಖ್, ಸಲ್ಲು ರೀತಿ ಸಂಭಾವನೆ ಬೇಕಂತೆ.!

  ಶಾರೂಖ್, ಸಲ್ಲು ರೀತಿ ಸಂಭಾವನೆ ಬೇಕಂತೆ.!

  ಈಗಾಗಲೇ ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ದೀಪಿಕಾ ಪಡುಕೋಣೆ ಎನ್ನುವುದ್ರಲ್ಲಿ ಯಾವುದೇ ಸಂಶಯವಿಲ್ಲ. ಹೀಗಿದ್ದರೂ, ಬಾಲಿವುಡ್ ಬಾಕ್ಸ್ ಸುಲ್ತಾನರು ಎನಿಸಿಕೊಂಡಿರುವ ಶಾರೂಖ್ ಮತ್ತು ಸಲ್ಮಾನ್ ಖಾನ್ ರೀತಿಯಲ್ಲಿ ಸಂಭಾವನೆ ನೀಡಿ ಎನ್ನುತ್ತಿದ್ದಾರಂತೆ.

  ಸಲ್ಲು-ಶಾರೂಖ್ ಸಂಭಾವನೆ ಎಷ್ಟು.?

  ಸಲ್ಲು-ಶಾರೂಖ್ ಸಂಭಾವನೆ ಎಷ್ಟು.?

  ಸದ್ಯ, ಸಲ್ಮಾನ್ ಖಾನ್ ಬಿ-ಟೌನ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ತದ ನಂತರ ಶಾರೂಖ್ ಹೆಚ್ಚು ಸಂಭಾವನೆ ತೆಗೆದುಕೊಳ್ತಾರೆ. ಈ ನಟರು ಒಂದು ಸಿನಿಮಾಗೆ ಸುಮಾರು 40 ರಿಂದ 50 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು 'ಪದ್ಮಾವತ್' ಚಿತ್ರಕ್ಕಾಗಿ ದೀಪಿಕಾ 10 ಕೋಟಿ ಪಡೆದಿದ್ದರಂತೆ. ಹೀಗಿದ್ದರೂ, ಅವರಷ್ಟೆ ಕೊಡಿ ಎನ್ನುತ್ತಿದ್ದಾರೆಂದು ಯುವ ನಿರ್ದೇಶಕರು ಹೇಳಿಕೊಂಡಿದ್ದಾರೆ.

  ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.!ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.!

  ದೀಪಿಕಾ ಮೈಂಡ್ ಬದಲಾಗಿದೆ

  ದೀಪಿಕಾ ಮೈಂಡ್ ಬದಲಾಗಿದೆ

  ''ಪದ್ಮಾವತ್' ಚಿತ್ರದ ನಂತರ ದೀಪಿಕಾ ಅವರ ದೃಷ್ಟಿಕೋನ ಬದಲಾಗಿದೆ. ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮಾತ್ರ ದೀಪಿಕಾ ಮಾನ್ಯತೆ ಕೊಡ್ತಾರಂತೆ. ನಾಯಕಿ ಪ್ರಧಾನವಾದ ಕಾದಂಬರಿ ಆಧರಿತ ಕಥೆಗಳೊಂದಿಗೆ ಬಂದಾಗ ಮಾತ್ರ ಆಧ್ಯತೆ ಕೊಡ್ತಾರೆ. ಸ್ಕ್ರಿಪ್ಟ್ ಮೇಲೆ ಹಿಡಿತ ಹೊಂದಲು ಬಯಸುತ್ತಾರೆ ಎಂದು ಯುವ ನಿರ್ದೇಶಕನೊಬ್ಬ ಆರೋಪಿಸಿದ್ದಾನೆ.

  ಕಂಗನಾ ಮಾದರಿಯಲ್ಲಿ ದೀಪಿಕಾ

  ಕಂಗನಾ ಮಾದರಿಯಲ್ಲಿ ದೀಪಿಕಾ

  ಈ ಹಿಂದೆ ಕೇಳಿದಂತೆ ಸ್ಕ್ರಿಪ್ಟ್ ಮೇಲೆ ಹಿಡಿತ ಮತ್ತು ನಿಯಂತ್ರಣ ಹೊಂದುವ ನಟಿಯರಲ್ಲಿ ಕಂಗನಾ ಅವರು ಹೆಸರು ಮೊದಲ ಬರುತ್ತೆ. ಇತ್ತೀಚಿಗೆ ದೀಪಿಕಾ ಪಡುಕೋಣೆ ಕೂಡ ಅವರಂತಯೇ ಸಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಂಗನಾ ಅಭಿನಯದ 'ರಂಗೋನ್' ಮತ್ತು 'ಸಿಮ್ರಾನ್' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಆಗಿಲಿಲ್ಲ.

  ದೀಪಿಕಾ-ಅನುಷ್ಕಾ ಮುನಿಸು ಮುಗಿತಾ.? ಡಿಪ್ಪಿಗೆ ಅನುಷ್ಕಾ ಮಾಡಿದ ಕಾಮೆಂಟ್.?ದೀಪಿಕಾ-ಅನುಷ್ಕಾ ಮುನಿಸು ಮುಗಿತಾ.? ಡಿಪ್ಪಿಗೆ ಅನುಷ್ಕಾ ಮಾಡಿದ ಕಾಮೆಂಟ್.?

  ದೀಪಿಕಾ ಮುಂದಿನ ಸಿನಿಮಾ ವಿಳಂಬ

  ದೀಪಿಕಾ ಮುಂದಿನ ಸಿನಿಮಾ ವಿಳಂಬ

  ಸದ್ಯ, ಸಪ್ನ ದೀದಿ ಅವರ ಬಗ್ಗೆ ತಯಾರಾಗಲಿರುವ ಒಂದು ಬಯೋಪಿಕ್ ಸಿನಿಮಾಗೆ ಮಾತ್ರ ಸಹಿ ಮಾಡಿದ್ದಾರೆ. ಆದ್ರೆ, ಇನ್ನು ಶುರುವಾಗಿಲ್ಲ. ಯಾಕಂದ್ರೆ, ಈ ಚಿತ್ರದಲ್ಲಿ ಅಭಿನಯಿಸಬೇಕಿರುವ ನಟ ಇರ್ಫಾನ್ ಖಾನ್ ಅನಾರೋಗ್ಯ ಹಿನ್ನಲೆ ವಿದೇಶಕ್ಕೆ ಹೋಗಿದ್ದಾರೆ. ಈ ಮಧ್ಯೆ ದೀಪಿಕಾ ಮತ್ಯಾವ ಸಿನಿಮಾವನ್ನ ಕೂಡ ಒಪ್ಪಲಿಲ್ಲ.

  ಮದುವೆನಾ.? ಹಾಲಿವುಡ್ ಸಿನಿಮಾನಾ.?

  ಮದುವೆನಾ.? ಹಾಲಿವುಡ್ ಸಿನಿಮಾನಾ.?

  ಈ ಮಧ್ಯೆ ನಟ ರಣ್ವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಹಾಲಿವುಡ್ ‍‍‍'xxx4' ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ.

  ಸ್ವಭಾವ ಬದಲಿಸಿಕೊಳ್ಳಬೇಕಿದೆ

  ಸ್ವಭಾವ ಬದಲಿಸಿಕೊಳ್ಳಬೇಕಿದೆ

  ದೀಪಿಕಾ ಪಡುಕೋಣೆ ಅವರು ತಮ್ಮ ಸ್ವಭಾವವನ್ನ ಬದಲಿಸಿಕೊಳ್ಳಬೇಕಿದೆ ಎಂದು ಬಾಲಿವುಡ್ ನ ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವ ಮನಸ್ಸು ಮಾಡಬೇಕು. ಹೊಸ ನಟರ ಜೊತೆ ದೀಪಿಕಾ ಅವರನ್ನ ನೋಡುವ ಬಯಕೆ ಅಭಿಮಾನಿಗಳಿಗೆ ಇರುತ್ತೆ ಎಂದು ಬಾಲಿವುಡ್ ಹೇಳುತ್ತಿದೆ.

  English summary
  Deepika Padukone Asks To Be Paid Like Shahrukh khan & Salman khan? A Director Reveals Her Unacceptable Demands.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X