»   » 'ಮೈ ಚಾಯ್ಸ್' ಬಗ್ಗೆ ಬಾಯ್ಬಿಟ್ಟ ದೀಪಿಕಾ ಪಡುಕೋಣೆ

'ಮೈ ಚಾಯ್ಸ್' ಬಗ್ಗೆ ಬಾಯ್ಬಿಟ್ಟ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಮಹಿಳಾ ಸಬಲೀಕರಣದ ಬಗ್ಗೆ ವೋಗ್ ಎಂಪವರ್ ಹೊರತಂದಿರುವ 'MyChoice' ವಿಡಿಯೋದ ವಿವಾದಾತ್ಮಕವಾಗಿದ್ದು ಗೊತ್ತೇ ಇದೆ. ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಈ ವಿಡಿಯೋ ಬಗ್ಗೆ ಮಹಿಳೆಯರಿಂದಲೂ ವಿರೋಧ ವ್ಯಕ್ತವಾಗಿತ್ತು. ನಾನು ಹೇಗೆ ಬದುಕಬೇಕು, ಯಾವ ರೀತಿಯ ಬಟ್ಟೆ ತೊಡಬೇಕು, ನನ್ನ ದೇಹ ಹೇಗಿರಬೇಕು ಎಂಬುದು ಸಂಪೂರ್ಣ ನನ್ನಿಷ್ಟದ ಪ್ರಕಾರವೇ ನಡೆಯುತ್ತದೆ. [ಮದುವೆಗೆ ಮುನ್ನ ಸೆಕ್ಸ್ ನನ್ನಿಷ್ಟ]

Deepika Padukone breaks silence on My Choice

ಮದುವೆಗೆ ಮುನ್ನ ಸೆಕ್ಸ್, ಮದುವೆ ಬಳಿಕ ಸೆಕ್ಸ್ ಎಂಬುದು ನನ್ನಿಷ್ಟ. ನನ್ನ ಮದುವೆ ನಾನು ಬಯಸಿದಂತೆ ನಡೆಯುವುದಷ್ಟೆ ಅಲ್ಲ, ನನ್ನ ಜೀವನವನ್ನು ಪುರುಷನೊಂದಿಗೆ ಅಥವಾ ಮಹಿಳೆಯ ಜೊತೆಗೆ ಹಂಚಿಕೊಳ್ಳಬೇಕೆ ಎಂಬುದು ನನ್ನಿಷ್ಟ ಎಂಬ ವಿಚಾರಗಳು ಹಲವರ ಅಸಹನೆಗೆ ಗುರಿಯಾಗಿದ್ದವು.

ಈ ಬಗ್ಗೆ ಇದೀಗ ಬಾಯ್ಬಿಟ್ಟಿರುವ ದೀಪಿಕಾ ಪಡುಕೋಣೆ, "ಮಹಿಳಾ ಸಬಲೀಕರಣದ ಬಗ್ಗೆ ನಾವು ಮಾಡಿದ ಸಣ್ಣ ಪ್ರಯತ್ನವನ್ನು ಅಭಿನಂದಿಸಿದವರಿಗೆ ಥ್ಯಾಂಕ್ಸ್ ಹಾಗೆಯೇ ಅದನ್ನು ವಿಮರ್ಶಿಸಿದವರನ್ನೂ ಗೌರವಿಸುತ್ತೇವೆ. ಮೈ ಚಾಯ್ಸ್ ವಿಡಿಯೋ ಮೂಲಕ ನಾವು ಹೇಳಬೇಕಾದ ವಿಷಯ ಎಲ್ಲರಿಗೂ ಸರಿಯಾಗಿ ರೀಚ್ ಆಗಲಿಲ್ಲ..."

"ಬಹಳಷ್ಟು ಮಂದಿಗೆ ನಮ್ಮ ಉದ್ದೇಶ ಏನು ಎಂಬುದು ಅರ್ಥವಾಗಲಿಲ್ಲ. ಹೀಗೆ ಮಾಡಿ ಎಂದು ಯಾರಿಗೂ ಹೇಳುತ್ತಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಇಷ್ಟದ ನಿರ್ಧಾರ ತೆಗೆದುಕೊಳ್ಳುವಂತೆ ಮಾತ್ರ ಹೇಳಿದ್ದೆವು" ಎಂದು ದೀಪಿಕಾ ಪಡುಕೋಣೆ ಈಗ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)

English summary
Check out: Deepika Padukone breaks her silence on ‘My Choice’ video.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada