»   » ಹುಚ್ಚು ಅಭಿಮಾನಿಯ ಪ್ರೀತಿಯಲ್ಲಿ ಬಿದ್ದ ದೀಪಿಕಾ ಪಡುಕೋಣೆ

ಹುಚ್ಚು ಅಭಿಮಾನಿಯ ಪ್ರೀತಿಯಲ್ಲಿ ಬಿದ್ದ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಸ್ಟಾರ್ ಗಳಿಗೆ ವಿಚಿತ್ರವಾದ ಅಭಿಮಾನಿಗಳಿರುತ್ತಾರೆ. ತಾವಿಷ್ಟ ಪಡುವ ಕಲಾವಿದರಿಗಾಗಿ ಪ್ರಾಣ ನೀಡುವುದಕ್ಕೂ ರೆಡಿ ಇರುತ್ತಾರೆ. ಬಾಲಿವುಡ್ ನ ಪದ್ಮಾವತಿಯ ಅಪ್ಪಟ್ಟ ಅಭಿಮಾನಿಗಳು ಮಾಡಿರುವ ಕೆಲಸಕ್ಕೆ ಸ್ವತಃ ದೀಪಿಕಾ ಪಡುಕೋಣೆಯೇ ಆ ಅಭಿಮಾನಿಗಳ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಡಿಂಪಿ ಪ್ರೀತಿ ಪಡೆಯಲು ಆ ಅಭಿಮಾನಿಗಳು ಮಾಡಿದ ಕೆಲಸ ಏನು ಅನ್ನೋದು ತಿಳಿದರೆ, ನೀವು ಕೂಡ ವಾವ್ಹ್ ಅಂತೀರ.

ಇತ್ತೀಚಿಗಷ್ಟೇ ನಟಿ ದೀಪಿಕಾ ಪಡುಕೋಣೆ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು. ಡಿಂಪಿ ಬರ್ತಡೇಗಾಗಿ ವಿದೇಶಕ್ಕೆ ಹಾರಿದ್ರು ಆದರೆ ಅರಬ್ ನ ಅಭಿಮಾನಿಗಳು ಅವರ ಹೆಸರಿನಲ್ಲಿ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿ ಎಂದು ಬೋರ್ ವೆಲ್ ತೆಗೆಸಿದ್ದಾರೆ. ಅರಬ್ ದೀಪಿಕಾ ಪಡುಕೋಣೆ ಅಭಿಮಾನಿ ಸಂಘದಿಂದ ಈ ಕೆಲಸ ಮಾಡಲಾಗಿದೆ.

'ಪದ್ಮಾವತ್' ಬಿಡುಗಡೆಗೆ ಸೆನ್ಸಾರ್ ಒಪ್ಪಿದ್ರು, ಸರ್ಕಾರ ಒಪ್ಪುತ್ತಿಲ್ಲ

Deepika padukone fans build a well for her birthday

ಜನರು ಬೋರ್ ವೆಲ್ ನಿಂದ ನೀರು ಪಡೆಯುತ್ತಿರುವ ಫೋಟೋವನ್ನ ದೀಪಿಕಾ ಟ್ವಿಟ್ಟರ್ ಗೆ ಅಭಿಮಾನಿಗಳು ಟ್ಯಾಗ್ ಮಾಡಿದ್ದಾರೆ. ಇದನ್ನ ನೋಡಿ ಖುಷಿ ಆಗಿರುವ ದೀಪಿಕಾ "ಇದು ನನ್ನ ಹುಟ್ಟುಹಬ್ಬದ ಅತ್ಯುತ್ತಮವಾದ ಉಡುಗೊರೆ. ನನ್ನ ಹೃದಯ ತುಂಬಿ ಬರುತ್ತಿದೆ. ಐ ಲವ್ ಯೂ ನಿಮ್ಮ ಅಭಿಮಾನದ ಬಗ್ಗೆ ಹೆಮ್ಮೆ ಆಗುತ್ತಿದೆ" ಎಂದು ಟ್ವಿಟ್ ಮಾಡಿದ್ದಾರೆ.

Deepika padukone fans build a well for her birthday

ಅರಬ್ ದೀಪಿಕಾ ಅಭಿಮಾನಿ ಸಂಘದ ಈ ಕೆಲಸಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಅಂದ್ಹಾಗೆ ದೀಪಿಕಾ ಅಭಿನಯದ ಪದ್ಮಾವತ್ ಸಿನಿಮಾ ಇದೇ ತಿಂಗಳ 25ಕ್ಕೆ ರಿಲೀಸ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

English summary
Bollywood actress Deepiaka padukone fans collected funds to build a well in her name in a grief stricken village. A fan club shared the picture on their twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X