For Quick Alerts
  ALLOW NOTIFICATIONS  
  For Daily Alerts

  ದೀಪಿಕಾಗೆ ಏನಾಗಿದೆ.? ಪತಿಯ ಹಾಗೆ 'ಫ್ಯಾಶನ್ ಜೋಕರ್' ಆಗ್ತಿರೋದು ಯಾಕೆ.?

  |

  ಬಾಲಿವುಡ್ ನಟ ರಣ್ವೀರ್ ಸಿಂಗ್ ರವರ ವಿಚಿತ್ರ ಫ್ಯಾಶನ್ ಸೆನ್ಸ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಎಲ್ಲೇ ಹೋದರೂ, ಚಿತ್ರ-ವಿಚಿತ್ರ ಉಡುಪು ತೊಡುವುದರಲ್ಲಿ ರಣ್ವೀರ್ ಸಿಂಗ್ ಎಕ್ಸ್ ಪರ್ಟ್. ಮೊನ್ನೆ ಮೊನ್ನೆಯಷ್ಟೇ ಏರ್ ಪೋರ್ಟ್ ನಲ್ಲಿ ರಣ್ವೀರ್ ಸಿಂಗ್ ಕಣ್ಣು ಕುಕ್ಕುವ ಜಾಕೆಟ್-ಪ್ಯಾಂಟ್ ತೊಟ್ಟು ಟ್ರೋಲ್ ಆಗಿದ್ದರು.

  ಇದೀಗ ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆಗೂ ಇದೇ ಪರಿಸ್ಥಿತಿ ಎದುರಾಗಿದೆ. ಫ್ಯಾಶನ್, ಉಡುಗೆ-ತೊಡುಗೆ ವಿಚಾರದಲ್ಲಿ ದೀಪಿಕಾ ತುಂಬಾ ಚ್ಯೂಸಿ. ಹೀಗಿದ್ದರೂ, ಶೈನಿ ಜಾಕೆಟ್ ತೊಟ್ಟ ಕಾರಣಕ್ಕೆ ದೀಪಿಕಾ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

  ಕಪ್ಪು ಬಣ್ಣದ ಕ್ರಾಪ್ಡ್ ಟಾಪ್, ಜೆಗ್ಗಿಂಗ್, ಸ್ನೀಕರ್ಸ್ ಜೊತೆಗೆ ನಟಿ ದೀಪಿಕಾ ಪಡುಕೋಣೆ ಕಣ್ಣಿಗೆ ರಾಚುವ ಗೋಲ್ಡನ್ ಬಣ್ಣದ ಜಾಕೆಟ್ ಧರಿಸಿದ್ದರು. ಇದು ಫ್ಯಾಶನ್ ಪ್ರಿಯರಿಗೆ ಅಷ್ಟಾಗಿ ರುಚಿಸಿಲ್ಲ. ಹೀಗಾಗಿ ನೆಟ್ಟಿಗರು ದೀಪಿಕಾ ಕಾಲೆಳೆಯುತ್ತಿದ್ದಾರೆ.

  ಮತ್ತೆ ವಿಚಿತ್ರ ಉಡುಪು ತೊಟ್ಟ ರಣ್ವೀರ್ ಸಿಂಗ್: ಫ್ಯಾಶನ್ ಗೆ 'ಬಿಗ್ ಜೋಕರ್'.!ಮತ್ತೆ ವಿಚಿತ್ರ ಉಡುಪು ತೊಟ್ಟ ರಣ್ವೀರ್ ಸಿಂಗ್: ಫ್ಯಾಶನ್ ಗೆ 'ಬಿಗ್ ಜೋಕರ್'.!

  ''ರುಚಿಕರವಾದ ಚಾಕಲೇಟ್ ಗಳ ಮೇಲೂ ಪ್ರೀತಿ ತೋರಿಸಿ. ಚಾಕಲೇಟ್ ರಾಪರ್ ಗಳನ್ನು ರೀಸೈಕಲ್ ಮಾಡಿ ಧರಿಸಿ'', ''ಪತಿ-ಪತ್ನಿ ಇಬ್ಬರೂ ಯಾವ ಜೋಕರ್ ಗಳಿಗೂ ಕಮ್ಮಿ ಇಲ್ಲ'', ''ಇವರು ಪರ್ಫೆಕ್ಟ್ ಕಪಲ್. ಯಾಕಂದ್ರೆ ಇಬ್ಬರೂ ಜೋಕರ್ಸ್'' ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ''ಉಡುಗೆ ವಿಷ್ಯದಲ್ಲಿ ರಣ್ವೀರ್ ನ ಫಾಲೋ ಮಾಡಬೇಡಿ'' ಅಂತ ದೀಪಿಕಾ ಪಡುಕೋಣೆಗೆ ಸಲಹೆ ನೀಡುತ್ತಿದ್ದಾರೆ.

  ಅಂದ್ಹಾಗೆ, ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ.

  English summary
  Bollywood Actress Deepika Padukone gets trolled for wearing shiny gold jacket.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X