For Quick Alerts
  ALLOW NOTIFICATIONS  
  For Daily Alerts

  ಅಂತೂ-ಇಂತೂ ದೀಪಿಕಾ-ರಣ್ವೀರ್ ಮದುವೆ ಫೋಟೋ ಹೊರಬಿತ್ತು.!

  |

  ಇಟಲಿಯ ಲೇಕ್ ಕೋಮೋದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ವಿವಾಹ ಮಹೋತ್ಸವ ನಡೆದಿದೆ. ನಿನ್ನೆ ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆದರೆ, ಇಂದು ಸಿಂಧಿ ಸಂಪ್ರದಾಯದಂತೆ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ದೀಪಿಕಾ ಮೂಲತಃ ಕೊಂಕಣಿ. ಇನ್ನೂ ರಣ್ವೀರ್ ಸಿಂಗ್ 'ಸಿಖ್' ಸಮುದಾಯಕ್ಕೆ ಸೇರಿದವರು. ಹೀಗಾಗಿ, ಎರಡೂ ಸಂಪ್ರದಾಯಗಳಂತೆ ವಿವಾಹ ಶಾಸ್ತ್ರೋಕ್ತವಾಗಿ ನಡೆದಿದೆ.

  ಕುಟುಂಬಸ್ಥರು ಮತ್ತು ಆಪ್ತರು ಸೇರಿದಂತೆ ಕೇವಲ 40 ಮಂದಿ ಮಾತ್ರ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆಗೆ ಸಾಕ್ಷಿ ಆದರು. ಮದುವೆ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡದಂತೆ ಅತಿಥಿಗಳ ಬಳಿ ಮನವಿ ಮಾಡಲಾಗಿತ್ತು. ಇನ್ನೂ ಲೇಕ್ ಕೋಮೋ ಒಳಗೆ ಮಾಧ್ಯಮಗಳಿಗೆ ಪ್ರವೇಶ ನೀಡದ ಕಾರಣ ಇಲ್ಲಿಯವರೆಗೂ ಮದುವೆಯ ಫೋಟೋಗಳು ಬಹಿರಂಗ ಆಗಿರಲಿಲ್ಲ.

  ಆದ್ರೀಗ, ತಮ್ಮ ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ನವ ಜೋಡಿ ದೀಪಿಕಾ-ರಣ್ವೀರ್ ತಮ್ಮ ಬದುಕಿನ ಅಮೂಲ್ಯ ಕ್ಷಣದ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಮುಂದೆ ಓದಿರಿ...

  ದೀಪ್ವೀರ್ ಮದುವೆ ಫೋಟೋ

  ಮದುವೆ ಶಾಸ್ತ್ರಗಳು ಮುಕ್ತಾಯ ಆದ್ಮೇಲೆ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ವಿವಾಹದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

  ದೀಪ್ವೀರ್ ಮದುವೆ: ಪ್ಲೇನ್ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟ ವರ ರಣ್ವೀರ್

  ಹೇಗೆ ಕಾಣ್ತಿದ್ದಾರೆ ವಧು-ವರ.?

  ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಕೆಂಪು ಬಣ್ಣದ ಸೀರೆಯಲ್ಲಿ ವಧು ದೀಪಿಕಾ ಮಿಂಚಿದರೆ, ಬಳಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ವರ ರಣ್ವೀರ್ ಸಿಂಗ್ ಮಿನುಗಿದರು. ಇನ್ನೂ ಸಿಂಧಿ ಸಂಪ್ರದಾಯದಲ್ಲಿ ನಡೆದ ವಿವಾಹದಲ್ಲಿ ನವ ಜೋಡಿ ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿದರು.

  ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಅಡಿ ಇಟ್ಟ ದೀಪಿಕಾ-ರಣ್ವೀರ್

  ಶುಭಾಶಯಗಳ ಮಹಾಪೂರ

  ಶುಭಾಶಯಗಳ ಮಹಾಪೂರ

  ಸೋಷಿಯಲ್ ಮೀಡಿಯಾದಲ್ಲಿ ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನವ ಜೋಡಿಗೆ ಮನಸಾರೆ ವಿಶ್ ಮಾಡುತ್ತಿದ್ದಾರೆ.

  ಸಿಂಧಿ ಸಂಪ್ರದಾಯದಂತೆ ಇಂದು ಮದುವೆ ಆದ ದೀಪಿಕಾ-ರಣ್ವೀರ್

  ರಿಸೆಪ್ಷನ್ ಯಾವಾಗ.?

  ರಿಸೆಪ್ಷನ್ ಯಾವಾಗ.?

  ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮತ್ತು ನವೆಂಬರ್ 28 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ನಲ್ಲಿ ದೀಪಿಕಾ-ರಣ್ವೀರ್ ಆರತಕ್ಷತೆ ನಡೆಯಲಿದೆ.

  English summary
  Deepika Padukone and Ranveer Singh have taken their twitter accounts to reveal wedding photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X