For Quick Alerts
  ALLOW NOTIFICATIONS  
  For Daily Alerts

  ''ಎಕ್ಸ್ ಕ್ಯೂಸ್ ಮೀ, ಯಾರ್ರೀ ಹೇಳಿದ್ದು.? ಇದು ನನ್ನ ದುಡ್ಡು'' ಎಂದ ದೀಪಿಕಾ.!

  |

  ಬೆಂಗಳೂರು ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 10 ರಂದು 'ಚಪಾಕ್' ದೇಶದಾದ್ಯಂತ ರಿಲೀಸ್ ಆಗಲಿದೆ. 'ಚಪಾಕ್' ಚಿತ್ರದ ಪ್ರಚಾರ ಕಾರ್ಯದಲ್ಲಿ ಸದ್ಯ ದೀಪಿಕಾ ಪಡುಕೋಣೆ ತೊಡಗಿದ್ದಾರೆ.

  'ಚಪಾಕ್' ಚಿತ್ರದಲ್ಲಿ ಆಸಿಡ್ ಅಟ್ಯಾಕ್ ಸರ್ವೈವರ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಬರೀ ನಟನೆ ಮಾತ್ರ ಅಲ್ಲ. 'ಚಪಾಕ್' ಚಿತ್ರಕ್ಕೆ ದೀಪಿಕಾ ಪಡುಕೋಣೆ ಬಂಡವಾಳ ಕೂಡ ಹಾಕಿದ್ದಾರೆ. ಹೀಗಿರುವಾಗ, 'ಚಪಾಕ್' ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ದುಡ್ಡನ್ನ ಏನಾದರೂ ಬಳಸಿಕೊಂಡ್ರಾ.?

  ಹೀಗೊಂದು ಡೌಟ್ ಕೆಲ ಪತ್ರಕರ್ತರಿಗೆ ಕಾಡಿದೆ. ಹೀಗಾಗಿ, 'ಚಪಾಕ್' ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮದ ವೇಳೆ ಪತ್ರಕರ್ತರು-ಮಾಧ್ಯಮ ಮಿತ್ರರು ದೀಪಿಕಾ ಪಡುಕೋಣೆಗೆ 'ಆ' ಪ್ರಶ್ನೆಯನ್ನು ಕೇಳಿಯೇ ಬಿಟ್ಟರು.

  ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?

  ''ಚಪಾಕ್' ಚಿತ್ರಕ್ಕೆ ದೀಪಿಕಾ ನಿರ್ಮಾಪಕಿ. ಹಾಗ್ನೋಡಿದ್ರೆ, ಮನೆಯ ದುಡ್ಡನ್ನು ದೀಪಿಕಾ ಸಿನಿಮಾಗಾಗಿ ಬಳಸಿಕೊಂಡ್ರಾ.? ರಣ್ವೀರ್ ಬಳಿ ದೀಪಿಕಾ ದುಡ್ಡು ತೆಗೆದುಕೊಂಡ್ರಾ.?'' ಎಂಬ ಪ್ರಶ್ನೆ ಪ್ರೆಸ್ ಮತ್ತು ಮೀಡಿಯಾ ಕಡೆಯಿಂದ ತೂರಿ ಬರುತ್ತಿದ್ದ ಹಾಗೆ...

  ''ಎಕ್ಸ್ ಕ್ಯೂಸ್ ಮೀ.. ಯಾರ್ರೀ ಹೇಳಿದ್ದು.? ಇದು ನನ್ನ ದುಡ್ಡು'' ಎಂದು ಎದೆ ತಟ್ಟಿಕೊಂಡು ದೀಪಿಕಾ ಪಡುಕೋಣೆ ಹೇಳಿದರು. ಹಾಗೆ ದೀಪಿಕಾ ಹೇಳುತ್ತಿದ್ದಂತೆಯೇ, ಕಾರ್ಯಕ್ರಮದಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆ ಆಯಿತು.

  ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.! ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.!

  'ಚಪಾಕ್' ಜೊತೆಗೆ ರಣ್ವೀರ್ ಸಿಂಗ್ ಅಭಿನಯದ '83' ಚಿತ್ರಕ್ಕೂ ನಟಿ ದೀಪಿಕಾ ಪಡುಕೋಣೆ ಬಂಡವಾಳ ಹಾಕಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಜೀವನ ಚರಿತ್ರೆ ಆಧಾರಿತ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಕಪಿಲ್ ದೇವ್ ಆಗಿ ರಣ್ವೀರ್ ಸಿಂಗ್ ಆಕ್ಟ್ ಮಾಡುತ್ತಿದ್ದಾರೆ. ಕಪಿಲ್ ದೇವ್ ಪತ್ನಿ ರೋಮಿ ಭಾಟಿಯಾ ಆಗಿ ದೀಪಿಕಾ ಪಡುಕೋಣೆ ತೆರೆಮೇಲೆ ಮಿಂಚಲಿದ್ದಾರೆ.

  English summary
  Bollywood Actress Deepika Padukone reveals it is her money invested for Chhapaak.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X