»   » ಮದುವೆಗಾಗಿ ಬೆಂಗಳೂರಿನಲ್ಲಿ ಒಡವೆ ಶಾಪಿಂಗ್ ಮಾಡುತ್ತಿರುವ ದೀಪಿಕಾ ಪಡುಕೋಣೆ!

ಮದುವೆಗಾಗಿ ಬೆಂಗಳೂರಿನಲ್ಲಿ ಒಡವೆ ಶಾಪಿಂಗ್ ಮಾಡುತ್ತಿರುವ ದೀಪಿಕಾ ಪಡುಕೋಣೆ!

Posted By:
Subscribe to Filmibeat Kannada
ಮದುವೆಗಾಗಿ ಬೆಂಗಳೂರಿನಲ್ಲಿ ಒಡವೆ ಶಾಪಿಂಗ್ ಮಾಡುತ್ತಿರುವ ದೀಪಿಕಾ ಪಡುಕೋಣೆ! | Filmibeat Kannada

ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ವಿವಾಹ ಮಹೋತ್ಸವದ ನಂತರ ಸದ್ಯ ಎಲ್ಲರ ಕಣ್ಣು ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೇಲಿದೆ. ಇನ್ನು ಕೆಲವೇ ದಿನಗಳಲ್ಲಿ ರಣ್ವೀರ್-ದೀಪಿಕಾ ಮದುವೆ ನಡೆಯಲಿದೆ ಎಂಬ ಗುಸು ಗುಸು ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿದೆ.

ಮದುವೆ ಬಗ್ಗೆ ರಣ್ವೀರ್ ಆಗಲಿ, ದೀಪಿಕಾ ಆಗಲಿ ತುಟಿಕ್ ಪಿಟಿಕ್ ಅಂದಿಲ್ಲ. ಆದರೂ, ಮದುವೆ ತಯಾರಿ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ.

ಸ್ಪಾಟ್ ಬಾಯ್ ಎಂಬ ವೆಬ್ ತಾಣ ವರದಿ ಮಾಡಿರುವ ಪ್ರಕಾರ, ಶೂಟಿಂಗ್ ನಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ದೀಪಿಕಾ ಪಡುಕೋಣೆ, ತಮ್ಮ ಮದುವೆಗಾಗಿ ಬೆಂಗಳೂರಿನಲ್ಲಿ ಚಿನ್ನಾಭರಣಗಳ ಖರೀದಿಯಲ್ಲಿ ತೊಡಗಿದ್ದಾರೆ.

Deepika Padukone shops for Wedding Jewellery in Bengaluru

ಎಲ್ಲರಿಗೂ ಗೊತ್ತಿರುವ ಹಾಗೆ, ದೀಪಿಕಾ ಓದಿದ್ದು-ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಹೀಗಾಗಿ, ಬೆಂಗಳೂರಿನಲ್ಲೇ ತಮ್ಮ ತಾಯಿ ಹಾಗೂ ಸಹೋದರಿ ಜೊತೆಗೆ ಆಭರಣಗಳ ಶಾಪಿಂಗ್ ಮಾಡುತ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ.

ಮೂಲಗಳ ಪ್ರಕಾರ, ದೀಪಿಕಾ-ರಣ್ವೀರ್ ಮದುವೆಗೆ ದಿನಾಂಕ ನಿಗದಿ ಆಗಿದೆ. ಮದುವೆ ಬಳಿಕ ಬೆಂಗಳೂರಿನಲ್ಲೊಂದು ರಿಸೆಪ್ಷನ್ ಪಾರ್ಟಿ ನಡೆಸಲು ದೀಪಿಕಾ ಕುಟುಂಬ ನಿಶ್ಚಯಿಸಿದೆ.

ಹಾಗಾದ್ರೆ, ದೀಪಿಕಾ-ರಣ್ವೀರ್ ಮದುವೆ ಯಾವಾಗ.? ಅಂತ ನೀವು ಕೇಳಬಹುದು. ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಮದುವೆ ಬಗ್ಗೆ ಕುಟುಂಬಸ್ಥರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

English summary
According to the latest Grapevine, Bollywood Actress Deepika Padukone shops for Wedding Jewellery in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X