»   » 'ಪದ್ಮಾವತ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಧೂಳಿಪಟ: 200 ಕೋಟಿ ದಾಟಿದ ಕಲೆಕ್ಷನ್.!

'ಪದ್ಮಾವತ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಧೂಳಿಪಟ: 200 ಕೋಟಿ ದಾಟಿದ ಕಲೆಕ್ಷನ್.!

Posted By:
Subscribe to Filmibeat Kannada

ಉತ್ತರ ಭಾರತದ ಹಲವೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ, ಚಿತ್ರ ಬಿಡುಗಡೆ ವಿರುದ್ಧ ಪ್ರತಿಭಟನೆ ನಡೆದಿದ್ದರೂ, ಕೆಲವು ಕಡೆ ಪ್ರದರ್ಶನ ಕಾಣದೇ ಇದ್ದರೂ, ಬಾಕ್ಸ್ ಆಫೀಸ್ ನಲ್ಲಿ ಮಾತ್ರ 'ಪದ್ಮಾವತ್' ನಾಗಲೋಟ ಮುಂದುವರೆದಿದೆ. ಬಿಡುಗಡೆ ಆದ ಹದಿನಾಲ್ಕು ದಿನಗಳಲ್ಲಿ 'ಪದ್ಮಾವತ್' ಸಿನಿಮಾ ಬರೋಬ್ಬರಿ 225.50 ಕೋಟಿ ಕಲೆಕ್ಷನ್ ಮಾಡಿದೆ.

ಹಾಗ್ನೋಡಿದ್ರೆ, 'ಪದ್ಮಾವತ್' ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೆ, ಪ್ರೇಕ್ಷಕ ಮಹಾಪ್ರಭು ಮಾತ್ರ 'ಪದ್ಮಾವತ್' ಚಿತ್ರಕ್ಕೆ ಮಾರುಹೋಗಿದ್ದಾನೆ. ಪರಿಣಾಮ, ದಿನದಿಂದ ದಿನಕ್ಕೆ 'ಪದ್ಮಾವತ್' ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆ ಹೊರತು ಕಮ್ಮಿ ಮಾತ್ರ ಆಗುತ್ತಿಲ್ಲ. 'ಪದ್ಮಾವತ್' ಓಟಕ್ಕೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯ ಆಗುತ್ತಿಲ್ಲ.

ಜನವರಿ 25 ರಂದು ಬಿಡುಗಡೆ ಆದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಅಭಿನಯದ 'ಪದ್ಮಾವತ್' ಚಿತ್ರ ಭಾರತದಲ್ಲಿ ಮೊದಲ ದಿನವೇ 5.75 ಕೋಟಿ ಕಲೆಕ್ಷನ್ ಮಾಡಿತ್ತು.

'ಪದ್ಮಾವತ್' ಮೊದಲ ವಿಮರ್ಶೆ: ಮೂಕವಿಸ್ಮಿತಗೊಳಿಸುವ ಬನ್ಸಾಲಿ ದೃಶ್ಯಕಾವ್ಯ

Deepika Padukone starrer 'Padmaavat' collects Rs 225 crore in 14 days

ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ 'ಪದ್ಮಾವತ್' ಚಿತ್ರದ ಕಂಪ್ಲೀಟ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ ನೋಡಿ..

ಜನವರಿ 24 - 5 ಕೋಟಿ (ಪ್ರಿವ್ಯೂ)
ಜನವರಿ 25 - 19 ಕೋಟಿ
ಜನವರಿ 26 - 32 ಕೋಟಿ
ಜನವರಿ 27 - 27 ಕೋಟಿ
ಜನವರಿ 28 - 31 ಕೋಟಿ
ಜನವರಿ 29 - 15 ಕೋಟಿ
ಜನವರಿ 30 - 14 ಕೋಟಿ
ಜನವರಿ 31 - 12.50 ಕೋಟಿ
ಫೆಬ್ರವರಿ 1 - 11 ಕೋಟಿ
ಫೆಬ್ರವರಿ 2 - 10 ಕೋಟಿ
ಫೆಬ್ರವರಿ 3 - 16 ಕೋಟಿ
ಫೆಬ್ರವರಿ 4 - 20 ಕೋಟಿ
ಫೆಬ್ರವರಿ 5 - 7 ಕೋಟಿ
ಫೆಬ್ರವರಿ 6 - 6 ಕೋಟಿ

ಬರೀ ಭಾರತದಲ್ಲಿ ಮಾತ್ರ ಅಲ್ಲ, ವಿದೇಶದಲ್ಲೂ 'ಪದ್ಮಾವತ್' ಹವಾ ಜೋರಾಗಿದೆ. 'ಪದ್ಮಾವತ್' ಚಿತ್ರದಲ್ಲಿ ರಾಣಿ ಪದ್ಮಾವತಿ ಆಗಿ ದೀಪಿಕಾ ಪಡುಕೋಣೆ, ಅಲ್ಲಾವುದ್ದೀನ್ ಖಿಲ್ಚಿ ಆಗಿ ರಣ್ವೀರ್ ಸಿಂಗ್ ಹಾಗೂ ಮಹಾರಾವಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ಮಿಂಚಿದ್ದಾರೆ.

English summary
Bollywood Movie 'Padmaavat' Box office collection report: Deepika Padukone starrer 'Padmaavat' collects Rs 225 crore in 14 days.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X