For Quick Alerts
  ALLOW NOTIFICATIONS  
  For Daily Alerts

  ಅರೇ... RK ಟಾಟ್ಯೂ ಏನಾಯ್ತು ದೀಪಿಕಾ.?

  By Harshitha
  |

  ಒಂದ್ಕಾಲದಲ್ಲಿ ಕಪೂರ್ ಕುಡಿ ರಣ್ಬೀರ್ ಹಾಗೂ ನಟಿ ದೀಪಿಕಾ ಪ್ರಣಯ ಪಕ್ಷಿಗಳು. ಇಬ್ಬರೂ ಪ್ರೇಮದ ಅಲೆಯಲ್ಲಿ ತೇಲಾಡುತ್ತಿದ್ದಾಗ, ರಣ್ಬೀರ್ ಕಪೂರ್ ಹೆಸರಿನಲ್ಲಿ 'RK' ಎಂಬ ಟಾಟ್ಯೂನ ಕುತ್ತಿಗೆ ಮೇಲೆ ಹಾಕಿಸಿಕೊಂಡಿದ್ದರು ನಟಿ ದೀಪಿಕಾ ಪಡುಕೋಣೆ.

  ರಣ್ಬೀರ್ ಕಪೂರ್ ಜೊತೆಗೆ ಬ್ರೇಕಪ್ ಆದ್ಮೇಲೂ, ಆ ಟಾಟ್ಯೂ ನ ದೀಪಿಕಾ ಪಡುಕೋಣೆ ತೆಗೆಸಿಕೊಂಡಿರಲಿಲ್ಲ.

  ಸದ್ಯ ನಟಿ ದೀಪಿಕಾ ಪಡುಕೋಣೆ Cannes ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚುತ್ತಿದ್ದಾರೆ. ಇದೇ ವೇಳೆ ದೀಪಿಕಾ ಪಡುಕೋಣೆ ಅವರ ಒಂದು ಫೋಟೋ 'RK ಟಾಟ್ಯೂ' ಕುರಿತ ಚರ್ಚೆಗೆ ಕಾರಣವಾಗಿದೆ.

  ಮತ್ತೆ ಒಂದಾದ ಬಾಲಿವುಡ್ ಮಾಜಿ ಪ್ರೇಮಿಗಳುಮತ್ತೆ ಒಂದಾದ ಬಾಲಿವುಡ್ ಮಾಜಿ ಪ್ರೇಮಿಗಳು

  ಪಿಂಕ್ ಗೌನ್ ಧರಿಸಿ, ತಲೆಗೆ ತುರುಬು ಕಟ್ಟಿ ನಟಿ ದೀಪಿಕಾ ಪಡುಕೋಣೆ ರೆಡ್ ಕಾರ್ಪೆಟ್ ಮೇಲೆ ಬಂದಾಗ ಅವರ ಕುತ್ತಿಗೆ ಮೇಲೆ 'RK ಟಾಟ್ಯೂ' ಇರಲಿಲ್ಲ. ಇದನ್ನ ಗಮನಿಸಿರುವ ನೆಟ್ಟಿಗರು ''ಅರೇ 'RK ಟಾಟ್ಯೂ' ಏನಾಯ್ತು.?'' ಅಂತ ಪ್ರಶ್ನೆ ಮಾಡ್ತಿದ್ದಾರೆ.

  ಲೇಸರ್ ಮೂಲಕ 'RK ಟಾಟ್ಯೂ'ನ ದೀಪಿಕಾ ಪಡುಕೋಣೆ ತೆಗೆಸಿರಬೇಕು ಅಂತ ಹಲವರು ಊಹಿಸುತ್ತಿದ್ದಾರೆ. ಆದ್ರೆ, ನಿಜಕ್ಕೂ 'RK ಟಾಟ್ಯೂ'ನ ದೀಪಿಕಾ ರಿಮೂವ್ ಮಾಡಿಸಿದ್ದಾರೋ, ಅಥವಾ ಮೇಕಪ್ ಮೂಲಕ 'RK ಟಾಟ್ಯೂ'ನ ಮರೆಮಾಚಿದ್ದಾರೋ ಗೊತ್ತಾಗುತ್ತಿಲ್ಲ.

  ''ಟಾಟ್ಯೂ ಹಾಕಿಸಿಕೊಂಡಿರುವುದಕ್ಕೆ ನನಗೆ ಬೇಸರ ಇಲ್ಲ. ಟಾಟ್ಯೂನ ತೆಗೆಸಿಕೊಂಡಿಲ್ಲ. ಬದಲಾವಣೆ ಕೂಡ ಮಾಡಿಸುವುದಿಲ್ಲ'' ಎಂದು ದೀಪಿಕಾ ಪಡುಕೋಣೆ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಾಗಾದ್ರೆ, ಈಗ ಯಾಕೆ 'RK ಟಾಟ್ಯೂ' ಕಾಣ್ತಿಲ್ಲ ಅಂತ ಸ್ವತಃ ದೀಪಿಕಾನೇ ಉತ್ತರ ಕೊಡಬೇಕು.

  ಅಂದ್ಹಾಗೆ, ನಟಿ ದೀಪಿಕಾ ಈಗ ರಣ್ವೀರ್ ಸಿಂಗ್ ರನ್ನ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಇಬ್ಬರೂ ತುಟಿಕ್ ಪಿಟಿಕ್ ಎಂದಿಲ್ಲ.

  English summary
  Bollywood Actress Deepika Padukone's RK Tattoo is missing at Cannes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X