»   » ಮದುವೆ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ

ಮದುವೆ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಬಾಲಿವುಡ್ ಅಂಗಳದಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ವಿಚಾರದ್ದೆ ಸುದ್ದಿ. ಇದೇ ವರ್ಷದಲ್ಲಿ ಇಬ್ಬರು ಮದುವೆ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಶಾಪಿಂಗ್ ಕೂಡ ನಡೆಯುತ್ತಿದೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು. ಇದೇ ಬೆನ್ನಲ್ಲೇ ನಟಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಯಾಕೆ ಸ್ಪೆಷಲ್ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿಗಷ್ಟೆ ಖಾಸಗಿ ಚಾನೆಲ್ ಗೆ ಸಂದರ್ಶನ ನೀಡಿದ್ದ ದೀಪಿಕಾ ನನ್ನ ಪ್ರೇಮಿಯನ್ನ ಹಾಡಿ ಹೊಗಳಿದ್ದಾರೆ. "ರಣವೀರ್ ಸಿಂಗ್ ಈಗಿನ ಜನರೇಷನ್ ನ ಅತ್ಯುತ್ತಮ ನಟ, ಯಾವುದೇ ಪಾತ್ರಕ್ಕಾದರೂ ನ್ಯಾಯ ದಕ್ಕಿಸುವಂತ ಶಕ್ತಿ ಹೊಂದಿರುವ ಕಲಾವಿದ ರಣವೀರ್, ಈಗಿನ ನಟರಲ್ಲಿ ಇಲ್ಲದ ಕಲೆ ರಣವೀರ್ ಅವರಲ್ಲಿ ಅಡಗಿದೆ. ಇದೇ ಅವರನ್ನ ಸ್ಪೆಷಲ್ ಎನ್ನಿಸುವಂತೆ ಮಾಡುವುದು" ಎಂದು ದೀಪಿಕಾ ಹೇಳಿದ್ದಾರೆ.

Deepika said that this is the right time for marriage

ಮತ್ತೆ ಒಂದಾದ ಬಾಲಿವುಡ್ ಮಾಜಿ ಪ್ರೇಮಿಗಳು

ಎಲ್ಲಾ ಕಾರ್ಯಕ್ರಮಗಳಲ್ಲಿ ಜೋಡಿ ಆಗಿ ಕಾಣಿಸಿಕೊಳ್ಳುತ್ತಿರುವ ದೀಪಿಕಾ ಹಾಗೂ ರಣವೀರ್ ಸಿಂಗ್ ಎಲ್ಲಿಯೂ ಖಾಸಗಿ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ ಆದರೆ . ಇತ್ತೀಚಿಗೆ ದೀಪಿಕಾ ನೀಡಿರುವ ಕೆಲವು ಸಂದರ್ಶನದಲ್ಲಿ ಮದುವೆ ಆಗಲು ಇದು ಸರಿಯಾದ ಸಮಯ ಎನ್ನುವುದನ್ನ ತಿಳಿಸಿದ್ದಾರೆ.

ಸದ್ಯ ದೀಪಿಕಾ ಹೊಸ ಚಿತ್ರಕ್ಕೆ 'ಸಪ್ನದೀದಿ' ಚಿತ್ರದಲ್ಲಿ ಭಾಗಿ ಆಗಲಿದ್ದಾರೆ. ರಣವೀರ್ ಸಿಂಗ್ 'ಸಿಂಬಾ' ಸಿನಿಮಾದ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ. ಒಟ್ಟಾರೆ ಈಗಿರುವಬ ಸುದ್ದಿಯ ಪ್ರಕಾರ ವರ್ಷದ ಅಂತ್ಯದ ಒಳಗೆ ದೀಪಿಕಾ ಹಾಗೂ ರಣವೀರ್ ದಾಂಪತ್ಯ ಜೀವಕ್ಕೆ ಕಾಲಿಡುವುದು ಪಕ್ಕಾ ಆಗಿದೆ.

ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಮದುವೆ ಶಾಪಿಂಗ್.!

English summary
Bollywood actress Deepika Padukone has spoken in an interview about marriage and Ranveer Singh. Deepika said that this is the right time for marriage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X