For Quick Alerts
  ALLOW NOTIFICATIONS  
  For Daily Alerts

  ಸಿಎಂ ವಿರುದ್ಧ ಹೇಳಿಕೆ: ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

  |

  ಮುಂಬೈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕಚೇರಿ ಕಳೆದುಕೊಂಡ ಕಂಗನಾ ರನೌತ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆರೋಪ ಮಾಡಿದ್ದ ಕಂಗನಾ ವಿರುದ್ಧ ವಕೀಲರೊಬ್ಬರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

  ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿ

  ಮುಂಬೈ ಮಹಾನಗರ ಪಾಲಿಕೆಯು ಕಂಗನಾ ರನೌತ್ ಕಚೇರಿಯನ್ನು ಧ್ವಂಸ ಮಾಡಿದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದ ಕಂಗನಾ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು.

  ಉದ್ಧವ್ ಠಾಕ್ರೆ ಮೇಲೆ ಏಕ ವಚನದ ವಾಗ್ದಾಳಿ

  ಉದ್ಧವ್ ಠಾಕ್ರೆ ಮೇಲೆ ಏಕ ವಚನದ ವಾಗ್ದಾಳಿ

  'ಉದ್ಧವ್ ಠಾಕ್ರೆ, ನೀನು, ಸಿನಿಮಾ ಮಾಫಿಯಾ ಜೊತೆ ಕೈಜೋಡಿಸಿ, ನನ್ನ ಮನೆ ಒಡೆದಿದ್ದೀಯಾ, ನಾಳೆ ನಿನ್ನ ಅಹಂಕಾರ ಒಡೆಯುತ್ತದೆ' ಎಂದಿದ್ದರು ಕಂಗನಾ. ಅವರ ಈ ಹೇಳಿಕೆ ಸಖತ್ ವೈರಲ್ ಆಗಿತ್ತು.

  ಕಂಗನಾ ಜತೆ ಕೆಲಸ ಮಾಡಲು ಖ್ಯಾತ ಛಾಯಾಗ್ರಾಹಕ ಪಿ.ಸಿ ಶ್ರೀರಾಮ್ ಹಿಂದೇಟು

  'ನನ್ನ ಕಚೇರಿ ಒಡಿದ್ದೀರಿ, ನನ್ನ ಮನೆ ಒಡೆಯಿರಿ'

  'ನನ್ನ ಕಚೇರಿ ಒಡಿದ್ದೀರಿ, ನನ್ನ ಮನೆ ಒಡೆಯಿರಿ'

  ಇಷ್ಟಕ್ಕೆ ಸುಮ್ಮನಾಗದ ಕಂಗನಾ, 'ಬಾ ಉದ್ಧವ್ ಠಾಕ್ರೆ, ಕರಣ್ ಜೋಹರ್ ಮತ್ತು ಗ್ಯಾಂಗ್, ನೀವು ನನ್ನ ಕಚೇರಿ ಒಡೆದಿದ್ದೀರಿ, ಈಗ ನನ್ನ ಮನೆ ಒಡೆಯಿರಿ, ನನ್ನ ದೇಹವನ್ನು, ಬದುಕನ್ನು ಒಡೆಯಿರಿ, ಜಗತ್ತು ನೀವೇನು ಮಾಡಿದಿರಿ ಎಂದು ನೋಡಲಿ' ಎಂದಿದ್ದರು.

  ಕಂಗನಾ ವಿರುದ್ಧ ಮೊಕದ್ದಮೆ ದಾಖಲು

  ಕಂಗನಾ ವಿರುದ್ಧ ಮೊಕದ್ದಮೆ ದಾಖಲು

  ಈಗ ಇದೇ ಹೇಳಿಕೆ ವಿರುದ್ಧ ದೂರು ದಾಖಲಾಗಿದ್ದು, 'ಮೂವಿ ಮಾಫಿಯಾದೊಂದಿಗೆ ಸಿಎಂ ಕೈ ಜೋಡಿಸಿದ್ದಾರೆ' ಎಂಬ ಅಂಶವನ್ನಿಟ್ಟುಕೊಂಡು ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

  ShivSena ಕಾಟದಿಂದ ಹೊರ ಬರ್ತಾಳಾ Kangana? | Oneindia Kannada
  ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಕಂಗನಾ

  ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಕಂಗನಾ

  ಕಂಗನಾ ರನೌತ್, ವಿರುದ್ಧ ಶಿವಸೇನೆ ಕಾರ್ಯಕರ್ತರು ಸಮರ ಸಾರಿದ್ದಾರೆ. ಕಂಗನಾ, ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದರು. ಈ ಹೇಳಿಕೆ ವಿರುದ್ಧ ಶೀವಸೇನೆ ಹಾಗೂ ಇತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

  'ವೈ ಪ್ಲಸ್' ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ 'ಕ್ವೀನ್' ಕಂಗನಾ

  English summary
  Defamation case filed against actress Kangana Ranaut for alligations against Maharashtra CM Uddhav Thackeray.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X