twitter
    For Quick Alerts
    ALLOW NOTIFICATIONS  
    For Daily Alerts

    ಜಾಮೀನು ವಿಚಾರಣೆ ಮುಂದೂಡಿಕೆ: ನಟಿ ಜಾಕ್ವೆಲಿನ್‌ಗೆ ತಾತ್ಕಾಲಿಕ ನೆಮ್ಮದಿ

    |

    200 ಕೋಟಿ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಾಕ್ವೆಲಿನ್ ಫರ್ನಾಂಡೀಸ್‌ಗೆ ತಾತ್ಕಾಲಿಕ ನಿರಾಳತೆ ಧಕ್ಕಿದೆ. ನಟಿಯ ಮಧ್ಯಂತರ ಜಾಮೀನು ಅವಧಿ ನವೆಂಬರ್ 15 ರವರೆಗೆ ವಿಸ್ತರಣೆಗೊಂಡಿದೆ.

    ನಟಿಯ ಜಾಮೀನು ಅರ್ಜಿ ವಿಚಾರಣೆ ಪಟಿಯಾಲಾ ಕೋರ್ಟ್‌ನಲ್ಲಿ ನಡೆದಿದ್ದು ತೀರ್ಪನ್ನು ನವೆಂಬರ್ 15 ಕ್ಕೆ ಕಾಯ್ದಿರಿಸಲಾಗಿದೆ. ನಿನ್ನೆ ನಡೆದ ವಿಚಾರಣೆ ವೇಳೆ, ನಟಿಯನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ತನಿಖಾಧಿಕಾರಿಗಳನ್ನು ನ್ಯಾಯಾಲಯವು ಪ್ರಶ್ನೆ ಮಾಡಿತ್ತು. ಹಾಗಾಗಿ ನಟಿ ಜಾಕ್ವೆಲಿನ್‌ಳ ಬಂಧನ ಸನ್ನಿಹಿತವಾಗಿದೆ ಎನ್ನಲಾಗಿತ್ತು. ಆದರೆ ಈಗ ಮತ್ತೆ ನಾಲ್ಕು ದಿನದ ಕಾಲಾವಕಾಶ ನಟಿಗೆ ದೊರೆತಿದೆ.

    ಜಾಕ್ವೆಲಿನ್ ಫರ್ನಾಂಡೀಸ್‌ರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪಟಿಯಾಲಾ ಹೌಸ್‌ ನ್ಯಾಯಾಲಯ, ನಿನ್ನೆ ತನಿಖಾ ಸಂಸ್ಥೆಯಾದ ಇಡಿಯನ್ನು ತರಾಟೆಗೆ ತೆಗೆದುಕೊಂಡಿತು. ''ಪ್ರಕರಣದ ಹಲವು ಆರೋಪಿಗಳು ಜೈಲಿನಲ್ಲಿದ್ದಾರೆ, ನಟಿಯ ಬಗ್ಗೆ ಲುಕ್‌ ಔಟ್ ಸರ್ಕ್ಯುಲರ್ ಸಹ ನೀಡಲಾಗಿದೆ ಹಾಗಿದ್ದರೂ ನಟಿಯನ್ನು ಮಾತ್ರ ಏಕೆ ಬಂಧಿಸಲಾಗಿಲ್ಲ. ಈ ಪಕ್ಷಪಾತ ಏಕೆ?' ಎಂದು ಕಠಿಣವಾಗಿಯೇ ಪ್ರಶ್ನೆ ಮಾಡಿದೆ. ಇದೇ ಕಾರಣಕ್ಕೆ ನಟಿಯು ಇಂದು ವಿಚಾರಣೆಗೆ ಹಾಜರಾಗಿದ್ದರು.

    ಜಾಕ್ವೆಲಿನ್ ಫರ್ನಾಂಡೀಸ್‌ರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಇಡಿ, ''ನಟಿಯು ಈಗ ನಡೆದಿರುವ ತನಿಖೆ ಹಾಗೂ ವಿಚಾರಣೆಗೆ ಸೂಕ್ತವಾಗಿ ಸಹಕರಿಸಿಲ್ಲ. ಅಲ್ಲದೆ, ಈಗ ಜಾಮೀನಿಗೆ ಅರ್ಜಿ ಸಲ್ಲಿಸಿರುವುದು ದೇಶದಿಂದ ಪರಾರಿಯಾಗಲು ಎಂಬ ಗುಮಾನಿ ಇದೆ'' ಎಂದಿತ್ತು.

    ಇಡಿ ಪರ ವಾದಿಸಿದ ವಕೀಲರು, ''ನಾವುಗಳು ಈವರೆಗೆ ನಮ್ಮ ಜೀವನದಲ್ಲಿ ಒಟ್ಟಿಗೆ 50 ಲಕ್ಷ ಹಣವನ್ನು ನೋಡಿಯೇ ಇಲ್ಲ. ಅಂಥಹದ್ದರಲ್ಲಿ ಜಾಕ್ವೆಲಿನ್ ಮಜಾ ಮಾಡಲು 7.20 ಕೋಟಿ ಖರ್ಚು ಮಾಡಿದ್ದಾಳೆ. ಆಕೆ ಇರುವ ವಿದ್ಯೆಗಳನ್ನೆಲ್ಲ ಬಳಸಿ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಇದಕ್ಕೆ ಬಳಸಲು ಆಕೆಯ ಬಳಿ ಸಾಕಷ್ಟು ಹಣವೂ ಇದೆ'' ಎಂದಿದ್ದರು.

    Delhis Patiala House Court Extends the Interim Bail Of Actor Jacqueline Fernandez Till 15th November

    ಸುಕೇಶ್ ಚಂದ್ರಶೇಖರ್‌ ಮುಖ್ಯ ಆರೋಪಿಯಾಗಿರುವ 200 ಕೋಟಿ ಸುಲಿಗೆ ಪ್ರಕರಣದ ತನಿಖೆಯನ್ನು ಇಡಿ ಕಳೆದ ವರ್ಷದಿಂದಲೂ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಜಾಕ್ವೆಲಿನ್‌ ಅನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ತನಿಖೆ ವಿಸ್ತಾರವಾಗುತ್ತಾ ಸಾಗುತ್ತಿದ್ದಂತೆ, ಜಾಕ್ವೆಲಿನ್ ಅನ್ನು ಆರೋಪಿಯಾಗಿ ಪರಿಗಣಿಸಿ ಚಾರ್ಜ್‌ಶೀಟ್ ಸಹ ಸಲ್ಲಿಸಲಾಗಿದೆ. ಅಲ್ಲದೆ, ಇಡಿಯೂ ಇತ್ತೀಚೆಗಷ್ಟೆ ಜಾಕ್ವೆಲಿನ್ ಹೆಸರಲ್ಲಿ ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕ್‌ ಔಟ್ ಸರ್ಕ್ಯುಲೇಟ್‌ ನೀಡಿ, ನಟಿಯು ದೇಶ ಬಿಟ್ಟು ಹೋಗದಂತೆ ಎಚ್ಚರವಹಿಸಿದೆ.

    ಸುಕೇಶ್ ಚಂದ್ರಶೇಖರ್, ಮಹಾನ್ ವಂಚಕ ಆಗಿದ್ದು, 2017 ರಿಂದಲೂ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಹಲವು ಉದ್ದಿಮೆಗಳು, ರಾಜಕಾರಣಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾನೆ. ಈತನೊಟ್ಟಿಗೆ ಜಾಕ್ವೆಲಿನ್‌ಗೆ ಆಪ್ತ ಸಂಬಂಧ ಇತ್ತು. ಜಾಕ್ವೆಲಿನ್‌ಗೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ಸುಕೇಶ್ ಚಂದ್ರಶೇಖರ್ ನೀಡಿದ್ದ.

    English summary
    Delhi's Patiala House court extends the interim bail of actor Jacqueline Fernandez till 15th November in 200 crore extortion case.
    Friday, November 11, 2022, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X