For Quick Alerts
  ALLOW NOTIFICATIONS  
  For Daily Alerts

  'ಭೂಲ್ ಭುಲಯ್ಯ 2' ಬಾಕ್ಸಾಫೀಸ್ ಚಿಂದಿ: ಕಂಗನಾ ಚಿತ್ರಕ್ಕಿಲ್ಲ ಉಳಿಗಾಲ!

  |

  RRR ಮತ್ತು ಕೆಜಿಎಫ್ 2 ಸಿನಿಮಾಗಳು ಬಂದ ಮೇಲೆ ಬಾಲಿವುಡ್ ಬಗ್ಗೆ ಬೆರೆ ರೀತಿಯ ಸಂದೇಶ ರವಾನೆ ಆಗಿತ್ತು. ಬಾಲಿವುಡ್ ಸಿನಿಮಾಗಳಿಗೆ ಇನ್ನು ಮುಂದೆ ಭವಿಷ್ಯ ಕಡಿಮೆ ಎನ್ನುವ ಚರ್ಚೆಗಳು ಹುಟ್ಟಿಕೊಂಡವು, ಡಬ್ಬಿಂಗ್ ಸಿನಿಮಾಗಳ ಮುಂದೆ ಹಿಂದಿ ಸಿನಿಮಾಗಳು ಮಂಕಾಗಿ ಬಿಟ್ಟಿದ್ದವು.

  ಇದನ್ನು ಕಂಡು ಬಾಲಿವುಡ್ ಮಂದಿ ಕೂಡ ಬೆರಾಗಿ ಬಿಟ್ಟುದ್ದರು. ಆದರೆ ಈಗ ಉತ್ತಮ ಸಿನಿಮಾ ಮಾಡಿದರೆ, ಸೌತ್ ಆದರೇನು, ನಾರ್ತ್ ಆದರೇನು ಸಿನಿಮಾವನ್ನು ಜನ ನೋಡುತ್ತಾರೆ ಎನ್ನುವುದು ಸಾಭೀತಾಗಿದೆ.

  ಮತ್ತೆ ಒಂದಾದ ಕಿಯಾರ-ಸಿದ್ದಾರ್ಥ್, ಗಾಳಿ ಸುದ್ದಿಗೆ ಬಿತ್ತು ಬ್ರೇಕ್ಮತ್ತೆ ಒಂದಾದ ಕಿಯಾರ-ಸಿದ್ದಾರ್ಥ್, ಗಾಳಿ ಸುದ್ದಿಗೆ ಬಿತ್ತು ಬ್ರೇಕ್

  ಬಾಲಿವುಡ್‌ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯ 2'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಕಂಗನಾ ಸಿನಿಮಾವನ್ನು ಮಣಿಸಿದೆ.

  'ಭೂಲ್ ಭುಲಯ್ಯಾ 2' ಬಾಕ್ಸಾಫೀಸ್ ಅಬ್ಬರ!

  'ಭೂಲ್ ಭುಲಯ್ಯಾ 2' ಬಾಕ್ಸಾಫೀಸ್ ಅಬ್ಬರ!

  ಹಿಂದಿಗೆ ಕನ್ನಡದ 'ಕೆಜಿಎಫ್ 2' ಸಿನಿಮಾ ಡಬ್ ಆಗಿದ್ದು, ಆಗಿದ್ದು ಬೇರೆ ಯಾವ ಸಿನಿಮಾ ಈ ಚಿತ್ರದ ಮುಂದೆ ನಿಲ್ಲಲಿಲ್ಲ. ಈಗ 'ಕೆಜಿಎಫ್ 2' ರಿಲೀಸ್ ಆಗಿ ಹೆಚ್ಚು ದಿನಗಳು ಕಳೆಯುತ್ತಿದ್ದ ಹಾಗೆ, 'ಭೂಲ್ ಭೂಲಯ್ಯ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆಯುವುದಲ್ಲದೇ ಕಲೆಕ್ಷನ್ ಹೆಚ್ಚಿಸಿಕೊಂಡಿದೆ.

  ಕಮಲ್ ಹಾಸನ್ ಸಿನಿಮಾಗೆ ರಣ್‌ವೀರ್ ಬೆಂಬಲ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್ ನಟ!ಕಮಲ್ ಹಾಸನ್ ಸಿನಿಮಾಗೆ ರಣ್‌ವೀರ್ ಬೆಂಬಲ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್ ನಟ!

  'ಭೂಲ್ ಭುಲಯ್ಯಾ 2' ಕಲೆಕ್ಷನ್ 66 ಕೋಟಿ ರೂ.!

  'ಭೂಲ್ ಭುಲಯ್ಯಾ 2' ಕಲೆಕ್ಷನ್ 66 ಕೋಟಿ ರೂ.!

  ಭೂಲ್ ಭುಲಯ್ಯ 2 ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಇನ್ನು ಸಿನಿಮಾ ವಾರಂತ್ಯದ ಜೊತೆಗೆ ವೀಕ್ ಡೇಸ್‌ನಲ್ಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತಾ ಇದೆ. ರಿಲೀಸ್ ಆಗಿ ನಾಲ್ಕು ದಿನಕ್ಕೆ 66 ಕೋಟಿ ರೂ. ಗಳಿಸಿದೆ. ಇನ್ನು ಒಂದು ವಾರದ ಒಳಗೆ ಈ ಸಿನಿಮಾ 100 ಕೋಟಿಯ ಗಡಿಯನ್ನು ನಿರಾಯಾಸವಾಗಿ ತಲುಪಲಿದೆ. ಇನ್ನು ಭೂಲ್ ಭುಲಯ್ಯ ಸಿನಿಮಾ ಸೌತ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಾ ಇದೆ.

  ಭೂಲ್ ಭುಲಯ್ಯ 2ಗಾಗಿ 'ದಾಖಡ್' ಎತ್ತಂಗಡಿ!

  ಭೂಲ್ ಭುಲಯ್ಯ 2ಗಾಗಿ 'ದಾಖಡ್' ಎತ್ತಂಗಡಿ!

  ಇನ್ನು ಭೂಲ್ ಭುಲಯ್ಯ 2 ಸಿನಿಮಾಗಾಗಿ ಕಂಗನಾ ಅಭಿನಯದ 'ದಾಖಡ್' ಸಿನಿಮಾವನ್ನು ಎತ್ತಂಗಡಿ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಹಲವು ಕಡೆಗಳಲ್ಲಿ ಕಂಗಾನ ಸಿನಿಮಾ ತೆಗೆದು ಭೂಲ್ ಭುಲಯ್ಯ 2 ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಅಲ್ಲದೇ ಕಂಗನಾ ಸಿನಿಮಾ 'ದಾಖಡ್' ಜನರಿಲ್ಲದೇ ಖಾಲಿ ಹೊಡೆಯುತ್ತಿರುವ ಕಾರಣ ಮುಲಾಜಿಲ್ಲದೆ ಸಿನಿಮಾವನ್ನು ಕಿತ್ತುಹಾಕುತ್ತಿರುವುದಾಗಿ ವರದಿ ಆಗಿದೆ.

  'ಬ್ರಿಟಿಷರು ನಮ್ಮನ್ನು ಒಡೆದಿದ್ದು ಹೀಗೆ': ಕಿಚ್ಚನ ಹೇಳಿಕೆಗೆ ಅಕ್ಷಯ್ ಪರೋಕ್ಷ ಪ್ರತಿಕ್ರಿಯೆ'ಬ್ರಿಟಿಷರು ನಮ್ಮನ್ನು ಒಡೆದಿದ್ದು ಹೀಗೆ': ಕಿಚ್ಚನ ಹೇಳಿಕೆಗೆ ಅಕ್ಷಯ್ ಪರೋಕ್ಷ ಪ್ರತಿಕ್ರಿಯೆ

  ಕೆಜಿಎಫ್ 2 ದಾಖಲೆ ಮುರಿಯುತ್ತಾ 'ಭೂಲ್ ಭುಲಯ್ಯಾ 2'

  ಕೆಜಿಎಫ್ 2 ದಾಖಲೆ ಮುರಿಯುತ್ತಾ 'ಭೂಲ್ ಭುಲಯ್ಯಾ 2'

  ಕೆಜಿಎಫ್ 2 ಸಿನಿಮಾ ಹಿಂದಿಯಲ್ಲಿ 400 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ. ಈ ಹಿಂದೆ ಬಾಲಿವುಡ್ ಸಿನಿಮಾಗಳು ಮಾಡಿದ್ದ ದಾಖಲೆಗಳನ್ನು ಸುಲಭವಾಗಿ ಮುರಿದು ಹಾಕಿದೆ ಹಿಂದಿ ಡಬ್ಬಿಂಗ್ 'ಕೆಜಿಎಫ್ 2'. ಆದರೆ ಈಗ 'ಭೂಲ್ ಭೂಲಯ್ಯ 2', ಉತ್ತಮ ಪ್ರದರ್ಶನ ಕಾಣುತ್ತಾ ಇದ್ದು, 'ಕೆಜಿಎಫ್ 2' ಹಿಂದಿ ಅವತರಣಿಕೆಯ ಈ ದಾಖಲೆಯನ್ನು ಮುರಿಯ ಬಲ್ಲುದೇ ಎನ್ನುವ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.

  English summary
  Dhaakad Replaced By Bhool Bhulaiyaa 2, Is Bhool Bhulaiyaa Ready To Break KGF 2 Record,
  Tuesday, May 24, 2022, 16:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X