»   » ಧೂಮ್ 3 ಟ್ರೇಲರ್ : ಅಮೀರ್, ಕತ್ರೀನಾ ಜೋಡಿ ಸೂಪರ್

ಧೂಮ್ 3 ಟ್ರೇಲರ್ : ಅಮೀರ್, ಕತ್ರೀನಾ ಜೋಡಿ ಸೂಪರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಖಳನಟನಾಗಿ ಬೆಳ್ಳಿತೆರೆ ಮೇಲೆ ರಾರಾಜಿಸಲಿದ್ದಾರೆ.'ಘಜನಿ' ಮತ್ತು 'ಫನಾ' ಚಿತ್ರಗಳಲ್ಲಿ ನೆಗಟಿವ್ ಛಾಯೆ ಇರುವ ಪಾತ್ರಗಳಲ್ಲಿ ನಟಿಸಿ ಪರಿಪೂರ್ಣ ನಟ ಎನಿಸಿದ್ದ ಅಮೀರ್ ಈಗ ಧೂಮ್ 3 ಚಿತ್ರದಲ್ಲಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಲಿದ್ದಾರೆ.

'ಧೂಮ್' ಚಿತ್ರ ಯಶಸ್ವಿಯಾದ ಬಳಿಕ 'ಧೂಮ್ 2' ಚಿತ್ರ ಬಂದಿತ್ತು. ಇದೇ ಸರಣಿಯಲ್ಲಿ ಈಗ 'ಧೂಮ್ 3' ಚಿತ್ರ ವರ್ಷಾಂತ್ಯಕ್ಕೆ ತೆರೆ ಕಾಣಲಿದೆ. ಧೂಮ್ 3 ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಗೊಂಡಿದ್ದು ಈ ಸಮಯಕ್ಕೆ ಯೂಟ್ಯೂಬ್ ನಲ್ಲಿ 6 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ.

ಧೂಮ್ 3' ಚಿತ್ರದ ತಾರಾಗಣದಲ್ಲಿ ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಕತ್ರೀನಾ ಕೈಫ್ ಇದ್ದಾರೆ. ಅದರೆ, ಅಮೀರ್ ಖಾನ್ ಬೈಕ್ ಸ್ಟಂಟ್, ಸರ್ಕಸ್ ನವರಂತೆ ಜಿಗಿತ, ಕತ್ರೀನಾ ಕೈಫ್ ಆಕ್ರೋಬ್ಯಾಟ್ ಶೈಲಿ ನರ್ತನ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

Watch Dhoom 3 Trailer: Aamir-Katrina Rock!

ಅಂದಹಾಗೆ, ಟ್ರೇಲರ್ ನಲ್ಲಿ ನೋಡಿದಂತೆ ಅಮಿರ್ ಖಾನ್ ರೈಡ್ ಮಾಡಲಿರುವ ಬೈಕಿನ ಹೆಸರು ಬಿಎಂಡಬ್ಲ್ಯು ಕೆ 1300 ಆರ್. ಹೆಸರೇ ಹೇಳುವಂತೆ ಇದು 1,300 ಸಿಸಿಯ ಸೂಪರ್ ಬೈಕ್. 1,293 ಸಿಸಿಯ ವಾಟರ್ ಕೂಲ್ಡ್ 4 ಸ್ಟ್ರೋಕ್ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 173 ಹಾರ್ಸ್ ಪವರ್ ಮತ್ತು 140 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಜಾಕಿ ಶ್ರಾಫ್ ಜತೆ ಆಮೀರ್ ಖಾನ್, ಕಳ್ಳ ಅಮೀರ್ ಖಾನ್ ಹಾಗೂ ಪೊಲೀಸ್ ಅಭಿಷೇಕ್ ಬಚ್ಚನ್ ಮುಖಾಮುಖಿ, ಸರ್ಕಸ್ ನಲ್ಲಿ ಅಮೀರ್ ನೆಗೆತ, ಬೈಕ್ ಹತ್ತಿ ಅಮೀರ್ ಖಾನ್ ಮಾಡುವ ಸ್ಟಂಟ್ ಗಳು, ಕತ್ರೀನಾ ಡ್ಯಾನ್ಸ್, ಅಮೀರ್ ಡೈಲಾಗ್ ಪಂಚ್ ಗಳು ಹಾಗೂ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಎಲ್ಲವೂ ಮೊದಲ ನೋಟಕ್ಕೆ ಗಮನ ಸೆಳೆಯುವಂತೆ ಮಾಡುವಲ್ಲಿ ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಯಶಸ್ವಿಯಾಗಿದ್ದಾರೆ. ಬಹು ನಿರೀಕ್ಷಿತ ಧೂಮ್ 3 ಚಿತ್ರ ಡಿಸೆಂಬರ್ 20,2013 ರಂದು ತೆರೆ ಕಾಣಲಿದ್ದು, ಸದ್ಯಕ್ಕೆ ಚಿತ್ರದ ಟ್ರೇಲರ್ ನೋಡಿ

English summary
The year's most-anticipated official trailer of Dhoom 3 has finally hit the net. And yes! we agree with the Mr Big B, this one is just "astounding", breathtaking. If we just go by the trailer, Dhoom 3 has more style and panache than it's prequels, Dhoom and Dhoom 2.
Please Wait while comments are loading...