ಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿ

ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ನಟಿ ದಿಯಾ ಮಿರ್ಜಾ ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಸುದ್ದಿ ಹಂಚಿಕೊಂಡಿದ್ದರು.

ನಟಿ ದಿಯಾ ಮಿರ್ಜಾ ಫೆಬ್ರವರಿ 15 ರಂದು ಎರಡನೇ ಬಾರಿ ವಿವಾಹವಾಗಿದ್ದಾರೆ. ವಿವಾಹವಾದ ಕೆಲವೇ ದಿನಗಳ ಬಳಿಕ ತಾವು ತಾಯಿಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಆದರೆ ದಿಯಾ ಹಾಕಿರುವ ಪೋಸ್ಟ್‌ಗೆ ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ದಿಯಾರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ 'ಗರ್ಭಿಣಿ ಆದ ನಂತರ ಮದುವೆ ಆಗಿದ್ದೀರಿ. ಗರ್ಭಿಣಿ ಆಗಿರುವುದನ್ನು ಮದುವೆಗೆ ಮುಂಚೆಯೇ ಏಕೆ ಘೋಷಿಸಲಿಲ್ಲ?' ಎಂದು ಪ್ರಶ್ನೆ ಮಾಡಿದ್ದಾನೆ.

Dia Mirza Replies To A Troll Who Questions Her Pregnancy

ಇದಕ್ಕೆ ಪ್ರತಿಕ್ರಿಯಿಸಿರುವ ದಿಯಾ ಮಿರ್ಜಾ, 'ಆಸಕ್ತಿಕರ ಪ್ರಶ್ನೆ ಇದು. ನಾವು ಪೋಷಕರಾಗುತ್ತಿದ್ದೇವೆ ಎಂಬ ಕಾರಣಕ್ಕೆ ಮದುವೆ ಆಗಲಿಲ್ಲ. ಮದುವೆಯ ತಯಾರಿಯಲ್ಲಿದ್ದಾಗ ನಾನು ಗರ್ಭಿಣಿ ಆಗಿರುವುದು ಗೊತ್ತಾಯಿತು. ಗರ್ಭಿಣಿ ಆಗಿದ್ದಕ್ಕೆ ನಾವು ಮದುವೆ ಆಗಲಿಲ್ಲ' ಎಂದಿದ್ದಾರೆ ದಿಯಾ.

'ಪೋಷಕರಾಗುತ್ತಿರುವುದಾಗಿ ನಾವು ಮೊದಲೇ ಘೋಷಿಸಬಹುದಿತ್ತು. ಆದರೆ ವೈದ್ಯಕೀಯ ಕಾರಣಗಳಿಂದಾಗಿ ನಾವು ತಡವಾಗಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡೆವು. ಈ ಸಂದರ್ಭಕ್ಕಾಗಿ ಹಲವು ವರ್ಷಗಳಿಂದ ನಾನು ಕಾದಿದ್ದೇನೆ. ವೈದ್ಯಕೀಯ ಕಾರಣವಲ್ಲದೆ ಬೇರಾವುದೇ ಕಾರಣದಿಂದಲೂ ನಾನು ಈ ವಿಷಯವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ ದಿಯಾ.

ನಟಿ ದಿಯಾ ಮಿರ್ಜಾ 2014 ರಲ್ಲಿ ಸಾಹಿಲ್ ಸಂಗಾ ಅವರೊಟ್ಟಿಗೆ ವಿವಾಹವಾಗಿದ್ದರು. ಈ ಜೋಡಿ 2019 ರಲ್ಲಿ ಬೇರಾದರು. ನಂತರ ಫೆಬ್ರವರಿ 15 ರಂದು ವೈಭವ್ ರೇಖಿ ಅವರೊಟ್ಟಿಗೆ ದಿಯಾ ವಿವಾಹವಾಗಿದ್ದಾರೆ. ಈಗ ಈ ಇಬ್ಬರೂ ಪೋಷಕರಾಗುತ್ತಿದ್ದಾರೆ. ದಿಯಾ ಮಿರ್ಜಾಗೆ ಇದು ಮೊದಲ ಮಗು.

More from Filmibeat

English summary
Actress Dia Mirza replies to a troll who questions her pregnancy. She said we did not married because we are having a baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X