»   » ದಿಯಾಗೆ ಮದುವೆ ಮಂಟಪದಲ್ಲೇ ಮಕ್ಕಳ ಕನಸು

ದಿಯಾಗೆ ಮದುವೆ ಮಂಟಪದಲ್ಲೇ ಮಕ್ಕಳ ಕನಸು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಬೆಡಗಿ ದಿಯಾ ಮಿರ್ಜಾ ಅವರು ತಮ್ಮ ಬಹುಕಾಲದ ಗೆಳೆಯ ಸಾಹಿಲ್ ಸಂಗಾ ಅವರ ಕೈ ಹಿಡಿದಿದ್ದಾರೆ. ಆರ್ಯ ಸಮಾಜದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಅದರೆ, ಇದಕ್ಕೂ ಮುನ್ನ ಬಂಧು ಬಾಂಧವರ ಖುಷಿಯಾಗಿ ಮೆಹಂದಿ, ಸಂಗೀತ್ ಮುಂತಾದ ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ ಈ ಜೋಡಿ ಭಾಗವಹಿಸಿದೆ.

ಅ.17ರಂದು ದೆಹಲಿಯ ಹೊರವಲಯದ ಛತ್ತರ್‍ಪುರದ ಫಾರಂ ಹೌಸಿನಲ್ಲಿ ದಿಯಾ ಹಾಗೂ ಸಾಹಿಲ್ ಮದುವೆ ಸಂಭ್ರಮಕ್ಕೆ ಬಾಲಿವುಡ್ ಹಲವಾರು ಗಣ್ಯರು ಆಗಮಿಸಿದ್ದರು. ಅ.18ರಂದು ಸಾಂಪ್ರದಾಯಿಕ ಮದುವೆ ಜೊತೆಗೆ ಆರ್ಯ ಸಮಾಜದ ರೀತಿಯಲ್ಲಿ ವಿವಾಹ ಕಾರ್ಯ ನೆರವೇರಿದ್ದು ವಿಶೇಷ

ಈ ಜೋಡಿ ಈಗಾಗಲೇ ಬಾಲಿವುಡ್ ನಲ್ಲಿ ತಮ್ಮದೇ ಆದ ಬಾರ್ನ್ ಫ್ರೀ ಎಂಟರ್ಟೆನ್ಮೆಂಟ್ ಎಂಬ ಹೆಸರಿನ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದೆ. ಈ ಸಂಸ್ಥೆ ವಿದ್ಯಾಬಾಲನ್ ಪ್ರಧಾನ ಭೂಮಿಕೆಯಲ್ಲಿರುವ ಬಾಬಿ ಜಸೂಸ್ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಮದುವೆ ತಯಾರಿ ಸಂಭ್ರಮ ಚಿತ್ರ]

ದಿಯಾ ಅವರು ಮೆಹಂದಿ ಕಾರ್ಯಕ್ರಮದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಹಳದಿ ಬಣ್ಣದ ಅನಾರ್ಕಲಿ ಸ್ಯೂಟ್ ನಲ್ಲಿರುವ ದಿಯಾ ಹಾಗೂ ರೆಡ್ ಕುರ್ತಾ ತೊಟ್ಟಿರುವ ಸಾಹಿಲ್ ಜೋಡಿ ನೋಡಿ ಅಭಿಮಾನಿಗಳು ಶುಭ ಹಾರೈಸಿದ್ದರು. ಇದಾದ ನಂತರ ಮದುವೆ ಸಂಭ್ರಮದ ಚಿತ್ರಗಳು, ಮದುವೆ ಮಂಟಪದಲ್ಲಿ ದಿಯಾ ಹೇಳಿದ್ದೇನು ಮುಂದೆ ಓದಿ...

ನನಗೆ ಹೆಣ್ಣು ಮಗು ಬೇಕು ಎಂದ ದಿಯಾ
  

ನನಗೆ ಹೆಣ್ಣು ಮಗು ಬೇಕು ಎಂದ ದಿಯಾ

ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಸಮಾರಂಭ ಜರುಗಿದ ಮೇಲೆ ಪಂಡಿತರು ಶುಭ ಹಾರೈಸಿ ಆಶೀರ್ವಾದ ನೀಡುವ ಸಂದರ್ಭದಲ್ಲಿ ದಂಪತಿಗೆ ಪುತ್ರ ಪ್ರಾಪ್ತಿಯಾಗಲಿ ಎಂದಿದ್ದಾರೆ. ತಕ್ಷಣವೇ ಇಬ್ಬರು ನಮಗೆ ಮೊದಲಿಗೆ ಹೆಣ್ಣು ಮಗುವಾಗಲಿ ಎಂದು ಹಾರೈಸಿ ಎಂದಿದ್ದಾರೆ. ನಾವು ಹೆಣ್ಣು ಮಗುವನ್ನೇ ಬಯಸಿದ್ದೇವೆ ಎಂದು ದಿಯಾ ಹೇಳಿದ್ದಾರೆ.

ಮದುವೆಗೆ ಬಂದಿದ್ದ ಅತಿಥಿಗಳು
  

ಮದುವೆಗೆ ಬಂದಿದ್ದ ಅತಿಥಿಗಳು

ರಾಜಕುಮಾರ್ ಹಿರಾನಿ, ನಿಖಿಲ್ ಅಡ್ವಾಣಿ, ಸುಷ್ಮಿತಾ ಸೇನ್, ಲಾರಾ ದತ್ತಾ, ಮಹೇಶ್ ಭೂಪತಿ, ಶಂತನು ನಿಖಿಲ್, ಜಾಯೇದ್ ಖಾನ್ ಮುಂತಾದವರು ಮದುವೆಗೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದರು.

ಆರ್ಯ ಸಮಾಜದ ಮದುವೆ ಬಗ್ಗೆ ದಿಯಾ
  

ಆರ್ಯ ಸಮಾಜದ ಮದುವೆ ಬಗ್ಗೆ ದಿಯಾ

ಆರ್ಯ ಸಮಾಜದ ಮದುವೆ ಏಕೆ ಎಂಬುದರ ಬಗ್ಗೆ ವಿವರಣೆ ನೀಡಿದ ದಿಯಾ ನನ್ನ ತಂದೆ ಜರ್ಮನ್, ಮಲ ತಂದೆ ಮುಸ್ಲಿಂ, ತಾಯಿ ಬೆಂಗಾಳಿ, ಭಾವಿ ಪತಿ ಸಾಹಿಲ್ ಪಂಜಾಬಿ, ಮೆಹಂದಿ, ಸಂಗೀತ್, ಮದುವೆ ಎಲ್ಲವೂ ಸಾಂಪ್ರದಾಯಿಕ ರೀತಿಯಲ್ಲಿ ನಡೆದರೂ ನಾವು ಎಲ್ಲಾ ಮತಧರ್ಮದ ವಿಧಿ ವಿಧಾನವನ್ನು ಬದಿಗೊತ್ತಿ ಮದುವೆ ದಿನ ಮಾತ್ರ ಆರ್ಯ ಸಮಾಜಕ್ಕೆ ಹೋಗುತ್ತೇವೆ ಎಂದಿದ್ದರು.

ದಂಪತಿಗಳ ವಸ್ತ್ರ ವಿನ್ಯಾಸ ಚರ್ಚೆ ವಿಷಯವಾಗಿತ್ತು
  

ದಂಪತಿಗಳ ವಸ್ತ್ರ ವಿನ್ಯಾಸ ಚರ್ಚೆ ವಿಷಯವಾಗಿತ್ತು

ಮೆಹಂದಿ ನಂತರ ಆಕರ್ಷಕ ವಿನ್ಯಾಸದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದ ದಂಪತಿಗಳ ಚಿತ್ರ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ಮದುವೆ ದಿನ ಯಾವ ವಿನ್ಯಾಸದ ವಸ್ತ್ರ ಧರಿಸುತ್ತಾರೆ ಎಂಬ ಕುತೂಹಲವಿತ್ತು. ರಿತು ಕುಮಾರ್ ಅವರ ವಿನ್ಯಾಸ ಹಸಿರು ಬಣ್ಣದ ದಿರಿಸಿನಲ್ಲಿ ದಿಯಾ ಕಂಗೊಳಿಸಿದರೆ, ಸಾಹಿಲ್ ಅವರು ರಾಘವೇಂದ್ರ ರಾಥೋರ್ ವಿನ್ಯಾಸ ವಸ್ತ್ರ ಧರಿಸಿದ್ದರು.

English summary
Actress turned enterpreneur, Dia Mirza and Sahil Sangha are married now and the lovely couple made their first child preference apparent on the wedding day itself.We wish this Bollywood couple all the best wishes and a long happy married life together.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada