For Quick Alerts
  ALLOW NOTIFICATIONS  
  For Daily Alerts

  'ಅಪ್ಪ-ಅಮ್ಮನ ವಿಚ್ಛೇದನ ನನಗೆ ಶಕ್ತಿ ತುಂಬಿತ್ತು': ಪತಿಯಿಂದ ದೂರಾದ ನಟಿ ದಿಯಾ ಹೇಳಿಕೆ

  |

  ಬಾಲಿವುಡ್ ನಟಿ ದಿಯಾ ಮಿರ್ಜಾ ಇತ್ತೀಚಿಗೆ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ದಿಯಾ ವಿಚ್ಛೇದನದ ಬಗ್ಗೆ ಮಾತನಾಡುತ್ತ ಖಾಸಗಿ ಜೀವನದ ಹಲವು ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ವಿಚ್ಛೇದನ ಬಳಿಕ ಜೀವನ ಹೇಗಿರುತ್ತದೆ ಎನ್ನುವ ಅರಿವು ನನಗೆ ಮೊದಲೆ ಇತ್ತು ಎಂದು ಹೇಳಿದ್ದಾರೆ. 34 ವರ್ಷಗಳ ಹಿಂದೆಯೆ ಅಂದರೆ ದಿಯಾ ಚಿಕ್ಕವಳಾಗಿದ್ದಾಗ ಅವರ ಅಪ್ಪ-ಅಮ್ಮ ವಿಚ್ಛೇದನ ಪಡೆದು ಬೇರೆ ಆದರು. ಆ ಸಮಯ ನನಗೆ ತುಂಬ ಶಕ್ತಿ ತುಂಬಿದೆ. ಹಾಗಾಗಿ ನನ್ನ ಜೀವನದಲ್ಲಿ ಈಗ ಆ ಸಮಯ ಮರುಕಳಿಸಿದಾಗ ನಾನು ತುಂಬ ಶಕ್ತಿವಂತಳಾಗಿದ್ದೆ ಎಂದು ಹೇಳಿದ್ದಾರೆ.

  5 ವರ್ಷದ ದಾಂಪತ್ಯ ಜೀವನ ಮುರಿದುಕೊಂಡ ಸ್ಟಾರ್ ನಟಿ5 ವರ್ಷದ ದಾಂಪತ್ಯ ಜೀವನ ಮುರಿದುಕೊಂಡ ಸ್ಟಾರ್ ನಟಿ

   ಅಪ್ಪ-ಅಮ್ಮನನ್ನು ನೋಡಿ ಶಕ್ತಿ ಪಡೆದಿದ್ದೇನೆ

  ಅಪ್ಪ-ಅಮ್ಮನನ್ನು ನೋಡಿ ಶಕ್ತಿ ಪಡೆದಿದ್ದೇನೆ

  ದಿಯಾ ತುಂಬ ಚಿಕ್ಕವಳಾಗಿದ್ದಾಗನೆ ಅಪ್ಪ-ಅಮ್ಮ ವಿಚ್ಛೇದನ ಪಡೆದು ಬೇರೆ ಬೇರೆ ಆಗಿದ್ದರು. ತಂದೆ-ತಾಯಿ ವಿಚ್ಛೇದನ ಪಡೆದು ಈಗ 34 ವರ್ಷಗಳು ಕಳೆದಿವೆ. ಈಗ ಮಗಳು ದಿಯಾ 37ನೇ ವಯಸ್ಸಿನಲ್ಲಿ ಪತಿ ಸಾಹಿಲ್ ಸಂಘ ಅವರಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. "ಪೋಷಕರನ್ನು ನೋಡಿ ತುಂಬ ಶಕ್ತಿ ಪಡೆದಿದ್ದೀನಿ. ಹಾಗಾಗಿ ಈಗ ನಾನು ಈ ಜೀವನನ್ನು ಎದುರಿಸಬಲ್ಲೆ" ಎಂದು ಹೇಳಿದ್ದಾರೆ.

   ದಿಟ್ಟ ನಿರ್ಧಾರಕ್ಕೆ ಬರಬೇಕಾಗುತ್ತೆ

  ದಿಟ್ಟ ನಿರ್ಧಾರಕ್ಕೆ ಬರಬೇಕಾಗುತ್ತೆ

  "ಅಂದು ನನಗೆ ನಾಲ್ಕುವರೆ ವರ್ಷ. ಆಗಲೆ ನಾನೂ ಅಪ್ಪ-ಅಮ್ಮನ ವಿಚಾರವನ್ನು ನಿಭಾಯಿಸಿದ್ದೆ. ಅಂದ್ಮೇಲೆ 37ನೇ ವಯಸ್ಸಿನಲ್ಲಿ ನನಗೆ ಸಾಧ್ಯವಾಗದೆ ಇರಲು ಯಾವುದೆ ಕಾರಣವಿಲ್ಲ. ಬಹುತೇಕರು ಜೀವನದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಮುಂದೆ ಜೀವನ ಹೇಗಿರುತ್ತೆ, ಸಮಾಜ ನಮ್ಮನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಭಯ ಇರುತ್ತೆ. ಆದರೆ ಕೆಲವೊಮ್ಮೆ ದಿಟ್ಟ ನಿರ್ಧಾರಕ್ಕೆ ಬರಬೇಕಾಗುತ್ತೆ" ಎಂದು ಹೇಳಿದ್ದಾರೆ.

  ಬೆಂಗಳೂರಲ್ಲಿ ಚಿನ್ನದ ಮಳಿಗೆ ತೆರೆದ ದಿಯಾ ಮಿರ್ಜಾಬೆಂಗಳೂರಲ್ಲಿ ಚಿನ್ನದ ಮಳಿಗೆ ತೆರೆದ ದಿಯಾ ಮಿರ್ಜಾ

   ಕಳೆದ ವರ್ಷ ವಿಚ್ಛೇದನ ಪಡೆದ ಜೋಡಿ

  ಕಳೆದ ವರ್ಷ ವಿಚ್ಛೇದನ ಪಡೆದ ಜೋಡಿ

  ಕಳೆದ ವರ್ಷ ಆಗಸ್ಟ್ ನಲ್ಲಿ ದಿಯಾ ಪತಿಯ ಸಾಹಿಲ್ ಸಂಘಯಿಂದ ದೂರ ಆಗುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. 5 ವರ್ಷಗಳ ದಾಂಪತ್ಯ ಜೀವನವನ್ನು ಇಬ್ಬರು ಕಡಿದುಕೊಂಡು ಇಬ್ಬರು ಪ್ರತ್ಯೇಕ ಬದುಕುತ್ತಿದ್ದಾರೆ. ವಿಚ್ಛೇದನದ ನಂತರವು ಇಬ್ಬರು ಸ್ನೇಹಿತರಾಗಿ ಇರುವುದಾಗಿ ದಿಯಾ ಹೇಳಿಕೊಂಡಿದ್ದರು.

   2014ರಲ್ಲಿ ಮದುವೆ

  2014ರಲ್ಲಿ ಮದುವೆ

  2014 ಅಕ್ಟೋಬರ್ ನಲ್ಲಿ ದಿಯಾ ಮತ್ತು ಸಾಹಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದ್ ನಲ್ಲಿ ಇಬ್ಬರ ಮದುವೆ ಜರಿಗಿತ್ತು. ಮದುವೆ ಆಗಿ 11 ವರ್ಷಗಳು ಇಬ್ಬರು ಅನ್ಯೂನ್ಯವಾಗಿ ಇದ್ದರು. ಆದರೆ ಇಬ್ಬರ ನಡುವೆ ಉಂಟಾದ ಮನಸ್ತಾಪ ವಿಚ್ಛೇದನದ ಮೂಲಕ ಕೊನೆಕೊಂಡಿದೆ.

  English summary
  Bollywood Actress Dia Mirza said that I derived strength from my parents’ separation 34 years ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X