For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು: 2ನೇ ಮದುವೆಯಾದ ಖ್ಯಾತ ನಟಿ ದಿಯಾ ಮಿರ್ಜಾ

  |

  2001 ರಲ್ಲಿ ಬಿಡುಗಡೆ ಆದ 'ರೆಹನಾ ಹೇ ತೇರಿ ದಿಲ್ ಮೇ' ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ದಿಯಾ ಮಿರ್ಜಾ ಇದೀಗ ಎರಡನೇ ಮದುವೆಯಾಗಿದ್ದಾರೆ. ವೈಭವ್ ರೇಖಿ ಅವರನ್ನು ವರಿಸಿರುವ ದಿಯಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಫೆಬ್ರವರಿ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ದಿಯಾ ಮತ್ತು ವೈಭವ್ ರೇಖಿ ಅವರಿಗೆ ಬಾಲಿವುಡ್ ಗಣ್ಯರು ಮತ್ತು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಇಬ್ಬರ ಮದುವೆಗೆ ಕುಟುಂಬದವರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ.

  ಮತ್ತೊಮ್ಮೆ ವಿವಾಹವಾಗಲಿದ್ದಾರೆ ಬಾಲಿವುಡ್ ನಟಿ ದಿಯಾ ಮಿರ್ಜಾ?

  ಕೆಂಪು ಬಣ್ಣದ ಸೀರೆಯಲ್ಲಿ ದಿಯಾ ಮಿಂಚಿಂಗ್

  ಕೆಂಪು ಬಣ್ಣದ ಸೀರೆಯಲ್ಲಿ ದಿಯಾ ಮಿಂಚಿಂಗ್

  ಕೆಂಪು ಬಣ್ಣದ ಬನಾರಸ್ ಸೀರೆಯಲ್ಲಿ ಕಂಗೊಳಿಸಿದ್ರೆ, ದಿಯಾ ಪತಿ ವೈಭವ್ ಕುರ್ತಾ ಪೈಜಾಮನಲ್ಲಿ ಮಿಂಚಿದ್ದಾರೆ. ನವ ಜೋಡಿ ದಿಯಾ ಮತ್ತು ವೈಭವ್ ಅವರ ಮದುವೆ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ದಿಯಾ ಮೊದಲ ಪತಿ ಸಾಹಿಲ್ ಸಂಘಾ

  ದಿಯಾ ಮೊದಲ ಪತಿ ಸಾಹಿಲ್ ಸಂಘಾ

  ಹಲವು ವರ್ಷಗಳಿಂದ ಬಾಲಿವುಡ್ ನಲ್ಲಿ ಸಕ್ರೀಯರಾಗಿರುವ ದಿಯಾ ಸದ್ಯ ಸಹನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಮೊದಲು ದಿಯಾ ಮಿರ್ಜಾ ತಮ್ಮ ಬ್ಯುಸಿನೆಸ್ ಪಾರ್ಟನ್ ಆಗಿದ್ದ ಸಾಹಿಲ್ ಸಂಘಾ ಅವರನ್ನು ಮದುವೆಯಾಗಿದ್ದರು. ವಿವಾಹವಾದ11 ವರ್ಷದಲ್ಲಿ ಅಂದರೆ 2019 ರಲ್ಲಿ ಇಬ್ಬರೂ ಬೇರಾದರು.

  ಮೊದಲ ಪತಿಯಿಂದ ದೂರ ಆದ ಬಗ್ಗೆ ದಿಯಾ ಪ್ರತಿಕ್ರಿಯೆ

  ಮೊದಲ ಪತಿಯಿಂದ ದೂರ ಆದ ಬಗ್ಗೆ ದಿಯಾ ಪ್ರತಿಕ್ರಿಯೆ

  '11 ವರ್ಷದಿಂದ ನಾವು ಒಟ್ಟಾಗಿದ್ದೇವು. ಈಗ ಒಮ್ಮತ ನಿರ್ಧಾರದಿಂದ ದೂರವಾಗುತ್ತಿದ್ದೇವೆ. ಇಲ್ಲಿಂದ ನಾವು ಕೇವಲ ಸ್ನಹಿತರಾಗಿ ಮುಂದುವರಿಯಲಿದ್ದೇವೆ. ನಮ್ಮಲ್ಲಿದ್ದ ಪ್ರೀತಿ ಮತ್ತು ಗೌರವ ಉಳಿದುಕೊಳ್ಳಲಿದೆ. ನಮ್ಮ ಮುಂದಿನ ಜರ್ನಿ ಬೇರೆ ಮಾರ್ಗದಲ್ಲಿ ಸಾಗಬೇಕಿದೆ. ನಮ್ಮ ಬಗ್ಗೆ ಪ್ರೀತಿ ಕಾಳಜಿ ಹೊಂದಿರುವ ಕುಟುಂಬ, ಗೆಳೆಯರಿಗೆ ಧನ್ಯವಾದ' ಎಂದು ದಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

  ದಾಸನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಸ್ಟಾರ್ ಗಳು | Filmibeat Kannada
  ವೈಭವ್ ಅವರಿಗೂ ಎರಡನೇ ವಿವಾಹ

  ವೈಭವ್ ಅವರಿಗೂ ಎರಡನೇ ವಿವಾಹ

  2019ರಿಂದ ಒಂಟಿ ಜೀವನ ನಡೆಸುತ್ತಿದ್ದ 40 ವರ್ಷದ ನಟಿ ದಿಯಾ ಇದೀಗ ವೈಭವ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈಭವ್ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಅನೇಕ ವರ್ಷಗಳಾಗಿದೆ. ವೈಭವ್ ಅವರಿಗೆ ಒಬ್ಬಳು ಮಗಳು ಸಹ ಇದ್ದಾಳೆ.

  English summary
  Bollywood Actress Dia Mirza tie the knot with Vaibhav Rekhi photo goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X