»   » ಸಪೂರ ಸುಂದರಿಯ ನೆಕ್ಲೆಸ್ ಕದ್ದ ಚೋರ ಯಾರು?

ಸಪೂರ ಸುಂದರಿಯ ನೆಕ್ಲೆಸ್ ಕದ್ದ ಚೋರ ಯಾರು?

Posted By:
Subscribe to Filmibeat Kannada

ನಟಿ ಸೋನಂ ಕಪೂರ್ ಟೈಮ್ ಖರಾಬ್ ಆಗಿರುವ ಹಾಗಿದೆ. ಶೂಟಿಂಗ್ ಸೆಟ್ ನಲ್ಲಿ ಕುಸಿದು ಬಿದ್ದು, ಸೋನಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುದ್ದಿ ನಿನ್ನೆಯಷ್ಟೇ ಹೊರಬಿದ್ದಿತ್ತು. ಅದರ ಬೆನ್ನಲ್ಲೇ ಸೋನಂ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮೆಂಡ್ ನೆಕ್ಲೆಸ್ ಕಳುವಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 4ನೇ ತಾರೀಖು ಪಾರ್ಟಿಯೊಂದಕ್ಕೆ ಸೋನಂ ತೆರಳಿದ್ದರು. ಪಾರ್ಟಿ ಮುಗಿಸಿ ಮನೆಗೆ ಮಧ್ಯರಾತ್ರಿ ಬಂದ ಸೋನಂ, ಧರಿಸಿದ್ದ ಒಡವೆಗಳನ್ನ ತೆಗೆದು ಅವರ ರೂಮಿನ ಡ್ರಾಯರ್ ನಲ್ಲಿ ರಾತ್ರಿ ಸುಮಾರು 2 ಗಂಟೆಗೆ ಇಟ್ಟಿದ್ದರಂತೆ.

Diamond necklace stolen from Sonam Kapoor's home

ಆದ್ರೆ, ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಡ್ರಾಯರ್ ನಲ್ಲಿದ್ದ ವಜ್ರದ ನೆಕ್ಲೆಸ್ ಕಾಣೆಯಾಗಿದೆ. ಅಸಲಿಗೆ ಇದು ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಾಗಿ ಆಭರಣ ಮಳಿಗೆಯೊಂದು ಸೋನಂಗೆ ನೀಡಿದ ವಜ್ರದ ನೆಕ್ಲೆಸ್. ಪಾರ್ಟಿ ಮುಗಿದ ಬಳಿಕ ಆಭರಣ ಮಳಿಗೆಗೆ ಸೋನಂ, ನೆಕ್ಲೆಸ್ ನ ವಾಪಸ್ಸು ನೀಡಬೇಕಿತ್ತು.

ದುರಾದೃಷ್ಟವಶಾತ್, ಅಷ್ಟರಲ್ಲಿ ವಜ್ರದ ಆಭರಣ ಕಳುವಾಗಿದೆ. ವಿಷಯ ತಿಳಿದ ತಕ್ಷಣ, ಜುಹು ಪೊಲೀಸ್ ಠಾಣಿ ಮೆಟ್ಟಿಲೇರಿದ ಸೋನಂ, ದೂರು ನೀಡಿದ್ದಾರೆ. ತನಿಖೆ ಚುರುಕು ಗೊಳಿಸಿರುವ ಪೊಲೀಸರು ಸೋನಂ ಮನೆಯ ಸಿ.ಸಿ.ಟಿ.ವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. [ಸೆಟ್ ನಲ್ಲೇ ಕುಸಿದು ಬಿದ್ದ ಸೋನಮ್ ಕಪೂರ್]

ಒಂದ್ಕಡೆ ಅನಾರೋಗ್ಯದಿಂದ ಬಳಲುತ್ತಿರುವ ಸೋನಂ, ಡೈಮೆಂಡ್ ನೆಕ್ಲೆಸ್ ಬಗ್ಗೆಯೂ ಚಿಂತಾಕ್ರಾಂತರಾಗಿದ್ದಾರೆ. ಒಂದ್ವೇಳೆ ನೆಕ್ಲೆಸ್ ಸಿಗದೆ ಹೋದರೆ, ಆಭರಣ ಮಳಿಗೆಗೆ ಸೋನಂ ನಷ್ಟವನ್ನ ಭರಿಸಿ ಕೊಡಲೇಬೇಕು. ಟೈಮ್ ಕೆಟ್ಟರೆ ಹೀಗೆ... (ಏಜೆನ್ಸೀಸ್)

English summary
Bollywood Actress Sonam Kapoor has registered complaint with the Juhu Police on Feb 5th after she found a diamond necklace missing from her home.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada