For Quick Alerts
  ALLOW NOTIFICATIONS  
  For Daily Alerts

  ಕಿಯಾರಾ ಅಡ್ವಾಣಿ ಬಾಯ್‌ಫ್ರೆಂಡ್‌ ಬಗ್ಗೆ ಅಕ್ಷಯ್ ಕುಮಾರ್ ಕೊಟ್ಟರು ಸುಳಿವು

  |

  ನಟಿ ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲಿ ಹಾಟ್ ಫೇವರೆಟ್ ನಟಿ. ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ಈ ನಟಿ, ನಂತರ ತೆಲುಗು ಸಿನಿಮಾಗಳಲ್ಲಿ ಪ್ರಸ್ತುತ ಹಿಂದಿ ಸಿನಿರಂಗದಲ್ಲಿ ಬೇಡಿಕೆಯಲ್ಲಿದ್ದಾರೆ.

  ಕಿಯರಾ ನಟಿಸಿರುವ ಸಿನಿಮಾಗಳು ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ. ಜೊತೆಗೆ ಅವರ ಖಾಸಗಿ ಜೀವನದ ಬಗ್ಗೆಯೂ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಅವರ ಪ್ರೀತಿ ವಿಷಯ ಪ್ರಮುಖವಾದದ್ದು.

  ಕಿಯಾರಾ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಡೇಟಿಂಗ್-ಮೀಟಿಂಗ್ ಎಂದು ಆಗಾಗ್ಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಗ್ಗೆ ಕಿಯಾರಾ ಆಗಲಿ ಸಿದ್ಧಾರ್ಥ್ ಆಗಲಿ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಕಿಯಾರಾ ಸಹ ನಟ ಅಕ್ಷಯ್‌ ಕುಮಾರ್. ಕಿಯಾರಾ ಬಾಯ್‌ಫ್ರೆಂಡ್‌ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಸುಳಿವು ನೀಡಿದ್ದಾರೆ.

  ಕಪಿಲ್ ಶರ್ಮಾ ಶೋ ಗೆ ಭೇಟಿ ನೀಡಿದ್ದ ನಟಿ

  ಕಪಿಲ್ ಶರ್ಮಾ ಶೋ ಗೆ ಭೇಟಿ ನೀಡಿದ್ದ ನಟಿ

  'ಲಕ್ಷ್ಮಿ' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ಅಕ್ಷಯ್ ಕುಮಾರ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆಂದು ಖ್ಯಾತ ಟಿವಿ ಶೋ 'ದಿ ಕಪಿಲ್ ಶರ್ಮಾ ಶೋ' ಗೆ ಇತ್ತೀಚೆಗೆ ಈ ಜೋಡಿ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ನಿರೂಪಕ ಕಪಿಲ್ ಶರ್ಮಾ, ಕಿಯಾರಾ ಅವರ ಬಳಿ ಅವರ ಮದುವೆ, ಪ್ರೀತಿಯ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

  'ಮದುವೆ ಆಗುವವರೆಗೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ'

  'ಮದುವೆ ಆಗುವವರೆಗೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ'

  ಆಗ ಪಕ್ಕದಲ್ಲೇ ಇದ್ದ ಅಕ್ಷಯ್ ಕುಮಾರ್, 'ಈ ಪ್ರಶ್ನೆಗೆ ನಾನೂ ಉತ್ತರ ಬಯಸುತ್ತೇನೆ' ಎನ್ನುತ್ತಾರೆ. ಕಪಿಲ್ ಶರ್ಮಾ ಪ್ರಶ್ನೆಗೆ ಯೋಚಿಸಿ ಉತ್ತರ ನೀಡುವ ಕಿಯಾರಾ, 'ನಾನು ನೇರವಾಗಿ ಮದುವೆ ಆಗುತ್ತೇನೆ, ಮದುವೆ ಆಗುವವರೆಗೆ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ' ಎನ್ನುತ್ತಾರೆ.

  ಕಿಯಾರಾ 'ಸಿದ್ಧಾಂತ' ಹೊಂದಿದ ಯುವತಿ: ಅಕ್ಷಯ್

  ಕಿಯಾರಾ 'ಸಿದ್ಧಾಂತ' ಹೊಂದಿದ ಯುವತಿ: ಅಕ್ಷಯ್

  ಕಿಯಾರಾ ನೀಡಿದ ಉತ್ತರಕ್ಕೆ ವ್ಯಂಗ್ಯವಾಗಿ ನಗುವ ಅಕ್ಷಯ್ ಕುಮಾರ್, 'ಈಕೆ ಬಹಳ 'ಸಿದ್ಧಾಂತ' ಹೊಂದಿದ ಯುವತಿ' ಎನ್ನುತ್ತಾರೆ. ಅಲ್ಲಿದ್ದರಿಗೆಲ್ಲಾ ಅರ್ಥವಾಗುತ್ತದೆ, ಅಕ್ಷಯ್ ಕುಮಾರ್ ಬೇಕೆಂದಲೇ 'ಸಿದ್ಧಾಂತ' ಪದವನ್ನು ವಿಶೇಷಣಗೊಳಿಸಿ ಹೇಳಿದ್ದಾರೆ ಎಂದು. ಕಿಯಾರಾ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಉದ್ದೇಶಿಸಿಯೇ ಅಕ್ಷಯ್ ಸಿದ್ಧಾಂತ ಎಂದಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಚರ್ಚೆಯೂ ನಡೆದಿದೆ.

  Recommended Video

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada
  ಲಕ್ಷ್ಮಿ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ

  ಲಕ್ಷ್ಮಿ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ

  ನಟಿ ಕಿಯಾರಾ ಅಡ್ವಾಣಿ ಅಭಿನಯದ ಲಕ್ಷ್ಮಿ ಸಿನಿಮಾ ಕೆಲವೇ ದಿನಗಳಲ್ಲಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. 'ಗುಡ್‌ನ್ಯೂಜ್' ನಂತರ ಅಕ್ಷಯ್ ಜೊತೆಗೆ ಇದು ಅವರ ಎರಡನೇ ಸಿನಿಮಾ. ಕಿಯಾರಾ, ವೆಬ್‌ಸರಣಿಯೊಂದರಲ್ಲಿ ನಟಿಸುತ್ತಿದ್ದಾರೆ. ಶೇರ್‌ಶಾ, ಇಂದು ಕಿ ಜವಾನಿ, ಭೂಲ್ ಭುಲಯ್ಯಾ 2 ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ.

  English summary
  Did Akshay Kumar confirms Kiara Advani, Sidharth Malhotra relationship in Kapil Sharma Show.
  Wednesday, November 4, 2020, 22:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X