»   » ದಿಗಂತ್ ಬಾಲಿವುಡ್ ಕನಸು ಕೊನೆಗೂ ನನಸು

ದಿಗಂತ್ ಬಾಲಿವುಡ್ ಕನಸು ಕೊನೆಗೂ ನನಸು

Posted By:
Subscribe to Filmibeat Kannada

ಕನ್ನಡದಲ್ಲಿ 'ಬರ್ಫಿ' ತಿಂದು ಬಾಯಿ ಸಿಹಿ ಮಾಡಿಕೊಂಡಿದ್ದ ಧೂದ್ ಪೇಡ ಅಲಿಯಾಸ್ ದಿಗಂತ್ ಬಾಯಿಗೆ ಮತ್ತೊಮ್ಮೆ ಸಿಹಿ ಬಿದ್ದಿದೆ. ದಿಗಂತ್ ಅವರ ಬಾಲಿವುಡ್ ಎಂಟ್ರಿ ಖಚಿತವಾಗಿದೆ.'ದಿಗಂತ'ದಷ್ಟು ಆಸೆ ಇಟ್ಟು ಕೊಂಡು ಮುಂಬೈಗೆ ಹಾರಿದ್ದ ತೀರ್ಥಹಳ್ಳಿ ಹುಡುಗನಿಗೆ ಕೊನೆಗೂ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

ಲಭ್ಯ ಮಾಹಿತಿ ಪ್ರಕಾರ ತಮಿಳಿನಲ್ಲಿ ಭಾರಿ ಸದ್ದು ಮಾಡಿದ್ದ ಕಡಿಮೆ ಬಜೆಟ್ಟಿನ ಚಿತ್ರ ಚೆನ್ನೈ 600028 ಈಗ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಹಿಂದಿ ಅವತರಣಿಕೆಯಲ್ಲಿ ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿಗಂತ್ ಜತೆಗೆ ಒಂದು ಕಾಲದ ಜನಪ್ರಿಯ ವಿಲನ್ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ ಕಪೂರ್ ನಟಿಸುತ್ತಿದ್ದಾರೆ.

ಡೇವಿಡ್ ಚಿತ್ರ ಖ್ಯಾತಿಯ ವಿಜಯ್ ನಂಬಿಯಾರ್ ಅವರ ಸಹ ನಿರ್ಮಾಣದ ಈ ಚಿತ್ರದ ಹಿಂದಿ ಹೆಸರು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಚಿತ್ರ ಸೆಟ್ಟೇರಿರುವ ಸುದ್ದಿಯನ್ನು ವಿಜಯ್ ಸ್ಪಷ್ಟಪಡಿಸಿದ್ದಾರೆ.

ನನ್ನ ಸಹಾಯಕ ಯಜಾದ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾನೆ. ಸಿದ್ಧಾಂತ್ ಮೂಲ ಚಿತ್ರದಲ್ಲಿದ್ದ ಶಿವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ದಿಗಂತ್ ಅವರು ಜೈ ಪಾತ್ರಧಾರಿಯಾಗಿದ್ದಾರೆ. ಪೂರ್ಣ ಪ್ರಮಾಣದ ಶೂಟಿಂಗ್ ನವೆಂಬರ್ ನಲ್ಲಿ ನಡೆಯಲಿದೆ.

Diganth's Bollywood Dream Renewed

ಚೆನ್ನೈ 600028 : ಸದ್ಯಕ್ಕೆ 'ಬಿರಿಯಾನಿ' ಬೇಯುಸುತ್ತಿರುವ ನಿರ್ದೇಶಕ ವೆಂಕಟ್ ಪ್ರಭು ಅವರ ಚೊಚ್ಚಲ ಚಿತ್ರ ಇದಾಗಿದೆ. 2007ರಲ್ಲಿ ಚೆನ್ನೈ 600028, 2008ರಲ್ಲಿ ಸರೋಜ, 2010ರಲ್ಲಿ ಗೋವಾ ಹಾಗೂ 2011ರಲ್ಲಿ ಅಜಿತ್ ಅಭಿನಯದ ಮಕಾಂಥ ಎಂಬ ಯಶಸ್ವಿ ಚಿತ್ರಗಳನ್ನು ವೆಂಕಟ್ ನೀಡಿದ್ದಾರೆ.

ಚೆನ್ನೈ 600028 ಗಲ್ಲಿ ಕ್ರಿಕೆಟ್ ತಂಡಗಳ ಕಥೆಯಾಗಿದ್ದು, ಹಾಸ್ಯ, ಪ್ರೇಮ ಕಥೆ, ಹುಡುಗಾಟ ನಡುವೆ ಸಾಗುವ ಉತ್ತಮ ಮನರಂಜನಾ ಚಿತ್ರ ಕಥೆ ಹೊಂದಿದೆ.

ದಿಗಂತ್ ಕಹಾನಿ:1920 ಹೆಸರಿನ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಿತ್ತು. ಆಗಸ್ಟ್ ನಲ್ಲಿ ಶೂಟಿಂಗ್ ಶುರು ಎನ್ನಲಾಗಿತ್ತು. ವಿಕ್ರಮ್ ಭಟ್ ಅವರ ನಿರ್ಮಾಣದ ಈ ಚಿತ್ರ ಈ ಹಿಂದೆ ಹಿಟ್ ಆದ 1920 ಹೆಸರಿನ ಚಿತ್ರದ ಎರಡನೇ ಭಾಗವಾಗಿತ್ತು. ಆದರೆ, ಶೂಟಿಂಗ್ ನಿಂತಿದೆ. ಯಾವಾಗ ಮತ್ತೆ ಆರಂಭವೋ ಗೊತ್ತಿಲ್ಲ. ದಿಗಂತ್ ಅಂತೂ ಚಿತ್ರದಿಂದ ಹೊರ ಬಂದಿದ್ದರು.

ಈ ಮಧ್ಯೆ ದಿಗಂತ್ ಅವರು ದಿನಕರ್ ತೂಗುದೀಪ ಅವರ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ಹಬ್ಬಿತ್ತು.

1920 ಯಾಕೆ ವಿಳಂಬವಾಯಿತೋ ನನಗೆ ಗೊತ್ತಿಲ್ಲ. ನಾನು ತುಂಬಾ ತಿಂಗಳು ಕಾದೆ. ಆದರೆ, ದಿನಕರ್ ತೂಗುದೀಪ ಅವರ ಚಿತ್ರಕ್ಕೆ ಈಗಾಗಲೇ ಸಹಿ ಹಾಕಿದ್ದೇನೆ. ಹಾಗಾಗಿ ನಾನು ಮತ್ತೆ 1920 ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ದಿಗಂತ್ ಕೂಡಾ ಸ್ಪಷ್ಟಪಡಿಸಿದ್ದರು. ಆದರೆ, ಈಗ ಮತೊಮ್ಮೆ ಮುಂಬೈ ವಿಮಾನ ಏರುತ್ತಿದ್ದಾರೆ.  ಒಟ್ಟಾರೆ, ದಿಗಂತ್ ಬಾಲಿವುಡ್ ಎಂಟ್ರಿ ವಿಳಂಬವಾಗಲಿದೆ ಆದರೆ, ಬಾಲಿವುಡ್ ಬಾಗಿಲು ಬಂದ್ ಆಗಿಲ್ಲ ಎಂಬ ಮಾತು ಈಗ ನಿಜವಾಗಿದೆ.

English summary
Kannada actor Diganth, who is called as 'Doodh Peda' by Kannada audience, is finally making his Bollywood debut. Earlier, it was said the actor will be seen in Hindi flick 1920 London. Latest buzz said that Diganth has been roped into play the lead role in the Hindi remake of Tamil flick Chennai 600028.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada