twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರಿ ಗೌರವದೊಂದಿಗೆ ದಿಲೀಪ್ ಕುಮಾರ್ ಅಂತ್ಯಕ್ರಿಯೆ

    |

    ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಅಂತ್ಯಕ್ರಿಯೆ ಮುಂಬೈನ ಜುಹು ಕಬ್ರಸ್ತಾನ್‌ದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮುಸ್ಲಿಂ ಧರ್ಮದಂತೆ ನೆರವೇರಿದೆ.

    ಭಾರತೀಯ ಚಿತ್ರರಂಗಕ್ಕೆ ಹಾಗೂ ಹಿಂದಿ ಚಿತ್ರರಂಗಕ್ಕೆ ದಿಲೀಪ್ ಕುಮಾರ್ ನೀಡಿರುವ ಕೊಡುಗೆ ಗೌರವಿಸಿ ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಗೌರವ ನೀಡಲು ಆದೇಶಿಸಿತ್ತು. ಅದರಂತೆ ಮುಂಬೈ ಪೊಲೀಸರು ಅಂತ್ಯಕ್ರಿಯೆ ವೇಳೆ ಗೌರವ ಸಲ್ಲಿಸಿದ್ದಾರೆ.

    ಮಹಮ್ಮದ್ ಯೂಸುಫ್ ಖಾನ್ ಆಗಿದ್ದವರು ದಿಲೀಪ್ ಕುಮಾರ್ ಆಗಿ ಬದಲಾಗಿದ್ದೇಕೆ?ಮಹಮ್ಮದ್ ಯೂಸುಫ್ ಖಾನ್ ಆಗಿದ್ದವರು ದಿಲೀಪ್ ಕುಮಾರ್ ಆಗಿ ಬದಲಾಗಿದ್ದೇಕೆ?

    ಬಾಲಿವುಡ್ ಇಂಡಸ್ಟ್ರಿಯ 'ಟ್ರಾಜಿಡಿ ಕಿಂಗ್' ದಿಲೀಪ್ ಕುಮಾರ್ ಬುಧವಾರ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಜುಲೈ 7 ರಂದು ಬೆಳಗ್ಗೆ 7.20ಕ್ಕೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

    Dilip Kumar Final Rites: Actor laid to rest with full state honours

    ಅಂತ್ಯಕ್ರಿಯೆಗೂ ಮುಂಚೆ ದಿಲೀಪ್ ಕುಮಾರ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶರದ್ ಪವರ್, ಶಬಾನಾ ಅಜ್ಮಿ, ಮಧುರ್ ಭಂಡಾರ್ಕರ್, ಶಾರೂಖ್ ಖಾನ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದುಕೊಂಡರು.

    ಪ್ರಧಾನಿ ಮೋದಿ, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಕನ್ನಡ ನಟ ಸುದೀಪ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು.

    ಸುಮಾರು 5 ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ದಿಲೀಪ್ ಕುಮಾರ್ 65ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 1991 ರಲ್ಲಿ ಪದ್ಮಭೂಷಣ ಹಾಗೂ 1994 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರು.

    Recommended Video

    ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಟ ನಟಿಯಾದ ಹರಿಪ್ರಿಯಾ | Filmibeat Kannada

    1998 ರಲ್ಲಿ ಪಾಕಿಸ್ತಾನ ಸರ್ಕಾರ ದಿಲೀಪ್ ಕುಮಾರ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ನಿಶಾನ್-ಎ-ಇಮ್ತಿಯಾಜ್' ನೀಡಿ ಗೌರವಿಸಿತು.

    English summary
    Bollywood Legend Actor Dilip Kumar Final Rites: Actor laid to rest with full state honours.
    Wednesday, July 7, 2021, 17:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X