ನಟ ದಿಲೀಪ್ ಕುಮಾರ್ ಭೇಟಿ ಮಾಡಿದ ಶಾರೂಖ್
ದಿಲೀಪ್ ಕುಮಾರ್ ಭೇಟಿ ಮಾಡಿದ ಶಾರೂಖ್ ಖಾನ್. ಅಸ್ವಸ್ಥರಾಗಿದ್ದ ದಿಲೀಪ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ದಿಲೀಪ್ ಕುಮಾರ್.
ನವದೆಹಲಿ, ಆಗಸ್ಟ್ 16: ಇತ್ತೀಚೆಗೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಅವರ ಕುಶಲೋಪರಿ ವಿಚಾರಿಸಿದ್ದಾರೆ.
ಅಂದಹಾಗೆ, ಶಾರೂಖ್ ಖಾನ್ ಅವರನ್ನು ದಿಲೀಪ್ ಅವರು ತಮ್ಮ ಮಾನಸ ಪುತ್ರ ಎಂದೇ ಪರಿಗಣಿಸಿದ್ದರು. ಹಾಗಾಗಿ, ಅವರ ಬಾಂಧವ್ಯ ಅಪ್ಪ-ಮಗನ ಬಾಂಧವ್ಯದಂತಿದೆ.

ಬುಧವಾರ, ದಿಲೀಪ್ ಅವರ ನಿವಾಸಕ್ಕೆ ಆಗಮಿಸಿದ ಶಾರೂಖ್ ಖಾನ್, ದಿಲೀಪ್ ಅವರನ್ನು ಮಾತನಾಡಿಸಿದರು. ಕೆಲ ದಿನಗಳ ಹಿಂದೆ, ತೀವ್ರ ಅನಾರೋಗ್ಯದಿಂದ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ದಿಲೀಪ್ ಕುಮಾರ್ ದಾಖಲಾಗಿದ್ದಾಗ ಇತ್ತ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಶಾರೂಖ್ ಖಾನ್,ಕೇವಲ ಫೋನಿನಲ್ಲಿ ಮಾತ್ರ ದಿಲೀಪ್ ಅವರ ಆರೋಗ್ಯ ವಿಚಾರಿಸಿದ್ದರು.
ಹಾಗಾಗಿ, ಈಗ ಬಿಡುವು ಮಾಡಿಕೊಂಡು ಅವರ ನಿವಾಸಕ್ಕೆ ತೆರಳಿ ಹಿರಿಯ ಜೀವವನ್ನು ಮಾತನಾಡಿಸಿಕೊಂಡು ಹೋಗಿದ್ದಾರೆ. ಆ ಭೇಟಿಯ ಕೆಲ ಫೋಟೋಗಳನ್ನು ಅವರ ಪತ್ನಿ ಸಾಯಿರಾಬಾನು ಅವರು ದಿಲೀಪ್ ಕುಮಾರ್ ಅವರ ಟ್ವಿಟ್ಟರ್ ಅವರ ಖಾತೆಯಲ್ಲಿ ಪ್ರಕಟಿಸಿದ್ದಾರೆ.


Click it and Unblock the Notifications











