For Quick Alerts
  ALLOW NOTIFICATIONS  
  For Daily Alerts

  ಕಪ್ಪು-ಬಿಳುಪು ಕಾಲದಲ್ಲಿಯೇ ಒಂದು ಲಕ್ಷ ಸಂಭಾವನೆ ಪಡೆದಿದ್ದರು ಈ ನಟ

  By ಫಿಲ್ಮೀಬೀಟ್ ಡೆಸ್ಕ್‌
  |

  ನಟರ ಸಂಭಾವನೆ ಅದ್ವಾವ ಮಟ್ಟಿಗೆ ಏರಿದೆಯೆಂದರೆ ಕೋಟಿಗಳೆಂಬುದು ಸ್ಟಾರ್ ನಟರಿಗೆ ಲೆಕ್ಕಕ್ಕಿಲ್ಲದಂತಾಗಿಬಿಟ್ಟಿದೆ.

  ಬಾಲಿವುಡ್‌ನ ಸ್ಟಾರ್ ನಟರು ಒಂದು ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ದಕ್ಷಿಣದ ನಟರೂ ಸಹ ಇವರಿಗೇನು ಕಡಿಮೆ ಇಲ್ಲದಂತೆ ಪ್ರಭಾಸ್, ವಿಜಯ್, ರಜನೀಕಾಂತ್ ಅಂಥಹಾ ನಟರು ನೂರಾರು ಕೋಟಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ನಿರ್ಮಾಣ ಸಂಸ್ಥೆಗಳು ಸಹ ನಟರಿಗೆ ಸಂಭಾವನೆ ನೀಡಲು ಹಿಂದು-ಮುಂದು ನೋಡುತ್ತಿಲ್ಲ. ಬದಲಿಗೆ ಪ್ರತಿಷ್ಠೆಯಾಗಿ ಭಾವಿಸಿವೆ.

  ನಟರುಗಳ ನಡುವೆ ಯಾರು ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಬಗ್ಗೆ ಪರೋಕ್ಷ ಪೈಪೋಟಿಯೇ ಏರ್ಪಟ್ಟಂತಿದೆ. ಸಿನಿಮಾ ನಟರು ಅದರಲ್ಲಿಯೂ ನಾಯಕ ನಟರು ದೊಡ್ಡ ಸಂಭಾವನೆ ಪಡೆಯುವುದು ಇದು ಮೊದಲೇನಲ್ಲ. ಒಟ್ಟಾರೆ ಸಿನಿಮಾವೇ ಕೆಲವು ಲಕ್ಷಗಳಲ್ಲಿ ನಿರ್ಮಾಣವಾಗುತ್ತದ್ದ ಕಪ್ಪು-ಬಿಳುಪು ಕಾಲದಲ್ಲಿಯೇ ಒಂದು ಲಕ್ಷ ಹಣವನ್ನು ಖ್ಯಾತ ನಟರೊಬ್ಬರು ಸಂಭಾವನೆಯಾಗಿ ಪಡೆದಿದ್ದರು.

  ಹಿಂದಿ ಸಿನಿಮಾರಂಗದ ದಂತಕತೆ ಎಂದೇ ಕರೆಯಲಾಗುವ ದಿಲೀಪ್ ಕುಮಾರ್ ಅವರು ಮೊತ್ತ ಮೊದಲ ಬಾರಿಗೆ ಒಂದು ಲಕ್ಷ ರುಪಾಯಿ ಹಣವನ್ನು ಸಂಭಾವನೆಯಾಗಿ ಪಡೆದಿದ್ದರು. ಅದೂ 1950ರಲ್ಲಿ. 1940ರ ವೇಳೆಗೆ ಸಿನಿಮಾದಲ್ಲಿ ನಟಿಸಲು ಆರಂಭಿಸಿದ ದಿಲೀಪ್ ಕುಮಾರ್‌ 1950ರಲ್ಲಿ ದೊಡ್ಡ ಸ್ಟಾರ್ ನಟರಾಗಿ ಗುರುತಿಸಿಕೊಂಡರು. ಅದೇ ಸಮಯದಲ್ಲಿ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಒಂದು ಲಕ್ಷ ಹಣವನ್ನು ಸಂಭಾವನೆಯಾಗಿ ದಿಲೀಪ್ ಪಡೆದರು. ಆ ನಂತರ ಅವರ ಸಂಭಾವನೆ ಇಳಿಕೆ ಆಗಲೇ ಇಲ್ಲ.

  ಹಲವು ದಶಕಗಳ ಕಾಲ ಸಿನಿಮಾರಂಗದಲ್ಲಿದ್ದ ದಿಲೀಪ್ ಕುಮಾರ್ ಇದೇ ವರ್ಷದ ಜುಲೈ 21ರಂದು ನಿಧನ ಹೊಂದಿದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ದಿಲೀಪ್ ಅವರ ಒಟ್ಟು ಆಸ್ತಿ ಮೌಲ್ಯ 627 ಕೋಟಿಗಳದ್ದಾಗಿತ್ತು ಎನ್ನಲಾಗಿದೆ.

  ದಿಲೀಪ್ ಕುಮಾರ್ ನಂತರ ಹಲವು ನಟರು ಲಕ್ಷಾಂತರ ಹಣವನ್ನು ಸಂಭಾವನೆಯಾಗಿ ಪಡೆಯಲು ಆರಂಭಿಸಿದರು. ದಿಲೀಪ್ ಕುಮಾರ್ ಒಂದು ಲಕ್ಷ ಹಣ ಸಂಭಾವನೆ ಪಡೆದು 70 ವರ್ಷಗಳಾಗಿವೆ. ಈಗ ಅದೇ ಬಾಲಿವುಡ್ ನಟರು ಸಿನಿಮಾ ಒಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

  ಅಪ್ಪನೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ದಿಲೀಪ್ ಕುಮಾರ್, ಸ್ವಾತಂತ್ರ್ಯಕ್ಕೆ ಮುನ್ನ ಬ್ರಿಟೀಷ್ ಅಧಿಕಾರಿಗಳಿಗಾಗಿ ಸ್ಯಾಂಡ್‌ವಿಚ್ ಮಾಡುವ ಬಾಣಸಿಗರಾಗಿದ್ದರು. ಆದರೆ ಅದೃಷ್ಟ ಅವರನ್ನು ಸಿನಿಮಾ ನಟನಾಗುವಂತೆ ಮಾಡಿತು. ಅಲ್ಲಿಂದ ಹಿಂದಿ ಸಿನಿಮಾದ ದಿಕ್ಕನ್ನೇ ದಿಲೀಪ್ ಕುಮಾರ್ ಬದಲಾಯಿಸಿದರು. ಭಾರತದ ಚಿತ್ರರಂಗದ ದಂತಕತೆಯಾಗಿ ನೆಲೆ ನಿಂತರು.

  1944ರಲ್ಲಿ ನಟನೆ ಆರಂಭಿಸಿದ ದಿಲೀಪ್ ಕುಮಾರ್ 1998ರ ವರೆಗೆ ಒಟ್ಟು 54 ವರ್ಷಗಳ ಕಾಲ ಸಿನಿಮಾಗಳಲ್ಲಿ ನಟಿಸಿದರು. ಬಾಲನಟ ಅಲ್ಲದೆ ಇಷ್ಟು ಸುದೀರ್ಘ ಅವಧಿಗೆ ನಾಯಕ ನಟನಾಗಿ, ಪೋಷಕ ನಟನಾಗಿ ಸಿನಿಮಾಗಳಲ್ಲಿ ನಟಿಸಿದ ನಟರು ಭಾರತದಲ್ಲಿ ಬಹಳ ಅಪರೂಪ. ರಾಜ್ಯಸಭೆ ಸದಸ್ಯರಾಗಿಯೂ ದಿಲೀಪ್ ಕುಮಾರ್ ಕೆಲ ವರ್ಷ ಸೇವೆ ಸಲ್ಲಿಸಿದ್ದರು.

  2021 ಜುಲೈ 17 ರಂದು ದಿಲೀಪ್ ಕುಮಾರ್ ನಿಧನರಾದಾಗ ಭಾರತೀಯ ಚಿತ್ರರಂಗ ಶೋಕ ಆಚರಿಸಿತು. ಪ್ರಧಾನಿ ಮೋದಿ ಆದಿಯಾಗಿ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರೀಡಾ ಲೋಕದ ಗಣ್ಯರು ದಿಲೀಪ್ ಕುಮಾರ್ ಆತ್ಮಕ್ಕೆ ಶಾಂತಿ ಕೋರಿದರು. ಕನ್ನಡದ ನಟರೂ ಸಹ ದಿಲೀಪ್ ಕುಮಾರ್ ಆತ್ಮಕ್ಕೆ ಶಾಂತಿ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿದ್ದರು. ದಿಲೀಪ್ ಕುಮಾರ್ ಅವರಿಗೆ ಡಾ.ರಾಜ್‌ಕುಮಾರ್ ಅವರೊಟ್ಟಿಗೆ ಉತ್ತಮ ಬಾಂಧವ್ಯವಿತ್ತು. ಅಲ್ಲದೆ ಕನ್ನಡದ ಹೆಮ್ಮೆ ಮಾಜಿ ಪ್ರಧಾನಿ ದೇವೇಗೌಡ ಅವರೊಟ್ಟಿಗೂ ಸಹ ಬಹಳ ಆತ್ಮೀಯ ಗೆಳೆತನವಿತ್ತು.

  English summary
  Bollywood senior actor Dilip Kumar was the first actor to charge 1 lakh rs as remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X