For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣೌತ್‌ ಗೆ ಉದ್ಯೋಗದ ಆಫರ್ ಕೊಟ್ಟ ನಟ ದಿಲ್ಜೀತ್

  |

  ಬಾಲಿವುಡ್ ನಟ-ನಟಿಯರ ಮೇಲಿನ ವಾಗ್ದಾಳಿಯನ್ನು ನಿಲ್ಲಿಸಿಲ್ಲ ನಟಿ ಕಂಗನಾ ರಣೌತ್. ಕೆಲವು ದಿನಗಳ ಹಿಂದೆ, ಪಂಜಾಬ್ ರೈತರ ಪ್ರತಿಭಟನೆ ವಿಷಯಕ್ಕೆ ಟ್ವಿಟ್ಟರ್‌ನಲ್ಲಿ ಕಿತ್ತಾಡಿಕೊಂಡಿದ್ದ ಕಂಗನಾ ಹಾಗೂ ನಟ ದಿಲ್ಜಿತ್ ನಡುವೆ ಈಗ ಮತ್ತೆ ಜಗಳ ಶುರುವಾಗಿದೆ.

  ಪ್ರವಾಸದಲ್ಲಿದ್ದ ದಿಲ್ಜಿತ್ ದುಸ್ಸಾಂಜ್ ಪ್ರವಾಸದ ಕೆಲವು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ಕಂಗನಾ ಕಣ್ಣು ಕುಕ್ಕಿದೆ. 'ದೇಶದಲ್ಲಿ ಬೆಂಕಿ ಹಾಕಿ, ರೈತರನ್ನು ರಸ್ತೆಯ ಮಧ್ಯೆ ಕೂರಿಸಿ, ನೀವು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದೀರಾ? ಇದಕ್ಕೇ ಹೇಳುವುದು ಲೋಕಲ್ ಕ್ರಾಂತಿ ಎಂದು' ಎಂದು ದಿಲ್ಜೀತ್ ಕಾಲೆಳೆದಿದ್ದಾರೆ ಕಂಗನಾ.

  ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ದಿಲ್ಜೀತ್, 'ನಿಮಗೆ ನನ್ನ ಮೇಲೆ ಬಹಳ ಆಸಕ್ತಿ ಇದ್ದಂತಿದೆ, ನಿಮಗೆ ನನ್ನ ಪಿಆರ್ ಕೆಲಸ ಕೊಡುತ್ತೇನೆ ಎಂದು ಹೇಳಿದ್ದಾರೆ. ಮುಂದುವರೆದು, ನಿಮ್ಮ ಬಗ್ಗೆ ನಿಮಗೇ ಸಾಕಷ್ಟು ಗೊಂದಲಗಳು ಇವೆ. ನಾನು ಸದಾ ಪಂಜಾಬಿಯರ ಪರವಾಗಿ ಇದ್ದೇನೆ. ನೀವು ಪಂಜಾಬರಿಗೆ ಏನು ಮಾಡಿದಿರಿ, ಹೇಗೆ ಅವರನ್ನು ಅವಮಾನಿಸಿದಿರಿ ಎಂಬುದನ್ನು ಅವರು ಮರೆಯುವುದಿಲ್ಲ' ಎಂದು ಹೇಳಿದ್ದಾರೆ ದಿಲ್ಜಿತ್.

  ಸಮಯ ಎಲ್ಲವನ್ನೂ ಹೇಳುತ್ತದೆ: ಕಂಗನಾ

  ಸಮಯ ಎಲ್ಲವನ್ನೂ ಹೇಳುತ್ತದೆ: ಕಂಗನಾ

  ದಿಲ್ಜಿತ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಂಗನಾ, 'ಯಾರು ರೈತರ ಹಕ್ಕುಗಳಿಗಾಗಿ ಹೋರಾಡಿದರು, ಯಾರು ರೈತರ ವಿರುದ್ಧ ಇದ್ದರು ಎಂಬುದರ ಬಗ್ಗೆ ಕಾಲವೇ ಉತ್ತರ ನೀಡಲಿದೆ. ಹೃದಯದಿಂದ ಯಾರನ್ನಾದರೂ ಪ್ರೀತಿಸಿದರೆ ಅಂಥಹವರನ್ನು ಯಾರೂ ದ್ವೇಷಿಸುವುದಿಲ್ಲ. ಪಂಜಾಬಿಗರು ನನ್ನನ್ನು ದ್ವೇಷಿಸುತ್ತಾರೆ ಎಂಬ ನಿನ್ನ ಕನಸನ್ನು ಬಿಟ್ಟುಬಿಡು, ಸತ್ಯ ತಿಳಿದರೆ ನಿನ್ನ ಹೃದಯ ಒಡೆಯುತ್ತದೆ' ಎಂದಿದ್ದಾರೆ ಕಂಗನಾ.

  ರೈತರ ಮೇಲೆ ಕಂಗನಾಗೆ ಏಕೆ ಕೋಪ ಅರ್ಥವಾಗುತ್ತಿಲ್ಲ: ದಿಲ್ಜೀತ್

  ರೈತರ ಮೇಲೆ ಕಂಗನಾಗೆ ಏಕೆ ಕೋಪ ಅರ್ಥವಾಗುತ್ತಿಲ್ಲ: ದಿಲ್ಜೀತ್

  ಮತ್ತೆ ಕಂಗನಾ ರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ದಿಲ್ಜೀತ್, 'ರೈತರ ಮೇಲೆ ಆಕೆಗೆ ಏಕಿಷ್ಟು ಕೋಪ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಎಲ್ಲಾ ಪಂಜಾಬಿಗರು ರೈತರ ಪರ ಇದ್ದಾರೆ. ಯಾರೂ ಸಹ ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ' ಎಂದಿದ್ದಾರೆ ದಿಲ್ಜೀತ್ ದುಸ್ಸಾಂಜ್.

  ಊರ್ಮಿಳಾ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ

  ಊರ್ಮಿಳಾ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ

  ಕೆಲವು ದಿನಗಳ ಹಿಂದಷ್ಟೆ ಕಂಗನಾ, ಎರಡನೇ ಬಾರಿ ನಟಿ, ಶಿವಸೇನಾ ಸದಸ್ಯೆ ಊರ್ಮಿಳಾ ಮತೋಡ್ಕರ್ ವಿರುದ್ಧ ಟ್ವಿಟ್ಟರ್‌ನಲ್ಲಿ ಟೀಕಾ ಪ್ರಹಾರ ನಡೆಸಿದ್ದರು. ಶಿವಸೇನಾ ಪಕ್ಷಕ್ಕೆ ಸೇರಿದ ಕೂಡಲೇ 3 ಕೋಟಿ ಮೌಲ್ಯದ ಕಚೇರಿ ತೆರೆದಿದ್ದೀಯಾ. ನಾನು ಬಿಜೆಪಿ ಪರ ವಹಿಸಿ 20-30 ಕೇಸು ದಾಖಲಿಸಿಕೊಂಡಿದ್ದೇನೆ ಎಂದಿದ್ದರು.

  ಸಾಫ್ಟ್ ಪಾರ್ನ್ ನಟಿ ಎಂದಿದ್ದ ಕಂಗನಾ

  ಸಾಫ್ಟ್ ಪಾರ್ನ್ ನಟಿ ಎಂದಿದ್ದ ಕಂಗನಾ

  ಈ ಹಿಂದೆಯೂ ಊರ್ಮಿಳಾ ಮತೋಡ್ಕರ್ ಬಗ್ಗೆ ಮಾತನಾಡಿದ್ದ ಕಂಗನಾ, ಊರ್ಮಿಳಾರನ್ನು 'ಸಾಫ್ಟ್ ಪಾರ್ನ್ ನಟಿ' ಎಂದಿದ್ದರು. ಇದಕ್ಕೆ ಮುನ್ನಾ ತಾಪ್ಸಿ ಪನ್ನು, ದೀಪಿಕಾ ಪಡುಕೋಣೆ, ಕರಣ್ ಜೋಹರ್, ಮಹೇಶ್ ಭಟ್, ಅಮೀರ್ ಖಾನ್, ಹೃತಿಕ್ ರೋಷನ್ ಇನ್ನೂ ಹಲವರ ವಿರುದ್ಧ ಮಾತನಾಡಿದ್ದರು.

  English summary
  Actor, singer Diljit Dosanjh offer his PR job to actress Kangana Ranaut. Both engaged in twitter battle again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X