»   » ಶಾರುಖ್ 'ಡಿಡಿಎಲ್ ಜೆ' ಅನಿಮೇಷನ್ ಟ್ರೇಲರ್ ನೋಡಿ

ಶಾರುಖ್ 'ಡಿಡಿಎಲ್ ಜೆ' ಅನಿಮೇಷನ್ ಟ್ರೇಲರ್ ನೋಡಿ

Posted By:
Subscribe to Filmibeat Kannada

ಈಗಿನ ಪರಿಸ್ಥಿತಿಯಲ್ಲಿ ಚಿತ್ರವೊಂದು ಐವತ್ತು, ಶತದಿನ ಪೂರೈಸುವಷ್ಟರಲ್ಲಿ ಹೆಣಬಿದ್ದು ಹೋಗುತ್ತದೆ. ಈ ಹೆಣಗಾಟ ನಿಜಕ್ಕೂ ಅದೊಂದು ಸವಾಲಿನ ಕೆಲಸ. ಆದರೆ ಚಿತ್ರವೊಂದು ಸಾವಿರ ವಾರಗಳ ಕಾಲ ಪ್ರದರ್ಶನ ಕಂಡರೆ ಹೇಗಿರಬೇಡ. ಈ ರೀತಿ ಹೊಸ ದಾಖಲೆಯನ್ನೇ ಸೃಷ್ಟಿಸಿದ ಚಿತ್ರ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ'.

ಇದೇ ಡಿಸೆಂಬರ್ 12ಕ್ಕೆ 1000 ವಾರಗಳನ್ನು ಪೂರೈಸುತ್ತಿದೆ 'ಡಿಡಿಎಲ್ ಜೆ' ಚಿತ್ರ. ಈಗ ಮತ್ತೆ ರೀ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು. ಇದರ ಹಿನ್ನೆಲೆಯಲ್ಲಿ ಚಿತ್ರದ ಆನಿಮೇಷನ್ ಟ್ರೇಲರ್ ಬಿಡುಗಡೆಯಾಗಿದೆ. ಶಾರುಖ್ ಖಾನ್ ಖುದ್ದಾಗಿ ಈ ಟ್ರೇಲರನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. [1000 ವಾರ ಕಂಡ 19ರ ಹರೆಯ ಶಾರುಖ್- ಕಾಜೋಲ್]

ಮುಂಬೈನ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಸತತ ಪ್ರದರ್ಶನ ಕಾಣುತ್ತಿರುವ ಡಿಡಿಎಲ್ ಜೆ ಚಿತ್ರ ಕೊನೆಯ ಆಟಕ್ಕೆ ಸಜ್ಜಾಗುತ್ತಿದೆ. ಹೊಸದೊಂದು ಚಿತ್ರವನ್ನು ಪ್ರದರ್ಶಿಸಬೇಕೆಂದು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ. ಡಿಡಿಎಲ್ ಜೆ ಚಿತ್ರದ ಕಲೆಕ್ಷನ್ ದಯನೀಯ ಸ್ಥಿತಿಯಲ್ಲಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

Dilwale Dulhania Le Jayenge Animated promo released

1995ರ ಅಕ್ಟೋಬರ್ 20ರಂದು ಪ್ರಪಂಚದಾದ್ಯಂತ ಬಿಡುಗಡೆಯಾದ ಡಿಡಿಎಲ್ ಜೆ ಚಿತ್ರ ಅಂದಿನಿಂದ ಇಂದಿನವರೆಗೂ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ. ಅಂದರೆ ಇಲ್ಲಿಗೆ 19 ವರ್ಷ ಪೂರ್ಣಗೊಳಿಸಿದೆ. ಇದಕ್ಕಿಂತಲೂ ದಾಖಲೆ ಬೇಕೆ?

ಡಿಡಿಎಲ್ ಜೆ ಚಿತ್ರ ಬಿಡುಗಡೆಯಾದಾಗ ಆ ಚಿತ್ರವನ್ನು ನೋಡಿ, ಪ್ರೇರಿತಗೊಂಡು ಅದೆಷ್ಟೋ ಜೋಡಿಗಳ ಹೃದಯದಲ್ಲಿ ಪ್ರೇಮಬೀಜ ಬಿತ್ತಿದ ಚಿತ್ರ. ಆ ಜೋಡಿಗಳಿಗೆ ಮದುವೆಯಾಗಿ ಮಕ್ಕಳಾಗಿ ಅವರೂ ಮದುವೆ ವಯಸ್ಸಿಗೆ ಬಂದಿದ್ದರೂ ಈ ಚಿತ್ರ ಮಾತ್ರ ಇನ್ನೂ ಸತತ ಪ್ರದರ್ಶನ ಮುಂದುವರಿಸಿದೆ.

ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲಿ ಡಿಡಿಎಲ್ ಜೆ ಚಿತ್ರದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಒಂದು ಅಧ್ಯಾಯ. ಇಡೀ ಜಗತ್ತಿನಲ್ಲೇ ಕಂಡು ಕೇಳರಿಯದ ಚರಿತ್ರೆ ಈ ಚಿತ್ರದ್ದು. ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಅತಿ ಸಮೀಪದಲ್ಲೇ ಇರುವ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಡಿಡಿಎಲ್ ಜೆ ತನ್ನ ಕೊನೆಯ ಆಟ ನಿಲ್ಲಿಸುತ್ತಿದೆ. (ಏಜೆನ್ಸೀಸ್)

English summary
Shahrukh Khan's movie Dilwale Dulhania Le Jayenge (DDLJ), a film that redefined romance in Indian cinema, is completing 1,000 weeks on Dec 12. While a slew of activities is being planned for the day, with a special trailer being launched and an animated DDLJ promo being released today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada