For Quick Alerts
  ALLOW NOTIFICATIONS  
  For Daily Alerts

  28 ವರ್ಷಗಳ ಬಳಿಕ ಶಾರುಖ್ ಖಾನ್ ಗೆ ಜೊತೆಯಾಗುತ್ತಿದ್ದಾರೆ ನಟಿ

  |

  ಶಾರುಖ್ ಖಾನ್ ಬಾಲಿವುಡ್‌ನಲ್ಲಿ ನಟನಾಗಿ ವೃತ್ತಿ ಪ್ರಾರಂಭಿಸಿ 28 ವರ್ಷಗಳಾದವು. ಶಾರುಖ್ ಜೊತೆಗೆ ವೃತ್ತಿ ಆರಂಭಿಸಿದ್ದ ಎಷ್ಟೋ ಮಂದಿ ನಟ-ನಟಿಯರು ಇಂದು ಬಹುತೇಕ ತೆರೆ-ಮರೆಗೆ ಸರಿದಿದ್ದಾರೆ, ಆದರೆ ಶಾರುಖ್ ಈಗಲೂ ಬಾಲಿವುಡ್‌ನ ಬಾದ್‌ ಶಾ.

  ಶಾರುಖ್ ಖಾನ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದ ವರ್ಷ 1992 ಅದೇ ವರ್ಷದಲ್ಲಿ ತಮ್ಮ ಮೂರನೇ ಸಿನಿಮಾದಲ್ಲಿ ಆಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ಡಿಂಪಲ್ ಕಪಾಡಿಯಾ ಜೊತೆ ನಟಿಸಿದ್ದರು. ಆ ನಂತರ ಇಬ್ಬರೂ ಒಟ್ಟಿಗೆ ನಟಿಸಿರಲೇ ಇಲ್ಲ.

  ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ಖಾನ್ ತ್ರಯರು: ಸಿನಿಮಾ ಯಾವುದು?ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ಖಾನ್ ತ್ರಯರು: ಸಿನಿಮಾ ಯಾವುದು?

  ಈಗ ಮತ್ತೆ ಈ ನಟ-ನಟಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೌದು, 28 ವರ್ಷಗಳ ಬಳಿಕ, ಶಾರುಖ್ ಖಾನ್ ಹಾಗೂ ಡಿಂಪಲ್ ಕಪಾಡಿಯಾ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದೇ 'ಪಠಾಣ್'.

  ಅಭಿಷೇಕ್ ಬಚ್ಚನ್ ವೈಫಲ್ಯ ಮತ್ತು ಶಾರುಖ್ ಖಾನ್ ಕೊಟ್ಟಿದ್ದ ಸಲಹೆಅಭಿಷೇಕ್ ಬಚ್ಚನ್ ವೈಫಲ್ಯ ಮತ್ತು ಶಾರುಖ್ ಖಾನ್ ಕೊಟ್ಟಿದ್ದ ಸಲಹೆ

  ಪಠಾಣ್ ಸಿನಿಮಾದಲ್ಲಿ ಡಿಂಪಲ್ ಕಪಾಡಿಯಾ

  ಪಠಾಣ್ ಸಿನಿಮಾದಲ್ಲಿ ಡಿಂಪಲ್ ಕಪಾಡಿಯಾ

  'ಟೆನೆಟ್' ಹಾಲಿವುಡ್ ಸಿನಿಮಾದಲ್ಲಿ ನಟಿಸಿದ ಬಳಿಕ ಡಿಂಪಲ್ ಕಪಾಡಿಯಾ ಗೆ ಸಾಕಷ್ಟು ಆಫರ್‌ಗಳು ಬರುತ್ತಿವೆಯಂತೆ. ಅಂತೆಯೇ ಪಠಾಣ್ ಸಿನಿಮಾದಲ್ಲಿ ನಟಿಸುವ ಆಫರ್ ಸಹ ಬಂದು, ಪಾತ್ರವು ಡಿಂಪಲ್‌ಗೆ ಸಾಕಷ್ಟು ಇಷ್ಟವಾದ ಕಾರಣ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ ಡಿಂಪಲ್.

  ಗುಪ್ತಚರ ಇಲಾಖೆಗೆ ಸಂಬಂಧಿಸಿದ ಸಿನಿಮಾ

  ಗುಪ್ತಚರ ಇಲಾಖೆಗೆ ಸಂಬಂಧಿಸಿದ ಸಿನಿಮಾ

  ಪಠಾಣ್ ಸಿನಿಮಾವು ಗುಪ್ತಚರ ಇಲಾಖೆಗೆ ಸಂಬಂಧಪಟ್ಟ ಸಿನಿಮಾ ಆಗಿದ್ದು, ಡಿಂಪಲ್ ಕಪಾಡಿಯಾ, ಹಿರಿಯ 'ರಾ' ಗುಪ್ತಚರ ಸಂಸ್ಥೆಯ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ತಾಂಡವ್ ವೆಬ್ ಸೀರೀಸ್‌ ನಲ್ಲಿ ನಟನೆ

  ತಾಂಡವ್ ವೆಬ್ ಸೀರೀಸ್‌ ನಲ್ಲಿ ನಟನೆ

  'ಟೆನೆಟ್' ಸಿನಿಮಾದಲ್ಲಿ ನಟಿಸಿದ್ದ ಡಿಂಪಲ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು, ಟೆನೆಟ್ ನಿರ್ದೇಶಕ ಕ್ರಿಸ್ಟೊಫರ್ ನೊಲನ್ ಸಹ ಧನ್ಯವಾದ ಪತ್ರವೊಂದನ್ನು ಡಿಂಪಲ್‌ಗೆ ಕಳಿಸಿದ್ದರು. ಟೆನೆಟ್ ಬಳಿಕ ಸಾಕಷ್ಟು ಅವಕಾಶಗಳು ಡಿಂಪಲ್ ಅನ್ನು ಹುಡುಕಿ ಬರುತ್ತಿವೆ. 'ತಾಂಡವ್' ಹೆಸರಿನ ವೆಬ್ ಸರಣಿಯಲ್ಲಿ ಸಹ ಡಿಂಪಲ್ ನಟಿಸಲು ಒಪ್ಪಿಕೊಂಡಿದ್ದಾರೆ.

  Act 1978 ಸಿನಿಮಾ ನೋಡಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ | Filmibeat Kannada
  2021 ರಲ್ಲಿ ಸಖತ್ ಬ್ಯುಸಿ ಶಾರುಖ್ ಖಾನ್

  2021 ರಲ್ಲಿ ಸಖತ್ ಬ್ಯುಸಿ ಶಾರುಖ್ ಖಾನ್

  ಎರಡು ವರ್ಷಗಳಿಂದ ಚಿತ್ರಮಂದಿರದಿಂದ ದೂರ ಉಳಿದಿದ್ದ ಶಾರುಖ್ ಖಾನ್ 2021 ರಲ್ಲಿ ಸಾಕಷ್ಟು ಬ್ಯುಸಿ ಇದ್ದಾರೆ. ಪಠಾಣ್ ಬಳಿಕ ಆಪರೇಷನ್ ಕುಕರಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ನಂತರ ಅಟಿಲಿ ನಿರ್ದೇಶನದ ಸಿನಿಮಾ, ಅದರ ನಂತರ ರಾಜ್‌ಕುಮಾರ್ ಹಿರಾನಿ ಸಿನಿಮಾ, ಆ ನಂತರ ಕರಣ್ ಜೋಹರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Dimple Kapadia will act along with Shah Rukh Khan in his next movie Pathan. Both were acting together in a movie after 28 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X