For Quick Alerts
  ALLOW NOTIFICATIONS  
  For Daily Alerts

  ಮೊಘಲರನ್ನು ಯಾಕೆ ಕೆಟ್ಟವರನ್ನಾಗಿ ಬಿಂಬಿಸುತ್ತೀರಿ, ಅವರೇ ನಮ್ಮ ರಾಷ್ಟ್ರ ಕಟ್ಟಿದ್ದು; ಕಬೀರ್ ಖಾನ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ಸಿನಿಮಾ ನಿರ್ದೇಶಕರಲ್ಲಿ ಕಬೀರ್ ಖಾನ್ ಕೂಡ ಒಬ್ಬರು. ಕಬೀರ್ ಖಾನ್ ಸದ್ಯ ಬಹುನರೀಕ್ಷೆಯ 83 ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಬಾಲಿವುಡ್ ನಲ್ಲಿ ಬಜರಂಗಿ ಭಾಯಿಜಾಯ್, ಏಕ್ ಥಾ ಟೈಗರ್, ಕಾಬೂಲ್ ಎಕ್ಸ್ ಪ್ರೆಸ್, ನ್ಯೂಯಾರ್ಕ್ ಸೇರಿದೆತ ಅನೇಕ ಉತ್ತಮ ಸಿನಿಮಾಗಳನ್ನು ಕರೀಬ್ ಕಾನ್ ನೀಡಿದ್ದಾರೆ. ಪ್ರಸಿದ್ಧ ನಿರ್ದೇಶಕ ಇತ್ತೀಚಿಗಷ್ಟೆ ತಾಲಿಬಾನಿಗಳ ಬಗ್ಗೆ ಮಾಡಿದ್ದ ಸಾಕ್ಷ್ಯಚಿತ್ರದ ಬಗ್ಗೆಯೂ ಬಹಿರಂಗ ಪಡಿಸಿ ಸುದ್ದಿಯಾಗಿದ್ದ ಬೆನ್ನಲ್ಲೇ ಈಗ ಭಾರತ ಆಳಿದ ಮೊಘಲ್ ರಾಜರನ್ನು ಸಿನಿಮಾಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.

  ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ 'ದಿ ಎಂಪೈರ್' ಸೀರಿಸ್ ಬಿಡುಗಡೆಗೆ ಸಿದ್ಧವಾಗಿರುವ ಸಮಯದಲ್ಲಿ ಕಬೀರ್ ಖಾನ್ ಹೀಗೆ ಹೇಳಿರುವುದು ಅಚ್ಚರಿ ಮೂಡಿಸಿದೆ. ಈ ಸೀರಿಸ್ ನಲ್ಲಿ ಮೊಘಲ್ ಆಳ್ವಿಕೆ ಮತ್ತು ಬಾಬರ್ ಬಗ್ಗೆ ಕೇಂದ್ರಿತವಾಗಿದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಕಬೀರ್ ಖಾನ್ ಬಾಲಿವುಡ್ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಮೊಘಲರ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

  ಮೊಘಲರನ್ನು ರಾಕ್ಷಸರ ಹಾಗೆ ಚಿತ್ರೀಕರಿಸಲಾಗುತ್ತಿದೆ

  ಮೊಘಲರನ್ನು ರಾಕ್ಷಸರ ಹಾಗೆ ಚಿತ್ರೀಕರಿಸಲಾಗುತ್ತಿದೆ

  "ಮೊಘಲರನ್ನು ರಾಕ್ಷಸರ ಹಾಗೆ ಚಿತ್ರೀಕರಿಸಲಾಗುತ್ತಿದೆ. ಜನಪ್ರಿಯ ನಿರೂಪಣೆಗಳೊಂದಿಗೆ ಸಿನಿಮಾಗಳನ್ನು ಮಾಡಲಾಗುತ್ತಿದೆ. ಕೆಟ್ಟವರು ಎನ್ನುವುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳು ಸಹ ಅಲ್ಲ. ಮೊಘಲರು ಮೂಲ ರಾಷ್ಟ್ರ ನಿರ್ಮಾತೃಗಳು" ಎಂದು ಕಬೀರ್ ಹೇಳಿದ್ದಾರೆ.

  ಆಧಾರ ಇಟ್ಟುಕೊಂಡು ಸಿನಿಮಾ ಮಾಡಿ

  ಆಧಾರ ಇಟ್ಟುಕೊಂಡು ಸಿನಿಮಾ ಮಾಡಿ

  "ನಾನು ಈ ಬಗ್ಗೆ ತುಂಬಾ ಸಮಸ್ಯಾತ್ಮಕ ಮತ್ತು ಗೊಂದಲಕ್ಕೊಳಗಾಗಿದ್ದೇನೆ. ನನಗೆ ತುಂಬಾ ಅಸಮಾಧಾನ ಮೂಡಿಸಿವುದು ಸಿನಿಮಾದ ಜನಪ್ರಿಯ ನಿರೂಪಣೆ. ಸಿನಿಮಾ ನಿರ್ದೇಶಕರಿಗೆ ಸಂಶೋದನೆ ಮುಖ್ಯ. ವಿಭಿನ್ನ ದೃಷ್ಟಿಕೋನಗಳು ಇರಬಹುದು. ಆದರೆ ಮೊಘಲರನ್ನು ರಾಕ್ಷಸರನ್ನಾಗಿ ತೋರಿಸುವಾಗಿ ದಯವಿಟ್ಟು ಕೆಲವು ಸಂಶೋದನೆಯನ್ನು ಮಾಡಿ, ಆಧಾರ ಇಟ್ಟುಕೊಳ್ಳಿ ಮತ್ತು ಏಕೆ ಎಂದು ಮೊದಲು ನಮಗೆ ಅರ್ಥ ಮಾಡಿಸಿ" ಎಂದಿದ್ದಾರೆ.

  ಮೊಘಲರೇ ಮೂಲ ರಾಷ್ಟ್ರ ನಿರ್ಮಾಣಕಾರರು

  ಮೊಘಲರೇ ಮೂಲ ರಾಷ್ಟ್ರ ನಿರ್ಮಾಣಕಾರರು

  "ಅವರು ಏಕೆ ವಿಲನ್ ಆಗಿದ್ದರು ಎಂದು ನೀವು ಭಾವಿಸುತ್ತೀರಿ. ನೀವು ಸ್ವಲ್ಪ ಸಂಶೋದನೆ ಮಾಡಿ, ಇತಿಹಾಸವನ್ನು ಓದಿದರೆ ಅವರು ಏಕೆ ಖಳನಾಯಕರಾಗಬೇಕು, ಅವರನ್ನು ಯಾಕೆ ಹೀಗೆ ಬಿಂಬಿಸಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅವರು ಮೂಲ ರಾಷ್ಟ್ರ ನಿರ್ಮಾತೃಗಳು ಎಂದು ನಾನು ಭಾವಿಸುತ್ತೇನೆ. ಅವರು ಜನರನ್ನು ಕೊಲೆ ಮಾಡಿದ್ದಾರೆ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ? ದಯವಿಟ್ಟು ಐತಿಹಾಸಿಕ ಪುರಾವೆಗಳನ್ನು ಸೂಚಿಸಿ. ದಯವಿಟ್ಟು ಮುಕ್ತ ಚರ್ಚೆಯನ್ನು ಮಾಡಿ. ಜನಪ್ರಿಯ ಎಂದು ನೀವು ಭಾವಿಸುವ ನಿರೂಪಣೆಯ ಹಿಂದೆ ಹೋಗಬೇಡಿ" ಎಂದು ಹೇಳಿದ್ದಾರೆ. ಕಬೀರ್ ಖಾನ್ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.

  ಕಾಬೂಲ್ ಎಕ್ಸ್ ಪ್ರೆಸ್ ಸಿನಿಮಾದ ಬಗ್ಗೆ ಕಬೀರ್ ಮಾತು

  ಕಾಬೂಲ್ ಎಕ್ಸ್ ಪ್ರೆಸ್ ಸಿನಿಮಾದ ಬಗ್ಗೆ ಕಬೀರ್ ಮಾತು

  ಈ ಮೊದಲು ಕಬೀರ್ ಖಾನ್ ಡಾಕ್ಯುಮೆಂಟರಿ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದ ಸಮಯದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದರು. "ನನ್ನ ಡಾಕ್ಯುಮೆಂಟರಿಯಿಂದ ಒಂದು ಸಣ್ಣ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. 2001ರಲ್ಲಿ ಕೆಲವು ತಾಲಿಬಾನ್ ಸದಸ್ಯರನ್ನು ಸಂದರ್ಶಿಸಿದ್ದೆ. ಒಬ್ಬ ಹಿರಿಯ ತಾಲಿಬಾನ್ ಸದಸ್ಯ ನೇರವಾಗಿ ನನ್ನ ಕ್ಯಾಮರಾ ನೋಡಿ, ನಾವು ಹೋಗಿದ್ದೇವೆ ಎಂದು ಭಾವಿಸಿದ್ದೀರಾ, ನಾವು ಹಿಂತಿರುಗುತ್ತೇವೆ ಎಂದು ಹೇಳಿದ್ದರು. ಆ ಮಾತು, ಅವರ ಆತ್ಮವಿಶ್ವಾಸ ನನ್ನಲ್ಲಿ ಭಯಹುಟ್ಟಿಸಿತ್ತು. ಈಗ ಆ ಹೇಳಿಕೆ ನೆನಪಿಸಿಕೊಂಡಾಗ ನನ್ನನ್ನು ಕಾಡುತ್ತಿದೆ" ಎಂದು ಹೇಳಿದ್ದರು.

  ಅಫ್ಘಾನಿಸ್ತಾನದಲ್ಲಿರುವ ಸ್ನೇಹಿತರ ಬಗ್ಗೆ ಕಬೀರ್ ಮಾತು

  ಅಫ್ಘಾನಿಸ್ತಾನದಲ್ಲಿರುವ ಸ್ನೇಹಿತರ ಬಗ್ಗೆ ಕಬೀರ್ ಮಾತು

  ಅಫ್ಘಾನಿಸ್ತಾನದಲ್ಲಿರುವ ಸ್ನೇಹಿತರ ಬಗ್ಗೆ ಮಾತನಾಡಿರುವ ಕಬೀರ್ ಖಾನ್, "ನನ್ನ ಸ್ನೇಹಿತರು ಬಗ್ಗೆ ಚಿಂತೆಯಾಗುತ್ತಿದೆ. ಆದರೆ ಅವರಿಗಾಗಿ ಏನನ್ನು ಮಾಡಲು ಸಾಧ್ಯವಿಲ್ಲದ ಕಾರಣ ಅಸಹಾಯಕನಾಗಿದ್ದೇನೆ" ಎಂದು ಹೇಳಿದರು. ನನ್ನ ಸ್ನೇಹಿತರೊಬ್ಬರು ಮತ್ತು ನಟ ಬಶೀರ್ ಅವರ ಮನೆಯಿಂದ ಓಡಿಹೋಗಿ ಅವಿತುಕುಳಿತಿದ್ದಾರೆ. ಬಳಿಕ ಅವರ ಮನೆಯನ್ನು ತಾಲಿಬಾನಿಗಳು ದೋಚಿದ್ದಾರೆ ಎಂದು ಹೇಳಿದ್ದರು.

  English summary
  Bollywood Director Kabir Khan says Mughals were originally Nation builders.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X