»   » ಶ್ರೀದೇವಿ ಅಸಮಾಧಾನಕ್ಕೆ ವಿಷಾದ ವ್ಯಕ್ತಪಡಿಸಿದ ರಾಜಮೌಳಿ

ಶ್ರೀದೇವಿ ಅಸಮಾಧಾನಕ್ಕೆ ವಿಷಾದ ವ್ಯಕ್ತಪಡಿಸಿದ ರಾಜಮೌಳಿ

Posted By:
Subscribe to Filmibeat Kannada

'ಬಾಹುಬಲಿ- ದಿ ಬಿಗಿನ್ನಿಂಗ್' ಮತ್ತು 'ಬಾಹುಬಲಿ-2' ಚಿತ್ರಗಳ ಶಿವಗಾಮಿ ಪಾತ್ರಕ್ಕಾಗಿ ಬಹುಭಾಷಾ ನಟಿ ಶ್ರೀದೇವಿ ಅವರನ್ನು ರಮ್ಯಾ ಕೃಷ್ಣ ಅವರಿಗಿಂತ ಮೊದಲು ಅಪ್ರೋಚ್ ಮಾಡಲಾಗಿತ್ತು. ಆದರೆ ಅವರು ಹೆಚ್ಚು ಸಂಭಾವನೆ ಕೇಳಿದ ಕಾರಣ ರಿಜೆಕ್ಟ್ ಮಾಡಲಾಗಿತ್ತು ಎಂದು ಎಸ್.ಎಸ್.ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿರುವುದು ವರದಿಯಾಗಿತ್ತು. ಈ ಬಗ್ಗೆ ಶ್ರೀದೇವಿ ಬೇಸರ ವ್ಯಕ್ತಪಡಿಸಿದ್ದರು.

'ಬಾಹುಬಲಿ' ನಿರ್ದೇಶಕನ ಮೇಲೆ ಶ್ರೀದೇವಿ ಅಸಮಾಧಾನ, ಕಾರಣ 'ಶಿವಗಾಮಿ' ಪಾತ್ರ

ಇದೀಗ ರಾಜಮೌಳಿ ಅವರು ಲೀಡಿಂಗ್ ಡೈಲಿಯೊಂದಿಗಿನ ಸಂದರ್ಶನದಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿಷಾದ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಹೇಳಿದ್ದೇನು ತಿಳಿಯಲು ಮುಂದೆ ಓದಿರಿ

ವಿಷಾದ ವ್ಯಕ್ತಪಡಿಸುತ್ತೇನೆ

'ಯಾವುದನ್ನು ನಂಬಬೇಕು ಎಂದು ತಿಳಿಯುತ್ತಿಲ್ಲ. ಅದನ್ನು ಜನರೇ ನಿರ್ಧರಿಸಬೇಕು. ಆದರೆ ನಾನು ಶ್ರೀದೇವಿ ಅವರ ಬಗ್ಗೆ ಆಗಲಿ, ಸಂಭಾವನೆ ಬಗ್ಗೆ ಆಗಲಿ ಸಾರ್ವಜನಿಕವಾಗಿ ಚರ್ಚಿಸಿಲ್ಲ. ಅದು ಮಿಸ್‌ಟೇಕ್ ಆಗಿದೆ. ಅದಕ್ಕಾಗಿ ನಾನು ವಿಷಾದಿಸುತ್ತೇನೆ' ಎಂದಿದ್ದಾರೆ ಎಸ್.ಎಸ್.ರಾಜಮೌಳಿ.

ನನಗೆ ತುಂಬಾ ಗೌರವ ಇದೆ

'ಮುಂಬೈನಲ್ಲಿ ಇದ್ದುಕೊಂಡು ಹಲವು ವರ್ಷಗಳಿಂದ ದಕ್ಷಿಣ ಭಾರತದ ಚಲನಚಿತ್ರಗಳಿಗೂ ಕೊಡುಗೆ ನೀಡಿರುವ ಶ್ರೀದೇವಿ ಅವರ ಬಗ್ಗೆ ತುಂಬಾ ಗೌರವವಿದೆ. ಅವರಿಗೆ ನನ್ನ ಶುಭಾಶಯ ಯಾವಾಗಲು ಇರುತ್ತದೆ. ಅವರ ಅಭಿನಯದ 'ಮಾಮ್' ಚಿತ್ರದ ಟ್ರೈಲರ್ ಪ್ರಾಮಿಸ್ಸಿಂಗ್ ಆಗಿದ್ದು, ಬಿಗ್ ಸಕ್ಸಸ್ ಪಡೆಯಲಿ ಎಂದು ವಿಶ್ ಮಾಡುತ್ತೇನೆ' - ಎಸ್.ಎಸ್.ರಾಜಮೌಳಿ, ನಿರ್ದೇಶಕ

ಬಜೆಟ್‌ಗಿಂತ ಹೆಚ್ಚು ಸಂಭಾವನೆ

'ನಮ್ಮ ಬಜೆಟ್ ಗಿಂತ ಶ್ರೀದೇವಿ ಅವರು ಹೆಚ್ಚು ಡಿಮ್ಯಾಂಡ್ ಮಾಡುತ್ತಾರೆ ಎಂದು ನಾವೇ ಚಿಂತಿಸಿದ್ವಿ. ನಂತರ ರಮ್ಯಾ ಕೃಷ್ಣ ಅವರನ್ನು ಅಪ್ರೋಚ್ ಮಾಡಿದ್ವಿ. ಅವರು ಅದ್ಭುತ ನಟಿ ಎಂಬುದನ್ನು ಪ್ರೂ ಮಾಡಿದ್ರು. ಈಗ ಶ್ರೀದೇವಿ ಅವರನ್ನು ಡ್ರಾಪ್ ಮಾಡಿದ್ದು ಒಳ್ಳೆಯದೇ ಆಯಿತು, ನಾವು ಲಕ್ಕಿ ಎಂದು ಫೀಲ್ ಆಗುತ್ತಿದೆ' ಎಂದು ರಾಜಮೌಳಿ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಶ್ರೀದೇವಿ ಹೇಳಿದ್ದೇನು?

ಮಾಧ್ಯಮಗಳಲ್ಲಿ ಹರಿದಾಡಿದ ಎಸ್.ಎಸ್.ರಾಜಮೌಳಿ ಅವರ ಸಂದರ್ಶನ ನೋಡಿ ಶ್ರೀದೇವಿ ಅವರು 'ಅದೆಲ್ಲಾ ಗಾಳಿಸುದ್ದಿ, 'ಬಾಹುಬಲಿ' ಚಿತ್ರದಲ್ಲಿ ನಟಿಸಲು ನಾನು 10 ಕೋಟಿ ಸಂಭಾವನೆ, ಒಂದು ಹೋಟೆಲ್ ಪೂರ್ಣ ಫ್ಲೋರ್ ಮತ್ತು ಹತ್ತು ವಿಮಾನ ಟಿಕೆಟ್ ಗಳನ್ನು ಡಿಮ್ಯಾಂಡ್ ಮಾಡಿರಲಿಲ್ಲ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ರಾಜಮೌಳಿ ಹೇಳಿಕೆಯಿಂದ ನನಗೆ ತುಂಬಾ ದುಃಖವಾಗಿದೆ' ಎಂದಿದ್ದರು.

English summary
Director SS Rajamouli Regrets Revealing Inside Details About Sridevi Rejecting Baahubali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada