For Quick Alerts
  ALLOW NOTIFICATIONS  
  For Daily Alerts

  ತಾಪ್ಸಿ ಪನ್ನು-ಅನುರಾಗ್ ಕಶ್ಯಪ್ ಮನೆಯಲ್ಲಿ ದೊರಕಿದೆ ನೂರಾರು ಕೋಟಿ: ಐಟಿ ಇಲಾಖೆ ಮಾಹಿತಿ

  |

  ಬಾಲಿವುಡ್ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾರ್ಚ್‌ 03 ರಂದು ರೇಡ್ ಮಾಡಿದ್ದರು.

  ಇಬ್ಬರು ಸೆಲೆಬ್ರಿಟಿಗಳ ಮನೆ, ಕಚೇರಿ ಗಳ ಲೆಕ್ಕಪತ್ರ, ದಾಖಲೆ ಪರಿಶೀಲನೆ, ಹುಡುಕಾಟ ನಡೆಸಿದ್ದು, ಇಬ್ಬರ ಬಳಿಯು ನೂರಾರು ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ಹೇಳಿದೆ ಆದಾಯ ತೆರಿಗೆ ಇಲಾಖೆ.

  ಆದಾಯ ತೆರಿಗೆ ದಾಳಿ ಬಳಿಕ ಮಾಹಿತಿ ನೀಡಿರುವ ಐಟಿ ಅಧಿಕಾರಿಗಳು, 650 ಕೋಟಿ ಮೌಲ್ಯದ ಆಸ್ತಿ, ಹಣದ ಲೆಕ್ಕಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

  ಅಕ್ರಮ ಹಣ, ಆಸ್ತಿ ವರ್ಗಾವಣೆ, ಆದಾಯವನ್ನು ಬಚ್ಚಿಟ್ಟಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು,ಇನ್ನೂ ಹೆಚ್ಚಿನ ತನಿಖೆ ಮಾಡಬೇಕಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

  168 ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಅವರಿಗೆ ಸೇರಿದ 21 ಜಾಗಗಳಲ್ಲಿ ಹುಡುಕಾಟ ನಡೆಸಿದ್ದರು. ತಾಪ್ಸಿ ಪನ್ನು ಅವರ ಟ್ಯಾಲೆಂಟ್ ಮ್ಯಾನೇಜರ್ ಮನೆ ಹಾಗೂ ಕಚೇರಿ ಮೇಲೆಯೂ ದಾಳಿ ನಡೆಸಿ, ಮೊಬೈಲ್ , ಲ್ಯಾಪ್‌ಟಾಪ್ ಹಾಗೂ ಇನ್ನು ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಪಾಲುದಾರರಾಗಿರುವ ಪ್ಯಾಂಟಮ್ ಪ್ರೊಡಕ್ಷನ್ ಹೌಸ್‌ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

  ರಜನಿಕಾಂತ್ ದಾಖಲೆ ಮುರಿದ ರಾಕಿ ಭಾಯ್ ಯಶ್ | Filmibeat Kannada

  ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಇಬ್ಬರೂ ಸಹ ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡುತ್ತಿದ್ದರು. ಇತ್ತೀಚೆಗಷ್ಟೆ ನಟಿ ತಾಪ್ಸಿ ಪನ್ನು ಕೃಷಿ ನೀತಿ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ್ದರು. ಅಷ್ಟೇ ಅಲ್ಲದೆ, ರೈತರ ಪರವಾಗಿ ಟ್ವೀಟ್ ಮಾಡಿದ್ದ ರಿಹಾನಾ ಹಾಗೂ ಗ್ರೆಟಾ ಥೆನ್‌ಬರ್ಗ್‌ ಪರವಾಗಿ ಟ್ವೀಟ್ ಮಾಡಿದ್ದರು.

  English summary
  Discrepancies Worth rs 650 Crore Found In Raids On Taapsee Pannu And Anurag Kashyap said IT officials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X