For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಧರಿಸಿದ್ದ ಉಂಗುರದ ಬೆಲೆ ಎಷ್ಟಿರಬಹುದು ಹೇಳಿ ನೋಡೋಣ.!

  |

  ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಸೋನಂ ಕಪೂರ್-ಆನಂದ್ ಅಹುಜಾ ರಂತೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕೂಡ ಮ್ಯಾರೇಜ್ ಕ್ಲಬ್ ಸೇರಿದ್ದಾರೆ. ನವೆಂಬರ್ 14-15 ರಂದು ದಾಂಪತ್ಯ ಜೀವನಕ್ಕೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕಾಲಿರಿಸಿದರು.

  ನಟಿ ದೀಪಿಕಾ ಪಡುಕೋಣೆ ಕೊಂಕಣಿ. ಇನ್ನೂ ನಟ ರಣ್ವೀರ್ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದವರು. ಹೀಗಾಗಿ, ಎರಡೂ ಸಂಪ್ರದಾಯಗಳಂತೆ ವಿವಾಹ ಮಹೋತ್ಸವ ಜರುಗಿತು.

  ಮದುವೆಗೂ ಮುನ್ನ ಇಟಲಿಯ ಲೇಕ್ ಕೋಮೋದಲ್ಲೇ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ನಿಶ್ಚಿತಾರ್ಥ ಸಮಾರಂಭ ಕೂಡ ನಡೆಯಿತು. ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಎಂಗೇಜ್ಮೆಂಟ್ ರಿಂಗ್ ಬೆಲೆ ಎಷ್ಟು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ ಎಷ್ಟು.?

  ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ ಎಷ್ಟು.?

  ವಧು ದೀಪಿಕಾ ಪಡುಕೋಣೆಯ ವಜ್ರಖಚಿತ ನಿಶ್ಚಿತಾರ್ಥದ ಉಂಗುರದ ಬೆಲೆ 1.3 ರಿಂದ 2.7 ಕೋಟಿವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ. ವಿವಾಹ ಮಹೋತ್ಸವಕ್ಕೆ ದೀಪಿಕಾ ಧರಿಸಿದ್ದ ಉಂಗುರಗಳ ಬಗ್ಗೆ ಸದ್ಯ ದೊಡ್ಡ ಚರ್ಚೆ ನಡೆಯುತ್ತಿದೆ.

  ಅಂತೂ-ಇಂತೂ ದೀಪಿಕಾ-ರಣ್ವೀರ್ ಮದುವೆ ಫೋಟೋ ಹೊರಬಿತ್ತು.!

  ಚಿನ್ನ ಲೇಪಿತ ಲೆಹಂಗಾ

  ಚಿನ್ನ ಲೇಪಿತ ಲೆಹಂಗಾ

  ಇನ್ನೂ ಸಿಂಧಿ ಸಂಪ್ರದಾಯದಂತೆ ನಡೆದ ಆನಂದ್ ಕರಜ್ ಶಾಸ್ತ್ರಕ್ಕಾಗಿ ವಧು ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು. ಸಭ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಚಿನ್ನ ಲೇಪಿತ ಈ ಲೆಹಂಗಾದ ಬೆಲೆ 8.95 ಲಕ್ಷ ರೂಪಾಯಿ.!

  ಸಿಂಧಿ ಸಂಪ್ರದಾಯದಂತೆ ಇಂದು ಮದುವೆ ಆದ ದೀಪಿಕಾ-ರಣ್ವೀರ್

  40 ಮಂದಿ ಮಾತ್ರ ಸಾಕ್ಷಿ

  40 ಮಂದಿ ಮಾತ್ರ ಸಾಕ್ಷಿ

  ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಅದ್ಧೂರಿ ವಿವಾಹ ಮಹೋತ್ಸವಕ್ಕೆ ಕೇವಲ 40 ಮಂದಿ ಮಾತ್ರ ಸಾಕ್ಷಿ ಆಗಿದ್ದರು. ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು.

  ದೀಪ್ವೀರ್ ಮದುವೆ: ಪ್ಲೇನ್ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟ ವರ ರಣ್ವೀರ್

  ರಿಸೆಪ್ಷನ್ ಯಾವಾಗ.?

  ರಿಸೆಪ್ಷನ್ ಯಾವಾಗ.?

  ಸದ್ಯ ಮದುವೆ ನಂತರದ ಶಾಸ್ತ್ರದಲ್ಲಿ ವಧು ದೀಪಿಕಾ ಪಡುಕೋಣೆ ಮತ್ತು ವರ ರಣ್ವೀರ್ ಸಿಂಗ್ ತೊಡಗಿದ್ದು, ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮತ್ತು ನವೆಂಬರ್ 28 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.

  ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಅಡಿ ಇಟ್ಟ ದೀಪಿಕಾ-ರಣ್ವೀರ್

  English summary
  Do you know the cost of Deepika Padukone's engagement ring.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X