For Quick Alerts
  ALLOW NOTIFICATIONS  
  For Daily Alerts

  ಒಂದ್ಕಾಲದಲ್ಲಿ ಬಳಕುವ ಬಳ್ಳಿಯಂತಿದ್ದ ಈಕೆ ಯಾರು ಅಂತ ಗುರುತಿಸಿ ನೋಡೋಣ..

  By Harshitha
  |
  ಹೆಂಗ್ ಇದ್ದ ನಟಿ ಈಗ ಹೆಂಗ್ ಆಗಿದ್ದಾರೆ ನೋಡಿ..!! | FIlmibeat Kannada

  ನೀಲಿ ಬಣ್ಣದ ಸಿಂಪಲ್ ಟಾಪ್.. ಅದಕ್ಕೆ ಕಪ್ಪು ಬಣ್ಣದ ಟೈಟ್ಸ್.. ಕಾಲಿಗೆ ಫ್ಲೋಟರ್ಸ್ ಧರಿಸಿ ಮೊನ್ನೆಯಷ್ಟೇ ಮುಂಬೈ ಏರ್ ಪೋರ್ಟ್ ಗೆ ನಟಿ ತನುಶ್ರೀ ದತ್ತಾ ಬಂದಿಳಿದರು.

  ಅರೇ ಯಾರೀ ತನುಶ್ರೀ ದತ್ತಾ ಅಂತ ತಲೆಗೆ ಹುಳ ಬಿಟ್ಟುಕೊಂಡ್ರಾ... ತನುಶ್ರೀ ದತ್ತಾ ಯಾರು ಅಂತ ಗೊತ್ತಾಗಬೇಕು ಅಂದ್ರೆ ಒಮ್ಮೆ 'ಆಶಿಕ್ ಬನಾಯಾ ಆಪ್ನೇ...' ಹಾಡನ್ನ ನೋಡಿಕೊಂಡು ಬಂದ್ಬಿಡಿ...

  ಒಂದ್ಕಾದಲ್ಲಿ ಇಮ್ರಾನ್ ಹಶ್ಮಿ ಜೊತೆಗೆ ಹಸಿಬಿಸಿಯಾಗಿ ಕಾಣಿಸಿಕೊಂಡು ಪಡ್ಡೆಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಾಕೆಯೇ ನಟಿ ತನುಶ್ರೀ ದತ್ತಾ. 2003 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸಿದ ತನುಶ್ರೀ ದತ್ತಾ 2005 ರಲ್ಲಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. 'ಆಶಿಕ್ ಬನಾಯಾ ಆಪ್ನೇ', 'ರಿಸ್ಕ್', 'ಗುಡ್ ಬಾಯ್, ಬ್ಯಾಡ್ ಬಾಯ್', 'ಸ್ಪೀಡ್', 'ಅಪಾರ್ಟ್ಮೆಂಟ್' ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ತನುಶ್ರೀ ದತ್ತಾ ಮಿಂಚಿದರು.

  2010 ರಲ್ಲಿ ಬಿಡುಗಡೆ ಆದ 'ಅಪಾರ್ಟ್ಮೆಂಟ್' ಚಿತ್ರದ ನಂತರ ಬಾಲಿವುಡ್ ನಲ್ಲಿ ತನುಶ್ರೀ ದತ್ತಾ ಅಡ್ರೆಸ್ ಗೆ ಇರಲಿಲ್ಲ. ಎಂಟು ವರ್ಷಗಳಿಂದ ಸದ್ದು ಸುದ್ದಿ ಮಾಡದೇ ಸೈಲೆಂಟ್ ಆಗಿದ್ದ ತನುಶ್ರೀ ದತ್ತಾ ಈಗ ಹೇಗಾಗಿದ್ದಾರೆ ಅಂತ ನೀವೇ ನೋಡಿ...

  ನೋಡಿ ತನುಶ್ರೀ ಈಗ ಹೇಗಿದ್ದಾರೆ ಅಂತ...

  ನೋಡಿ ತನುಶ್ರೀ ಈಗ ಹೇಗಿದ್ದಾರೆ ಅಂತ...

  ಹತ್ತು ವರ್ಷಗಳ ಹಿಂದೆ ತೆಳ್ಳಗೆ, ಬಳಕುವ ಬಳ್ಳಿಯಂತಿದ್ದ ತನುಶ್ರೀ ದತ್ತಾ ಇದೀಗ ತೂಕ ಹೆಚ್ಚಿಸಿಕೊಂಡಿದ್ದಾರೆ. ಮುಖಕ್ಕೆ ಕೊಂಚ ಕೂಡ ಮೇಕಪ್ ಮಾಡಿಕೊಳ್ಳದೇ, ಡಿಸೈನರ್ ಉಡುಪುಗಳನ್ನು ಧರಿಸಿದೆ, ಸೀದಾ ಸಾದಾ ಆಗಿ ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಂಗಳಿಗೆ ತನುಶ್ರೀ ದತ್ತಾ ಸೆರೆ ಸಿಕ್ಕರು.

  ಕನ್ನಡಕ್ಕೆ ಬಾಲಿವುಡ್ ಚಾಕೋಲೇಟ್ ಬೆಡಗಿ ತನುಶ್ರೀಕನ್ನಡಕ್ಕೆ ಬಾಲಿವುಡ್ ಚಾಕೋಲೇಟ್ ಬೆಡಗಿ ತನುಶ್ರೀ

  ಎರಡು ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ತನುಶ್ರೀ

  ಎರಡು ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ತನುಶ್ರೀ

  ಎರಡು ವರ್ಷಗಳ ಬಳಿಕ ಇದೀಗಷ್ಟೇ ಭಾರತಕ್ಕೆ ಬಂದಿಳಿದಿದ್ದಾರೆ ನಟಿ ತನುಶ್ರೀ ದತ್ತಾ. ನಿಜ ಹೇಳ್ಬೇಕಂದ್ರೆ, ಮುಂಬೈ ಏರ್ ಪೋರ್ಟ್ ನಲ್ಲಿ ತನುಶ್ರೀ ದತ್ತಾ ರನ್ನ ಗುರುತು ಹಿಡಿದವರ ಸಂಖ್ಯೆ ಬೆರಳೆಣಿಕೆಯಷ್ಟು. ಅಷ್ಟರಮಟ್ಟಿಗೆ ಬದಲಾಗಿದ್ದಾರೆ ತನುಶ್ರೀ ದತ್ತಾ.

  ನೀತು ನೀ ಬೆತ್ತಲೆಯೋ, ಕೆಮೆರಾ ಕೈಚಳಕವೋನೀತು ನೀ ಬೆತ್ತಲೆಯೋ, ಕೆಮೆರಾ ಕೈಚಳಕವೋ

  ಯು.ಎಸ್.ಎ ನಲ್ಲಿ ಸೆಟಲ್ ಆಗಿದ್ದ ತನುಶ್ರೀ ದತ್ತಾ

  ಯು.ಎಸ್.ಎ ನಲ್ಲಿ ಸೆಟಲ್ ಆಗಿದ್ದ ತನುಶ್ರೀ ದತ್ತಾ

  ನಟನೆಯಿಂದ ಕೊಂಚ ಗ್ಯಾಪ್ ಪಡೆದು ಯು.ಎಸ್.ಎ ಗೆ ತೆರಳಿದ್ದ ನಟಿ ತನುಶ್ರೀ ದತ್ತಾ, ಅಲ್ಲೇ ಸೆಟಲ್ ಆಗಿದ್ದರು. ಈಗ ಯು.ಎಸ್.ಎ ಇಂದ ಭಾರತಕ್ಕೆ ಮರಳಿದ್ದಾರೆ.

  ಡಿಪ್ರೆಶನ್ ಗೆ ಒಳಗಾಗಿದ್ದ ತನುಶ್ರೀ

  ಡಿಪ್ರೆಶನ್ ಗೆ ಒಳಗಾಗಿದ್ದ ತನುಶ್ರೀ

  ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿ, ಅವಕಾಶಗಳಿಂದ ವಂಚಿತರಾದ್ಮೇಲೆ ನಟಿ ತನುಶ್ರೀ ದತ್ತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಡಿಪ್ರೆಶನ್ ನಿಂದ ಹೊರಬರಲು ಲಡಾಕ್ ನಲ್ಲಿರುವ ಬೌದ್ಧ ಮೆಡಿಟೇಷನ್ ಸೆಂಟರ್ ಗೆ ಭೇಟಿ ಕೊಟ್ಟು ಮನಃಶಾಂತಿ ಪಡೆದರಂತೆ ನಟಿ ತನುಶ್ರೀ ದತ್ತಾ.

  ಯು.ಎಸ್.ಎಗೆ ಪಯಣ

  ಯು.ಎಸ್.ಎಗೆ ಪಯಣ

  ಲಡಾಕ್ ನಲ್ಲಿ ಮನಸ್ಸಿಗೆ ನೆಮ್ಮದಿ ಸಿಕ್ಕ ಮೇಲೆ ತನುಶ್ರೀ ದತ್ತಾ ಯು.ಎಸ್.ಎ ಗೆ ಹಾರಿದರು. ಅಲ್ಲಿ, ಬಣ್ಣದ ಲೋಕ, ಸಿನಿಮಾ, ಮೀಡಿಯಾ... ಇವೆಲ್ಲದರಿಂದ ದೂರ ಉಳಿದು ಸಾಮಾನ್ಯ ಹುಡುಗಿಯಾಗಿ ಜೀವನ ಸಾಗಿಸುತ್ತಿದ್ದರು ನಟಿ ತನುಶ್ರೀ ದತ್ತಾ.

  ಮುಂಬೈನಲ್ಲಿ ತನುಶ್ರೀ

  ಮುಂಬೈನಲ್ಲಿ ತನುಶ್ರೀ

  ಸದ್ಯಕ್ಕೆ ಒಂದು ಚೇಂಜ್ ಗಾಗಿ ಮುಂಬೈಗೆ ತನುಶ್ರೀ ದತ್ತಾ ಬಂದಿದ್ದಾರೆ. ನಟನೆಯಲ್ಲಿ ಅವರಿಗೆ ಈಗ ಆಸಕ್ತಿ ಇದ್ದ ಹಾಗೆ ಇಲ್ಲ. ಆದ್ರೆ, ಯಾರಾದರೂ ನಿರ್ದೇಶಕರು/ನಿರ್ಮಾಪಕರು ಅವರಿಗೆ ಆಫರ್ ಕೊಟ್ಟರೂ ಅಚ್ಚರಿ ಇಲ್ಲ. ಒಪ್ಪಿಕೊಳ್ಳುವ ಮನಸ್ಸು ತನುಶ್ರೀಗೆ ಇರಬೇಕು ಅಷ್ಟೇ.

  ಸಹೋದರಿ ಇಶಿತಾ ದತ್ತಾ

  ಸಹೋದರಿ ಇಶಿತಾ ದತ್ತಾ

  ತನುಶ್ರೀ ದತ್ತಾ ಸಹೋದರಿ ಇಶಿತಾ ದತ್ತಾ ಕೂಡ ನಟಿ. ಕನ್ನಡದ 'ರಾಜ ರಾಜೇಂದ್ರ', ಹಿಂದಿಯ 'ದೃಶ್ಯಂ' ಹಾಗೂ 'ಫಿರಂಗಿ' ಸಿನಿಮಾಗಳಲ್ಲಿ ಇಶಿತಾ ದತ್ತಾ ಅಭಿನಯಿಸಿದ್ದಾರೆ. ಅಲ್ಲದೇ ಕಿರುತೆರೆಯಲ್ಲಿಯೂ ಇಶಿತಾ ದತ್ತಾ ಅವಕಾಶಗಳನ್ನು ಪಡೆಯುತ್ತಿದ್ದಾರೆ.

  English summary
  Do you remember Tanushree Dutta from Aashiq Banaya Aapne.? Check out Tanushree Dutta's latest pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X