For Quick Alerts
  ALLOW NOTIFICATIONS  
  For Daily Alerts

  ಹಿಂದಿಯ 'ಶುಭ್ ಮಂಗಳ್ ಜ್ಯಾದ ಸಾವಧಾನ್' ಚಿತ್ರದ ಬಗ್ಗೆ ಅಮೆರಿಕ ಅಧ್ಯಕ್ಷ ಹೇಳಿದ್ದೇನು?

  |

  ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನ ಅಭಿನಯದ 'ಶುಭ್ ಮಂಗಳ್ ಜ್ಯಾದ ಸಾವಧಾನ್' ಚಿತ್ರದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಜೊತೆಗೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಆಯುಷ್ಮಾನ್ ಖುರಾನ ಅಭಿನಯದ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಒಂದು ಫೋಟೋಗೆ ಸ್ಟಾರ್ ನಟರ ಸಂಭಾವನೆ ಎಷ್ಟು? | Priyanka Chopra | Instagram | Filmibeat Kannada

  ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 21ಕ್ಕೆ 'ಶುಭ್ ಮಂಗಳ್ ಜ್ಯಾದ ಸಾವಧಾನ್' ಸಿನಿಮಾ ದೇಶ ವಿದೇಶದಲ್ಲಿ ತೆರೆಗೆ ಬಂದಿದೆ. ಅಂದ್ಹಾಗೆ ಈ ಸಿನಿಮಾ ಸಲಿಂಗಕಾಮದ ವಿಷಯವನ್ನಾಧರಿಸಿದ ಚಿತ್ರವಾಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲು ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

  ಸನ್ನಿ ಲಿಯೋನ್ ಬಳಿ ಫೋನ್ ನಂಬರ್ ಕೇಳಿ ಮುಜುಗರಕ್ಕೀಡಾದ ಹಿರಿಯ ನಟಸನ್ನಿ ಲಿಯೋನ್ ಬಳಿ ಫೋನ್ ನಂಬರ್ ಕೇಳಿ ಮುಜುಗರಕ್ಕೀಡಾದ ಹಿರಿಯ ನಟ

  ಇತ್ತೀಚಿಗೆ ಮಾನವ ಹಕ್ಕುಗಳ ಹೋರಾಟಗಾರ ಪೀಟರ್ ಟ್ಯಾಚೆಲ್ ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದರು. ಸಲಿಂಗಕಾಮಿಗಳ ಪ್ರಣಯದ ಬಗ್ಗೆ ಇರುವ ಬಾಲಿವುಡ್ ನ ಹೊಸ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಮನ ಗೆಲ್ಲುವ ಆಶಯ ಹೊಂದಿದೆ ಎಂದು ಬರೆದುಕೊಂಡಿದ್ದರು.

  ಪೀಟರ್ ಟ್ಯಾಚೆಲ್ ಅವರ ಟ್ವಿಟರ್ ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಗ್ರೇಟ್" ಎಂದು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಡೊನಾಲ್ಡ್ ಟ್ರಂಪ್ ಇದೆ ತಿಂಗಳು 24ಕ್ಕೆ ಭಾರತಕ್ಕೆ ಬರುತ್ತಿದ್ದಾರೆ. ಭಾರತಕ್ಕೆ ಭೇಟಿ ನೀಡುವ ಮೊದಲು ಹಿಂದಿ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.

  'ಶುಭ್ ಮಂಗಳ್ ಜ್ಯಾದ ಸಾವಧಾನ್' ರಹಿತೇಶ್ ಕೇವಲ್ಯ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಆಯುಷ್ಮಾನ್ ಖುರಾನ ಜೊತೆ ಜಿತೇಂದ್ರ ಕುಮಾರ್, ನೀನಾ ಗುಪ್ತ ಸೇರಿದಂತೆ ಸಾಕಷ್ಟು ಮಂದಿ ಅಭಿನಯಿಸಿದ್ದಾರೆ. ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

  English summary
  American President Donald Trump reaction to Bollywood film Shubh Mangal zyada Saavdhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X