For Quick Alerts
  ALLOW NOTIFICATIONS  
  For Daily Alerts

  1 ಕೆ.ಜಿ ಮೈಸೂರು ಪಾಕ್ ಇಲ್ಲದೆ ಮನೆಗೆ ಬರಬೇಡಿ: ಗಂಡ ರಣ್ವೀರ್ ಗೆ ದೀಪಿಕಾ ಆರ್ಡರ್.!

  |
  ಗಂಡ ರಣ್ವೀರ್ ಗೆ ದೀಪಿಕಾ ಆರ್ಡರ್.! | Deepika Padukone | Ranveer Singh | Filmibeat Kannada

  ಪತಿ ಎಷ್ಟು ದೊಡ್ಡ ಸ್ಟಾರ್ ಆದರೇನು.. ಪತ್ನಿಗೆ ಆತ ಗಂಡನೇ ಅಲ್ಲವೇ.? ಎಲ್ಲೇ ಹೋದರೂ, ಮನೆಗೆ ವಾಪಸ್ ಬರುವಾಗ ಪತ್ನಿಗಾಗಿ ಪತಿ ಏನಾದರೂ ತರಲೇಬೇಕು ಅಲ್ಲವೇ.? ಪತಿಗೆ ಪತ್ನಿ ಕೊಡುವ ಶಾಪಿಂಗ್ ಲಿಸ್ಟ್ ಕಮ್ಮಿ ಇರುವ ಇತಿಹಾಸ ಏನಾದರೂ ಇದ್ಯಾ ಹೇಳಿ.? ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯದಲ್ಲೂ ಸೇಮ್ ಟು ಸೇಮ್ ಇದೇ ಕಥೆ.!

  ಬಾಲಿವುಡ್ ನಟ ರಣ್ವೀರ್ ಸಿಂಗ್ '83' ಸಿನಿಮಾ ಮಾಡ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೇ '83' ಚಿತ್ರದ ಪ್ರಚಾರಕ್ಕಾಗಿ ನಟ ರಣ್ವೀರ್ ಸಿಂಗ್ ನಿನ್ನೆ ಚೆನ್ನೈಗೆ ತೆರಳಿದ್ದರು. ಹಾಗೇ, '83' ಚಿತ್ರದ ನೂತನ ಪೋಸ್ಟರ್ ನ ರಣ್ವೀರ್ ಸಿಂಗ್ ಅನಾವರಣಗೊಳಿಸಿದರು.

  '83' ಚಿತ್ರದ ಹೊಸ ಪೋಸ್ಟರ್ ನ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲೂ ರಣ್ವೀರ್ ಸಿಂಗ್ ಹಂಚಿಕೊಂಡಿದ್ದರು. ಅದಕ್ಕೆ ದೀಪಿಕಾ ಪಡುಕೋಣೆ ಕಡೆಯಿಂದ ಬಂದ ಪ್ರತಿಕ್ರಿಯೆ ಅಪ್ಪಟ 'ಹೆಂಡ್ತಿ ಮೆಟೀರಿಯಲ್'.! ಮುಂದೆ ಓದಿರಿ...

  ದೀಪಿಕಾ ಕೊಟ್ಟ ಪ್ರತಿಕ್ರಿಯೆ ಏನು.?

  ದೀಪಿಕಾ ಕೊಟ್ಟ ಪ್ರತಿಕ್ರಿಯೆ ಏನು.?

  '83' ಚಿತ್ರದ ಹೊಸ ಪೋಸ್ಟರ್ ನ ರಣ್ವೀರ್ ಸಿಂಗ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ ಹಾಗೆ, ಚೆನ್ನೈನಿಂದ ವಾಪಸ್ ಬರುವಾಗ ಏನೆಲ್ಲಾ ತರಬೇಕು ಎಂಬ ಶಾಪಿಂಗ್ ಲಿಸ್ಟ್ ನ ದೀಪಿಕಾ ಪಡುಕೋಣೆ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

  ಹೆಂಡ್ತಿ ದೀಪಿಕಾ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ್ರಾ ರಣ್ವೀರ್ ಸಿಂಗ್.?ಹೆಂಡ್ತಿ ದೀಪಿಕಾ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ್ರಾ ರಣ್ವೀರ್ ಸಿಂಗ್.?

  ಚೆನ್ನೈನಿಂದ ಏನೆಲ್ಲ ಬೇಕು.?

  ಚೆನ್ನೈನಿಂದ ಏನೆಲ್ಲ ಬೇಕು.?

  ''ಶ್ರೀ ಕೃಷ್ಣ ದಿಂದ ಒಂದು ಕೆ.ಜಿ ಮೈಸೂರು ಪಾಕ್ ಇಲ್ಲದೆ ಚೆನ್ನೈನಿಂದ ವಾಪಸ್ ಬರಬೇಡಿ. ಹಾಗೇ, ಹಾಟ್ ಚಿಪ್ಸ್ ನಿಂದ ಎರಡುವರೆ ಕೆ.ಜಿ ಖಾರವಾದ ಆಲೂಗೆಡ್ಡೆ ಚಿಪ್ಸ್ ಮರೆಯದೆ ತನ್ನಿ'' ಎಂದು ಪತಿ ರಣ್ವೀರ್ ಸಿಂಗ್ ಗೆ ದೀಪಿಕಾ ಪಡುಕೋಣೆ ಆರ್ಡರ್ ಮಾಡಿದ್ದಾರೆ.

  ''ಎಕ್ಸ್ ಕ್ಯೂಸ್ ಮೀ, ಯಾರ್ರೀ ಹೇಳಿದ್ದು.? ಇದು ನನ್ನ ದುಡ್ಡು'' ಎಂದ ದೀಪಿಕಾ.!''ಎಕ್ಸ್ ಕ್ಯೂಸ್ ಮೀ, ಯಾರ್ರೀ ಹೇಳಿದ್ದು.? ಇದು ನನ್ನ ದುಡ್ಡು'' ಎಂದ ದೀಪಿಕಾ.!

  ಕಾಮೆಂಟ್ ಗಳ ಸುರಿಮಳೆ.!

  ಕಾಮೆಂಟ್ ಗಳ ಸುರಿಮಳೆ.!

  ಪತಿ ರಣ್ವೀರ್ ಸಿಂಗ್ ಗೆ ದೀಪಿಕಾ ಪಡುಕೋಣೆ ಕಳುಹಿಸಿರುವ ಶಾಪಿಂಗ್ ಲಿಸ್ಟ್ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯ ದಾಂಪತ್ಯ ಕಂಡು ''ಎಷ್ಟೇ ದೊಡ್ಡ ಸ್ಟಾರ್ ಆದರೂ, ಪತ್ನಿಗೆ ಆತ ಪತಿಯೇ'', ''ಅಪ್ಪಿ ತಪ್ಪಿ ಮರೆತು ವಾಪಸ್ ಬರಬೇಡಿ ರಣ್ವೀರ್'' ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ.

  ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?

  83 ಚಿತ್ರದಲ್ಲೂ ಗಂಡ-ಹೆಂಡ್ತಿ

  83 ಚಿತ್ರದಲ್ಲೂ ಗಂಡ-ಹೆಂಡ್ತಿ

  ಅಂದ್ಹಾಗೆ, '83' ಚಿತ್ರದಲ್ಲೂ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪತಿ-ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 1983 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದ ರೋಮಾಂಚಕ ಕ್ಷಣದ ಸುತ್ತ ಹೆಣೆದಿರುವ ಕಥೆಯೇ '83' ಸಿನಿಮಾ. ಈ ಚಿತ್ರದಲ್ಲಿ ಕಪಿಲ್ ದೇವ್ ಆಗಿ ರಣ್ವೀರ್ ಸಿಂಗ್ ಅಭಿನಯಿಸಿದ್ದರೆ, ಕಪಿಲ್ ದೇವ್ ಪತ್ನಿಯಾಗಿ ದೀಪಿಕಾ ಮಿಂಚಿದ್ದಾರೆ. '83' ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ.

  English summary
  Don't comeback with 1 kg Mysore Pak: Demands Deepika Padukone to Ranveer Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X