For Quick Alerts
  ALLOW NOTIFICATIONS  
  For Daily Alerts

  ಕಂಗನಾಗೆ ತಿರುಗುಬಾಣವಾದ ಡ್ರಗ್ಸ್ ಪ್ರಕರಣ: ತನಿಖೆಗೆ ಸರ್ಕಾರ ಸೂಚನೆ

  |

  ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್‌ನಲ್ಲಿ 99% ಮಂದಿ ಡ್ರಗ್ಸ್ ಸೇವಿಸುತ್ತಾರೆ. ನನಗೆ ಭದ್ರತೆ ಕೊಟ್ಟರೆ ಎಲ್ಲರ ಹೆಸರು ಹೇಳುತ್ತೇನೆ ಎಂದಿದ್ದ ನಟಿ ಕಂಗನಾ ರನೌತ್‌ ವಿರುದ್ಧವೇ ಡ್ರಗ್ಸ್ ನಂಟು ಆರೋಪದ ಮೇಲೆ ತನಿಖೆ ನಡೆಯಲಿದೆ.

  Kangana Ranaut vs Shiv Sena,ಮಹಾರಾಷ್ಟ್ರ ಸರ್ಕಾರಕ್ಕೆ ಕಂಗನಾ ಅವಾಜ್ | Oneindia Kannada

  ಕಂಗನಾ ರನೌತ್‌ನ ಮಾಜಿ ಗೆಳೆಯ ಅಧ್ಯಾಯನ್ ನಾಲ್ಕು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ 'ಕಂಗನಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ನನಗೂ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು' ಎಂದು ಹೇಳಿದ್ದರು. ಆ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿ, ಕಂಗನಾ ಗೆ ಕುತ್ತು ತಂದಿದೆ.

  ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್

  ಅಧ್ಯಾಯನ್, ಕಂಗನಾ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆ ಆಗಬೇಕು ಎಂದು ಶಿವಸೇನಾದ ಕೆಲವು ಶಾಸಕರು ಸರ್ಕಾರವನ್ನು ಒತ್ತಾಯಿಸಿದ ಕಾರಣ, ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಗೃಹ ಇಲಾಖೆಯು ಪೊಲೀಸರಿಗೆ ಸೂಚಿಸಿದೆ.

  ಶಾಸಕರ ಒತ್ತಾಯದ ಮೇರೆ ತನಿಖೆಗೆ ಸೂಚನೆ

  ಶಾಸಕರ ಒತ್ತಾಯದ ಮೇರೆ ತನಿಖೆಗೆ ಸೂಚನೆ

  'ಶಾಸಕರಾದ ಸುನಿಲ್ ಪ್ರಭು, ಪ್ರತಾಪ್ ಸಾರನಿಕ್ ಮನವಿಯ ಮೇರೆಗೆ ಅಧ್ಯಯನ್ ಆರೋಪಿಸಿದಂತೆ ಕಂಗನಾ ಗೆ ಡ್ರಗ್ಸ್ ವ್ಯಸನವಿದೆಯೇ, ಆಕೆ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರೇ ಎಂಬ ಬಗ್ಗೆ ತನಿಖೆ ಮಾಡುವಂತೆ ಸೂಚಿಸಲಾಗಿದೆ. ಈ ವಿಷಯವನ್ನು ವಿಧಾನಸಭೆಯಲ್ಲಿಯೂ ನಾನು ಸ್ಪಷ್ಟಪಡಿಸಿದ್ದೇನೆ' ಎಂದಿದ್ದಾರೆ ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶ್‌ಮುಖ್.

  ಕಂಗನಾ ಡ್ರಗ್ಸ್ ಸೇವಿಸುತ್ತಾರೆ ಎಂದಿದ್ದ ಅಧ್ಯಯನ್

  ಕಂಗನಾ ಡ್ರಗ್ಸ್ ಸೇವಿಸುತ್ತಾರೆ ಎಂದಿದ್ದ ಅಧ್ಯಯನ್

  2016 ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಧ್ಯಯನ್, 'ಪಾರ್ಟಿಯೊಂದರಲ್ಲಿ ಕಂಗನಾ, ಡ್ರಗ್ಸ್ ತೆಗೆದುಕೊಳ್ಳುವಂತೆ ನನ್ನನ್ನು ಒತ್ತಾಯಿಸಿದ್ದಳು, ಆಕೆಯೂ ಅಂದು ಕೊಕೇನ್ ಸೇದಿದ್ದಳು. ನಾವಿಬ್ಬರೂ ಒಟ್ಟಿಗೆ ಹಲವು ಬಾರಿ ಗಾಂಜಾ ಸೇದಿದ್ದೇವೆ' ಎಂದಿದ್ದರು. ಈಗ ಆ ವಿಡಿಯೋ ವೈರಲ್ ಆಗಿದೆ.

  ಸವಾಲೆಸೆದ ಬೆನ್ನಲ್ಲೆ ಕಂಗನಾ ರಣಾವತ್‌ಗೆ ಆಘಾತ ನೀಡಿದ ಮುಂಬೈ ಪಾಲಿಕೆಸವಾಲೆಸೆದ ಬೆನ್ನಲ್ಲೆ ಕಂಗನಾ ರಣಾವತ್‌ಗೆ ಆಘಾತ ನೀಡಿದ ಮುಂಬೈ ಪಾಲಿಕೆ

  'ಆರೋಪ ಸಾಬೀತಾದರೆ ಮುಂಬೈ ಬಿಟ್ಟು ಹೊರಟುಹೋಗುತ್ತೇನೆ'

  'ಆರೋಪ ಸಾಬೀತಾದರೆ ಮುಂಬೈ ಬಿಟ್ಟು ಹೊರಟುಹೋಗುತ್ತೇನೆ'

  ಡ್ರಗ್ಸ್ ನಂಟು ಆರೋಪದ ತನಿಖೆ ಸುದ್ದಿ ಹೊರಬೀಳುತ್ತಿದ್ದಂತೆ ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರನೌತ್, 'ಡ್ರಗ್ಸ್ ಕುರಿತ ಎಲ್ಲಾ ಪರೀಕ್ಷೆಗಳನ್ನು ಮಾಡಿರಿ, ನನ್ನ ಕರೆ ದಾಖಲೆಗಳನ್ನು ಪರೀಕ್ಷಿಸಿ, ನಾನು ಎಂದಾದರೂ ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ್ ಹೊಂದಿದ್ದೆ ಎಂದು ಸಾಬೀತಾದರೆ ಶಾಶ್ವತವಾಗಿ ಮುಂಬೈ ಬಿಟ್ಟು ಹೊರಟುಹೋಗುತ್ತೇನೆ' ಎಂದಿದ್ದಾರೆ ಕಂಗನಾ.

  ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ

  ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎಂದಿದ್ದ ಕಂಗನಾ

  ಇತ್ತೀಚೆಗೆ ಟ್ವೀಟ್‌ ಒಂದರಲ್ಲಿ, 'ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಎನಿಸುತ್ತಿದೆ' ಎಂದಿದ್ದರು ಕಂಗನಾ. ಈ ಹೇಳಿಕೆ ಬಳಿಕ ಆಡಳಿತಾರೂಢ ಶಿವಸೇನಾ ಕಾರ್ಯಕರ್ತರು, ಸಚಿವರು, ಮುಖಂಡರು ಕಂಗನಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅದರ ಮುಂದುವರೆದ ಭಾಗವಾಗಿಯೇ ಈಗ ಹಳೆಯ ವಿಡಿಯೋದ ಬಗ್ಗೆ ಕಂಗನಾ ವಿರುದ್ಧ ತನಿಖೆ ಪ್ರಾರಂಭವಾಗಿದೆ.

  ಕಂಗನಾ ಕಚೇರಿಗೆ ನೊಟೀಸ್

  ಕಂಗನಾ ಕಚೇರಿಗೆ ನೊಟೀಸ್

  ಮುಂಬೈ ಮಹಾನಗರ ಪಾಲಿಕೆಯು ಕಂಗನಾ ರನೌತ್‌ ಅವರ ಕಚೇರಿಗೆ ನೊಟೀಸ್ ಸಹ ಕಳಿಸಿದ್ದು, ಕಚೇರಿಯನ್ನು ನಿಯಮಬಾಹಿರವಾಗಿ ಕಟ್ಟಲಾಗಿದೆ ಎಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ವಕೀಲರ ಮೂಲಕ ಉತ್ತರ ಕೊಟ್ಟಿದ್ದಾರೆ ನಟಿ ಕಂಗನಾ ರನೌತ್.

  ನಾನು ಬಂದೇ ಬರ್ತೀನಿ, ತಾಕತ್ ಇದ್ದರೆ ತಡೆಯಿರಿ: ನಟಿ ಕಂಗನಾ ಸವಾಲ್ನಾನು ಬಂದೇ ಬರ್ತೀನಿ, ತಾಕತ್ ಇದ್ದರೆ ತಡೆಯಿರಿ: ನಟಿ ಕಂಗನಾ ಸವಾಲ್

  English summary
  Maharashtra government order probe Kangana Ranaut about drug peddler relations based on an old interview video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X