For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಅರ್ಜುನ್ ರಾಮ್‌ಪಾಲ್ ಸಹೋದರಿಗೆ ಸಮನ್ಸ್

  |

  ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೆ ಎರಡು ಬಾರಿ ಎನ್‌ಸಿಬಿ ವಿಚಾರಣೆ ಎದುರಿಸಿದ್ದಾರೆ ನಟ ಅರ್ಜುನ್ ರಾಮ್‌ಪಾಲ್. ಇದೀಗ ಅರ್ಜುನ್ ರಾಮ್‌ಪಾಲ್ ಸಹೋದರಿಗೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಸಮನ್ಸ್ ನೀಡಿದೆ.

  ಅರ್ಜುನ್ ರಾಮ್‌ಪಾಲ್ ಪ್ರೇಯಸಿಯ ಸಹೋದರನ್ನು ಎನ್‌ಸಿಬಿಯು ಬಂಧಿಸಿತ್ತು. ಆತ ನೀಡಿದ ಮಾಹಿತಿ ಮೇರೆಗೆ ಅರ್ಜುನ್ ರಾಮ್ ಪಾಲ್ ಮನೆ ಮೇಲೆ ದಾಳಿ ಮಾಡಿ ಅವರನ್ನು, ಅವರ ಪ್ರೇಯಸಿಯನ್ನು ವಿಚಾರಣೆ ಮಾಡಲಾಗಿದೆ. ಇದೀಗ ಅರ್ಜುನ್ ರಾಮ್‌ಪಾಲ್ ಸಹೋದರಿಯನ್ನೂ ವಿಚಾರಣೆ ಗೆ ಕರೆಯಲಾಗಿದೆ.

  ಅರ್ಜುನ್ ರಾಮ್‌ಪಾಲ್ ಸಹೋದರಿ ಕೋಮಲ್ ರಾಮ್‌ಪಾಲ್ 1994 ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದವರು. ಅವರಿಗೆ ಸಮನ್ಸ್ ನೀಡಿರುವ ಎನ್‌ಸಿಬಿ ಜನವರಿ 6 ರಂದು ವಿಚಾರಣೆಗೆ ಹಾಜರಾಗಲು ಹೇಳಿದೆ.

  ಅರ್ಜುನ್ ರಾಮ್‌ಪಾಲ್ ಮನೆ ಮೇಲೆ ದಾಳಿ ನಡೆದಿದ್ದಾಗ, ಅರ್ಜುನ್ ಕೆಲವು ಫೇಕ್ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳನ್ನು ಬಳಸಿ ಔಷದಗಳನ್ನು ತೆಗೆದುಕೊಂಡಿರುವುದು ಮತ್ತು ಅವಧಿ ಮುಗಿದ ಔಷಧಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವುದು ಗೊತ್ತಾಗಿದೆ.

  ಇದೇ ಅಲ್ಲದೆ, ಅರ್ಜುನ್ ರಾಮ್‌ಪಾಲ್ ಗೆಳತಿ ಗೇಬ್ರಿಯಲ್ ಸಹೋದರನ ಮೊಬೈಲ್ ವಾಟ್ಸ್‌ಚಾಟ್‌ ನಲ್ಲಿಯೂ ಅರ್ಜುನ್ ರಾಮ್‌ಪಾಲ್ ವಿರುದ್ಧ ಕೆಲವು ಸಾಕ್ಷ್ಯಗಳು ದೊರಕಿವೆ ಎನ್ನಲಾಗಿದೆ.

  English summary
  Arjun Rampal's sister summoned by NCB related to Drug case. She need to appear before NCB on January 06.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X