For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನವೇ ಭರ್ಜರಿ ಗಳಿಕೆ ಕಂಡ ದುಲ್ಕರ್‌ ಸಲ್ಮಾನ್‌ 'ಚುಪ್‌' ಚಿತ್ರ

  |

  ಬಾಲಿವುಡ್‌ ನಿರ್ದೇಶಕ ಆರ್ ಬಾಲ್ಕಿ ಆ್ಯಕ್ಷನ್‌ ಕಟ್‌ ಹೇಳಿರುವ 'ಚುಪ್‌: ರಿವೇಂಜ್‌ ಆಫ್‌ ದಿ ಆರ್ಟಿಸ್ಟ್‌' ಶುಕ್ರವಾರ (ಸೆಪ್ಟೆಂಬರ್ 23) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ದುಲ್ಕರ್ ಸಲ್ಮಾನ್, ಸನ್ನಿ ಡಿಯೋಲ್, ಶ್ರೇಯಾ ಧನ್ವಂತರಿ ಮತ್ತು ಪೂಜಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಚುಪ್‌ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

  ದುಲ್ಕರ್ ಸಲ್ಮಾನ್ ಅಭಿನಯದ 'ಚುಪ್' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರಾರಂಭ ಪಡೆದುಕೊಂಡಿದೆ. ದೇಶಾದ್ಯಂತ ಸುಮಾರು 1000 ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದು, ಹಲವು ಚಿತ್ರಮಂದಿರಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಂಡಿದೆ. ಇನ್ನು ನಿನ್ನೆ (ಸೆಪ್ಟೆಂಬರ್‌ 23) ರಾಷ್ಟ್ರೀಯ ಸಿನಿಮಾ ದಿನವಾದ ಕಾರಣ ನಿನ್ನೆ ಎಲ್ಲಾ ಚಿತ್ರದ ಬೆಲೆಯನ್ನು 75 ರೂಪಾಯಿಗೆ ಇಳಿಸಲಾಗಿತ್ತು. ಹೀಗಾಗಿ 'ಚುಪ್‌: ರಿವೇಂಜ್‌ ಆಫ್‌ ದಿ ಆರ್ಟಿಸ್ಟ್‌' ಚಿತ್ರ ಹೆಚ್ಚಿನ ಆಕ್ಯುಪೆನ್ಸಿ ಪಡೆದಿದ್ದು ಉತ್ತಮ ಪ್ರದರ್ಶನ ಕಂಡಿದೆ.

  ಸಿನಿಮಾ ವಿಮರ್ಶಕರಿಗೆ ದುಲ್ಕರ್​ ಸಲ್ಮಾನ್​ ಖಡಕ್​ ಮಾತುಸಿನಿಮಾ ವಿಮರ್ಶಕರಿಗೆ ದುಲ್ಕರ್​ ಸಲ್ಮಾನ್​ ಖಡಕ್​ ಮಾತು

  ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ 'ಚುಪ್‌' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ 2.80 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಚಿತ್ರದ ಶೀರ್ಷಿಕೆ ಹಾಗೂ ಟ್ರೈಲರ್‌ನಿಂದ ಭಾರೀ ಕುತೂಹಲ ಮೂಡಿಸಿದ್ದ 'ಚುಪ್‌' ಚಿತ್ರ ಸಿನಿ ಪ್ರಿಯರಿಗೆ ಮನೋರಂಜನೆ ನೀಡುವುದರಲ್ಲಿ ಯಶಸ್ವಿಯಾಗಿದೆ. ಇದೊಂದು ರಹಸ್ಯ ಹಾಗೂ ಥ್ರಿಲ್ಲರ್‌ ಚಿತ್ರವಾಗಿದ್ದು, ಕಥೆಯ ಮೂಲಕ ಇಡಿ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

  ಚುಪ್‌ ಚಿತ್ರವೊಂದು ರಿವೇಂಜ್‌ ಸ್ಟೋರಿಯಾಗಿದ್ದು, ಚಿತ್ರದ ವಿಮರ್ಶಕರನ್ನು ಸೈಕೋಪಾತ್‌ ಕಿಲ್ಲರ್‌ವೊಬ್ಬ ಸರಣಿ ಕೊಲೆಗಳನ್ನು ಮಾಡುವುದೇ ಚಿತ್ರದ ಕಥೆಯಾಗಿದೆ. ಚಿತ್ರದ ಫೇಕ್‌ ರಿವ್ಯೂನಿಂದ ನಟನೊಬ್ಬ ತನ್ನ ಬದುಕಿನ ಎಲ್ಲಾ ಖುಷಿಗಳನ್ನು ಕಳೆದುಕೊಂಡು ಸೈಕೋಪಾತ್‌ ಆಗುತ್ತಾನೆ. ಬಳಿಕ ಆತ ಸೇಡು ತೀರಿಸಿಕೊಳ್ಳಲು ಚಿತ್ರ ವಿಮರ್ಶಕರನ್ನು ಹತ್ಯೆಗೈಯುವುದುದೇ ಚಿತ್ರದ ಕಥಾ ವಸ್ತುವಾಗಿದ್ದು, ಎಂತಹ ಪ್ರೇಕ್ಷಕನನ್ನೂ ಸಹ ಚಿತ್ರ ಹಿಡಿದಿಟ್ಟುಕೊಳ್ಳುತ್ತದೆ. ಅಲ್ಲದೇ ಚಿತ್ರದ ಪ್ರತಿಯೊಂದು ವಿಷಯವು ಕೂಡ ಸಿನಿಮಾ ಮುಗಿದ ಬಳಿಕವೂ ಪ್ರೇಕ್ಷಕನನ್ನು ಕಾಡುತ್ತಿರುತ್ತದೆ.

  ಸೀತಾ-ರಾಮನ್‌ ಚಿತ್ರದ ನಾಯಕ ದುಲ್ಕರ್‌ ಸಲ್ಮಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಚುಪ್‌: ರಿವೇಂಜ್‌ ಆಫ್‌ ದಿ ಆರ್ಟಿಸ್ಟ್‌' ಚಿತ್ರಕ್ಕೆ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಆರ್‌.ಬಾಲ್ಕಿ ನಿರ್ದೇಶನದ 'ಚುಪ್‌' ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ತಮ್ಮ ಚೊಚ್ಚಲ ಸಂಗೀತ ಸಂಯೋಜನೆಯ ಚಿತ್ರದಲ್ಲೇ ಅಮಿತಾಭ್‌ ಬಚ್ಚನ್‌ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

  ಸೀತಾ ರಾಮಮ್‌ಗೆ 50 ದಿನಗಳ ಸಂಭ್ರಮ; ಇಲ್ಲಿಯವರೆಗೆ ಚಿತ್ರ ಗಳಿಸಿದ್ದೆಷ್ಟು?ಸೀತಾ ರಾಮಮ್‌ಗೆ 50 ದಿನಗಳ ಸಂಭ್ರಮ; ಇಲ್ಲಿಯವರೆಗೆ ಚಿತ್ರ ಗಳಿಸಿದ್ದೆಷ್ಟು?

  ಇನ್ನು ನಿನ್ನೆ (ಸಪ್ಟೆಂಬರ್ 23) ಸಿನಿಮಾ ಟಿಕೆಟ್‌ ದರ 75 ರೂಪಾಯಿ ಇದ್ದ ಕಾರಣ ಚುಪ್‌ ಮೊದಲ ದಿನದ ಕಲೆಕ್ಷನ್ ಮೂರು ಕೋಟಿ ರೂಪಾಯಿ ಸಮೀಪಕ್ಕೆ ತಲುಪಿದ್ದು, ಇಂದು (ಸಪ್ಟೆಂಬರ್ 24) ಹಾಗೂ ನಾಳೆ (ಸಪ್ಟೆಂಬರ್ 25) ವೀಕೆಂಡ್‌ನಲ್ಲಿ ಇನ್ನಷ್ಟು ಹೆಚ್ಚು ಗಳಿಕೆ ಕಾಣುವ ನಿರೀಕ್ಷೆ ಇದೆ. ಇನ್ನು 'ಚುಪ್‌: ರಿವೇಂಜ್‌ ಆಫ್‌ ದಿ ಆರ್ಟಿಸ್ಟ್‌' ಚಿತ್ರದ ಜೊತೆ ನಿನ್ನೆ (ಸೆಪ್ಟೆಂಬರ್‌ 23) ತೆರೆಕಂಡ ಬಾಲಿವುಡ್‌ ನಟ ಆರ್ ಮಾಧವನ್ ಹಾಗೂ ಅಪರ್ಶಕ್ತಿ ಖುರಾನಾ ಅಭಿನಯದ ಧೋಖಾ: ರೌಂಡ್‌ ಡಿ ಕಾರ್ನರ್‌ ಚಿತ್ರ 1.50 ಕೋಟಿ ಮೊದಲ ದಿನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಗಳಿಕೆ ಮಾಡಿದೆ.

  ಇನ್ನು ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಬಾಕ್ಸ್‌ ಆಫೀಸ್‌ ಬೇಟೆ ಮುಂದುವರಿದಿದ್ದು, ನಿನ್ನೆ (ಸೆಪ್ಟೆಂಬರ್‌ 23) ಕೂಡ ಉತ್ತಮ ಗಳಿಕೆ ಕಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಬ್ರಹ್ಮಾಸ್ತ್ರ 10.89 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಭಾರತದಲ್ಲಿ ಕಳೆದ 15 ದಿನಗಳಲ್ಲಿ ಬ್ರಹ್ಮಾಸ್ತ್ರ ಚಿತ್ರ 241.53 ಕೋಟಿ ರೂಪಾಯಿ ಗಳಿಕೆ ಮಾಡಿದೆ.

  English summary
  Bollywood Actor Dulquer Salmaan starer Chup: Revenge Of An Artist movie first day box office collection.
  Saturday, September 24, 2022, 11:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X