For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ವಿಮರ್ಶಕರನ್ನು ಕೊಲ್ಲುತ್ತಿರುವ ಸೈಕೋ ಕಿಲ್ಲರ್!

  |

  ಮಲಯಾಳಂ ನಟ ದುಲ್ಕರ್ ಸಲ್ಮಾನ್ ಈಗ ಬಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ದುಲ್ಕರ್ ನಟನೆಯ 'ಸೀತಾ ರಾಮಂ' ಸಿನಿಮಾ ಹಿಂದಿಗೂ ಡಬ್ ಆಗಿ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ 'ಚುಪ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೀತಿದೆ. 'ಪಾ', 'ಕಿ ಅಂಡ್ ಕಾ', 'ಪ್ಯಾಡ್‌ಮ್ಯಾನ್' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟ ಬಾಲ್ಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರೊಮ್ಯಾಂಟಿಕ್ ಸೈಕೊಪಾತ್ ಥ್ರಿಲ್ಲರ್ 'ಚುಪ್' ಸಿನಿಮಾ ಸೆಪ್ಟೆಂಬರ್‌ 23ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ.

  'ಚುಪ್- ರಿವೇಂಜ್ ಆಫ್ ಆರ್ಟಿಸ್ಟ್' ಟೈಟಲ್ಲೇ ಹೇಳುವಂತೆ ಸಿನಿಮಾ ಸುತ್ತಾ ಈ ಕಥೆ ಸುತ್ತುತ್ತೆ. 2 ನಿಮಿಷಗಳ ಟ್ರೈಲರ್‌ ಬಹಳ ರೋಚಕವಾಗಿದೆ. ಸಿನಿಮಾ ರಿವ್ಯೂ ಮಾಡುವವರನ್ನು ಒಬ್ಬ ಸೈಕೋ ಕಿಲ್ಲರ್ ಕೊಲ್ಲುತ್ತಿರುತ್ತಾನೆ. ಸಿನಿಮಾಗೆ ಅವರು ಕೊಟ್ಟ ರೇಟಿಂಗ್ ಆಧರಿಸಿ ಅವರ ತಲೆ ಮೇಲೆ ಅಷ್ಟು ರೇಟಿಂಗ್ ಕೊಡುತ್ತಿರುತ್ತಾನೆ. ಒಂದು ಚಿತ್ರಕ್ಕೆ ಒಂದು ಸ್ಟಾರ್ ಕೊಟ್ಟವನ ತಲೆ ಮೇಲೆ ಒಂದು ಸ್ಟಾರ್ ಮುದ್ರೆ ಹಾಕ್ತಾನೆ. ಹೀಗೆ ಎಷ್ಟು ಸ್ಟಾರ್ಸ್ ಕೊಟ್ಟರೆ ಅಷ್ಟು ಸ್ಟಾರ್ಸ್‌ನ ಹಣೆ ಮೇಲೆ ಚಾಕುವಿನಿಂದ ಬರೆಯುತ್ತಿರುತ್ತಾನೆ. ಈ ಸೈಕೊ ಕಿಲ್ಲರ್‌ನ ಹಿಡಿಯಲು ಪೊಲೀಸ್ ಆಫೀಸರ್ ಆಗಿ ಸನ್ನಿ ಡಿಯೋಲ್ ಎಂಟ್ರಿ ಕೊಡುವುದನ್ನು ಟ್ರೈಲರ್‌ನಲ್ಲಿ ನೋಡಬಹುದು.

  ನೀರಸವಾದ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೈಟಲ್ ಟೀಸರ್!ನೀರಸವಾದ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೈಟಲ್ ಟೀಸರ್!

  'ನಾವು ಒಬ್ಬ ವಿಚಿತ್ರ ಸೀರಿಯಲ್‌ನ ನೋಡ್ತಿದ್ದೀವಿ. ಇವನು ಸಿನಿಮಾಗಳಿಗೆ ಸ್ಟಾರ್ಸ್ ಕೊಡುವವರನ್ನು ಕೊಲ್ಲುತ್ತಾನೆ. ಅಂದರೆ ವಿಮರ್ಶಕರ ವಿಮರ್ಶಕ' ಎನ್ನುವ ಸನ್ನಿ ಡಿಯೋಲ್ ಡೈಲಾಗ್ ಜೊತೆಗೆ ಟ್ರೈಲರ್ ಶುರುವಾಗುತ್ತದೆ. 'ಸೈಕೋ ಕಿಲ್ಲರ್ ಕ್ರೈಂಗಳ ಜೊತೆ ಜೊತೆಗೆ ದುಲ್ಕರ್ ಸಲ್ಮಾನ್ ತನ್ನ ಪ್ರೇಯಸಿ ಜೊತೆ ಸಿನಿಮಾಗಳ ಬಗ್ಗೆ ಚರ್ಚೆ ಮಾಡುವುದನ್ನು ನೋಡಬಹುದು. ಹಿರಿಯ ನಟಿ ಪೂಜಾ ಭಟ್ ಹಿರಿಯ ಸಿನಿಮಾ ವಿಮರ್ಶಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಸೈಕೋ ಕಿಲ್ಲರ್ ಯಾರು? ಸಿನಿಮಾ ವಿಮರ್ಶಕರನ್ನು ಅವನು ಕೊಲ್ಲುವುದು ಯಾಕೆ? ಆತನಿಗೂ ದುಲ್ಕರ್ ಸಲ್ಮಾನ್‌ಗೂ ಏನ್ ಸಂಬಂಧ? ಇದೆಲ್ಲಾ ಗೊತ್ತಾಗಬೇಕು ಅಂದರೆ ನೀವು ಥಿಯೇಟರ್‌ಗೆ ಹೋಗಬೇಕು.

  ಫೇಕ್ ಸಿನಿಮಾ ರಿವ್ಯೂ ಕಾರಣಕ್ಕೆ ಜೀವನದಲ್ಲಿ ಸರ್ವಸ್ವವನ್ನು ಕಳೆದುಕೊಂಡ ನಟನೊಬ್ಬ ಅಂತವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ 'ಚುಪ್' ಸಿನಿಮಾದಲ್ಲಿದೆ. ರಾಕೇಶ್ ಜುನಾಂಜುವಾಲಾ, ಜಯಂತಿಲಾಲ್ ಗಡ, ಅನಿಲ್ ನಾಯ್ಡು, ಗೌರಿ ಶಿಂಧೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೇಯಾ ಧನ್ವಂತರಿ ನಾಯಕಿಯಾಗಿ ಮಿಂಚಿದ್ದಾರೆ. ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  Dulquer Salmaan Starrer Chup: Revenge Of The Artist trailer Released

  Recommended Video

  Kantara Trailer Review | ಹೊಂಬಾಳೆ ಫಿಲ್ಮ್ಸ್‌ನ ಮತ್ತೊಂದು ಮೈಲಿಗಲ್ಲಾಗುತ್ತಾ 'ಕಾಂತಾರ' | Rishab Shetty

  'ಕಾರ್ವಾನ್' ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ದುಲ್ಕರ್‌ ಸಲ್ಮಾನ್ ಹಿಂದಿ ಪ್ರೇಕ್ಷಕರ ಮನಗೆದ್ದಿದ್ದರು. 'ದಿ ಜೋಯಾ ಫ್ಯಾಕ್ಟರ್' ಸೋನಮ್ ಕಪೂರ್‌ ಜೊತೆ ಮಲಯಾಳಂ ನಟ ಅಭಿನಯಿಸಿದ್ದರು. ಇದೀಗ 'ಚುಪ್- ರಿವೇಂಜ್ ಆಫ್ ಆರ್ಟಿಸ್ಟ್' ಸಿನಿಮಾ ಮೂಲಕ ಮತ್ತೆ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಇನ್ನು ತೆಲುಗಿನಲ್ಲಿ ಹಿಟ್ ಆಗಿರುವ 'ಸೀತಾ ರಾಮಂ' ಹಿಂದಿಗೆ ಡಬ್ ಆಗಿ ಸಖತ್ ಸದ್ದು ಮಾಡ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಬೆಲ್ಟ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದು, ಆ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ. ಬಾಲಿವುಡ್‌ನಲ್ಲಿ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗದೇ ಇರುವುದು ದುಲ್ಕರ್ ಚಿತ್ರಕ್ಕೆ ಪ್ಲಸ್ ಆಗಿದೆ.

  English summary
  Dulquer Salmaan Starrer Chup: Revenge Of The Artist trailer Released. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X