Don't Miss!
- News
Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೋರ್ನ್ ವಿಡಿಯೋ: ರಾಜ್ ಕುಂದ್ರಾ ವಿರುದ್ಧ ಇನ್ನೊಂದು ಪ್ರಕರಣ
ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪೋರ್ನ್ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಡಿ ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಕಳೆದ ವರ್ಷಾಂತ್ಯದಲ್ಲಿ ಕೇಸು ದಾಖಲಿಸಿ, ಬಂಧಿಸಿದ್ದರು. ಇದೀಗ ಇಡಿ ಇದೇ ಪ್ರಕರಣದ ಹಣಕಾಸು ಅಂಶವನ್ನು ಪ್ರಧಾನವಾಗಿಸಿಕೊಂಡು ಕೇಸು ದಾಖಲಿಸಿದೆ.
ರಾಜ್ ಕುಂದ್ರಾ ಒಡೆತನದ ಆರ್ಮ್ಸ್ ಪ್ರೈಂ ಮೀಡಿಯಾ ಲಿಮಿಟೆಡ್ ಸಂಸ್ಥೆಯು 'ಹಾಟ್‌ಶಾಟ್ಸ್' ಎಂಬ ಅಪ್ಲಿಕೇಶನ್ ಪ್ರಾರಂಭಿಸಿತ್ತು. ಇದೇ ಅಪ್ಲಿಕೇಶನ್‌ಗಾಗಿ ಭಾರತದಲ್ಲಿ ಪೋರ್ನ್ ವಿಡಿಯೋಗಳನ್ನು ನಿರ್ಮಾಣ ಮಾಡಿ ವಿದೇಶದಿಂದ ಅಪ್‌ಲೋಡ್ ಮಾಡಲಾಗುತ್ತಿತ್ತು ಎಂಬ ಆರೋಪದ ಮೇಲೆ ರಾಜ್ ಕುಂದ್ರಾ ಹಾಗೂ ಇತರರನ್ನು ಬಂಧಿಸಲಾಗಿತ್ತು. ಪ್ರಸ್ತುತ ಜಾಮೀನಿನ ಮೇಲೆ ಕುಂದ್ರಾ ಹೊರಗಿದ್ದಾರೆ.
ಸೂಪರ್
ವುಮೆನ್
ಆಗಿ
ಮತ್ತೆ
ಸಾಮಾಜಿಕ
ಮಾಧ್ಯಮಕ್ಕೆ
ಲಗ್ಗೆ
ಇಟ್ಟ
ನಟಿ
ಶಿಲ್ಪಾ
ಶೆಟ್ಟಿ
ಇದೀಗ ಜಾರಿ ನಿರ್ದೇಶನಾಲಯ (ಇಡಿ) ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದು, ಪೋರ್ನ್ ವಿಡಿಯೋಗಳಿಂದ ಹಣವನ್ನು ಅಕ್ರಮವಾಗಿ ಗಳಿಸಿದ್ದಲ್ಲದೆ, ನಿಯಮಬಾಹಿರವಾಗಿ ಹಣ ವರ್ಗಾವಣೆ ಹಾಗೂ ತೆರಿಗೆ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.
ಇನ್ಸ್‌ಟಾಗ್ರಾಂ,
ಟ್ವೀಟರ್
ಗೆ
ಗುಡ್
ಬೈ
ಹೇಳಿದ
ನಟಿ
ಶಿಲ್ಪಾ
ಶೆಟ್ಟಿ,
ಕಾರಣ
ಏನು
ಗೊತ್ತಾ?

13 ಖಾತೆಗಳಿಗೆ ಹಣ ವರ್ಗಾವಣೆ
ರಾಜ್ ಕುಂದ್ರಾ ಒಡೆತನದ ಆರ್ಮ್ಸ್ ಪ್ರೈಂ ಮೀಡಿಯಾ ಲಿಮಿಟೆಡ್ ಸಂಸ್ಥೆಯನ್ನು ಬ್ರಿಟನ್ ಕೆನ್‌ರಿನ್ ಹೆಸರಿನ ಸಂಸ್ಥೆಗೆ ಕುಂದ್ರಾ ಮಾರಾಟ ಮಾಡಿದರು. ಅಸಲಿಗೆ ಇದು ಕುಂದ್ರಾದ ಆಪ್ತ ಸಂಬಂಧಿ ಪ್ರಕಾಶ್ ಭಕ್ಷಿಯ ಸಂಸ್ಥೆಯೇ ಆಗಿದೆ. ಅದರ ಬಳಿಕ ರಾಜ್ ಕುಂದ್ರಾರ ಮತ್ತೊಂದು ಸಂಸ್ಥೆ ವಿಯಾನ್ ಇಂಡಸ್ಟ್ರೀಸ್ ಬ್ರಿಟನ್‌ನ ರಾಜ್ ಕುಂದ್ರಾ ಸಂಬಂಧಿಯ ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಬಳಿಕ ವಿಯಾನ್ ಇಂಡಸ್ಟ್ರಿಯ 13 ಖಾತೆಗಳಿಂದ ಕೋಟ್ಯಂತರ ರುಪಾಯಿ ವ್ಯವಹಾರ ನಡೆದಿದೆ ಈ ಬಗ್ಗೆ ಇದೀಗ ಇಡಿ ತನಿಖೆ ನಡೆಸುತ್ತಿದೆ.

ಕೋಟ್ಯಂತರ ರುಪಾಯಿ ವ್ಯವಹಾರ
ಕೆನ್‌ರಿನ್ ಹಾಗೂ ವಿಯಾನ್ ಸಂಸ್ಥೆಯ ನಡುವೆ ನಡೆದಿರುವ ಕೋಟ್ಯಂತರ ರುಪಾಯಿ ಹಣಕಾಸು ವ್ಯವಹಾರ ನಿಯಮ ಬಾಹಿರ ಎಂಬ ಅನುಮಾನವನ್ನು ಇಡಿ ವ್ಯಕ್ತಪಡಿಸಿದೆ. ಅಲ್ಲದೆ ಕೆನ್‌ರಿನ್ ಹಾಗೂ ವಿಯಾನ್ ನಡುವೆ ನಡೆದಿರುವ ಹಣಕಾಸು ವಿನಿಮಯ ಪೋರ್ನ್ ವಿಡಿಯೋ ನಿರ್ಮಾಣದಿಂದ ರಾಜ್ ಕುಂದ್ರಾ ಗಳಿಸಿರುವ ಲಾಭ ಎಂದೂ ಹೇಳಲಾಗುತ್ತಿದೆ.

ಆರೋಪ ಅಲ್ಲಗಳೆದಿದ್ದ ರಾಜ್ ಕುಂದ್ರಾ
ಭಾರತದಲ್ಲಿ ಪೋರ್ನ್ ವಿಡಿಯೋ ನಿರ್ಮಾಣ ಮಾಡುತ್ತಿದ್ದ ರಾಜ್ ಕುಂದ್ರಾ ಅದನ್ನು ಬ್ರಿಟನ್‌ನ ಕೆನ್‌ರಿನ್ ಸಂಸ್ಥೆ ಮೂಲಕ ಅದನ್ನು ಹಾಟ್‌ಶಾಟ್ಸ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ರಾಜ್ ಕುಂದ್ರಾ ತಾನು ಪೋರ್ನ್ ವಿಡಿಯೋ ನಿರ್ಮಾಣ ಮಾಡಿಲ್ಲವೆಂದು ಶೃಂಗಾರಮಯ ವಿಡಿಯೋಗಳನ್ನಷ್ಟೆ ನಿರ್ಮಾಣ ಮಾಡಿದ್ದೆ ಎಂದು ಹೇಳಿದ್ದರು. ಪ್ರಕರಣದ ವಿಚಾರಣೆ ಮುಂಬೈ ಹೈಕೋರ್ಟ್‌ನಲ್ಲಿ ಚಾಲ್ತಿಯಲ್ಲಿದೆ.

ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಬಂಧಿಸಲಾಗಿತ್ತು
ಪೋರ್ನ್ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು 2021ರ ಜುಲೈ 19 ರಂದು ಬಂಧಿಸಿದ್ದರು. ಕುಂದ್ರಾ ಜೊತೆಗೆ ಇನ್ನೂ 11 ಜನರನ್ನು ಬಂಧಿಸಲಾಗಿತ್ತು. ರಾಜ್ ಕುಂದ್ರಾ ಬಂಧನದ ಬಳಿಕ ನಟಿಯರಾದ ಶೆರ್ಲಿನ್ ಚೋಪ್ರಾ, ಪೋನಂ ಪಾಂಡೆ ಅವರುಗಳು ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದರು. ಆದರೆ ಗೆಹನಾ ವಸಿಷ್ಠಾ ಹಾಗೂ ಇತರೆ ಕೆಲವು ನಟಿಯರು ರಾಜ್ ಕುಂದ್ರಾಗೆ ಬೆಂಬಲ ಸೂಚಿಸಿದ್ದರು.