For Quick Alerts
  ALLOW NOTIFICATIONS  
  For Daily Alerts

  ಕಾಶ್ಮೀರದಲ್ಲಿ ನಟ ಇಮ್ರಾನ್ ಹಶ್ಮಿ ಮೇಲೆ ಹಲ್ಲೆ? ನಟ ಹೇಳಿದ್ದೇನು?

  |

  ಬಾಲಿವುಡ್ ನಟ ಇಮ್ರಾನ್ ಹಶ್ಮಿ ತಮ್ಮ ಹೊಸ ಸಿನಿಮಾ 'ಗ್ರೌಂಡ್ ಝೀರೊ' ಸಿನಿಮಾದ ಚಿತ್ರೀಕರಣವನ್ನು ಕಾಶ್ಮೀರದ ಶ್ರೀನಗರದಲ್ಲಿ ಮಾಡುತ್ತಿದ್ದಾರೆ.

  ಕಳೆದ ಕೆಲದಿನಗಳಿಂದಲೂ ಕಾಶ್ಮೀರದ ಶ್ರೀನಗರ ಹಾಗೂ ಫಾಲೆಗಾಮ್‌ನಲ್ಲಿ ಸಿನಿಮಾದ ಶೂಟಿಂಗ್ ಚಾಲ್ತಿಯಲ್ಲಿದೆ. ಆದರೆ ಸೆಪ್ಟೆಂಬರ್ 18ರಂದು 'ಗ್ರೌಂಡ್ ಝೀರೊ'ದ ಸಿನಿಮಾ ಸೆಟ್‌ ಮೇಲೆ ಕೆಲವರು ದಾಳಿ ನಡೆಸಿ ನಟ ಹಾಗೂ ಚಿತ್ರತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನಾ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಇಮ್ರಾನ್ ಹಶ್ಮಿಗೆ ಗಾಯಗಳಾಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ನಟ ಇಮ್ರಾನ್ ಹಶ್ಮಿ ಇದು ಸುಳ್ಳು ಸುದ್ದಿಯೆಂದಿದ್ದಾರೆ. ''ಕಾಶ್ಮೀರದ ಜನ ಬಹಳ ಹೃದಯವಂತರು, ಪ್ರೀತಿ ತುಂಬಿರುವವರು. ಶ್ರೀನಗರ ಹಾಗೂ ಫಾಲ್‌ಗಾಮ್‌ನಲ್ಲಿ ಚಿತ್ರೀಕರಣ ಮಾಡಿದ್ದು ಬಹಳ ಸಂತೋಶದ ಸಂಗತಿ. ಕಲ್ಲು ತೂರಾಟದಿಂದ ನಾನು ಗಾಯಗೊಂಡಿದ್ದೇನೆ ಎಂಬ ಸುದ್ದಿ ನಿಜವಲ್ಲ'' ಎಂದಿದ್ದಾರೆ.

  ಗ್ರೌಂಡ್ ಜೀರೋದ ಚಿತ್ರೀಕರಣಕ್ಕಾಗಿ ತೆರಳುತ್ತಿರುವುದಾಗಿ ಆಗಸ್ಟ್ 24 ರಂದು ಟ್ವೀಟ್ ಮಾಡಿದ್ದರು ಇಮ್ರಾನ್ ಹಶ್ಮಿ, ಶ್ರೀನಗರದಲ್ಲಿ ಕೆಲವು ದಿನಗಳ ಕಾಲ ಚಿತ್ರೀಕರಣ ನಡೆಸಿ ಬಳಿಕ ಫಾಲಗಮ್‌ಗೆ ಬದಲಾಯಿಸಿದ್ದರು.

  'ಗ್ರೌಂಡ್ ಝೀರೋ' ಸಿನಿಮಾವು ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ಸಾಯಿ ತಮಂಕರ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೋಯಾ ಹುಸೇನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಮ್ರಾನ್ ಹಶ್ಮಿ ಕಾಶ್ಮೀರದಲ್ಲಿ ತಮ್ಮ ಸಿನಿಮಾದ ಚಿತ್ರೀಕರಣ ನಡೆಸಿದ್ದಾರೆ.

  ಜಮ್ಮು ಕಾಶ್ಮೀರಕ್ಕೆ ವಿಶೇಷ ಸಾಂವಿಧಾನಿಕ ಪ್ರಾಧಾನ್ಯತೆ ನೀಡಿದ್ದ 370 ವಿಧಿ ರದ್ದು ಮಾಡಿದ ಬಳಿಕ ಹಲವು ಸಿನಿಮಾಗಳ ಚಿತ್ರೀಕರಣವನ್ನು ಕಾಶ್ಮೀರದ ವಿವಿಧ ನಗರಗಳಲ್ಲಿ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ತೆಲುಗಿನ 'ಖುಷಿ' ಸಿನಿಮಾದ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಮಾಡಲಾಯ್ತು. ಈ ಸಿನಿಮಾದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ನಟಿಸಿದ್ದಾರೆ.

  ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ಮಾಡುವವರಿಗೆ ಸಿಂಗಲ್ ವಿಂಡೋ ಅನುಮತಿ ನೀಡುವುದಾಗಿ ಘೋಷಿಸಲಾಗಿದೆ. ಅಲ್ಲದೆ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಹಲವು ಮೂಲಭೂತಸೌಕರ್ಯ ಕಲ್ಪಿಸುವುದಾಗಿಯೂ ಹೇಳಲಾಗಿದೆ. ಹಾಗಾಗಿ ಇತ್ತೀಚೆಗೆ ಕಾಶ್ಮೀರದಲ್ಲಿ ಸಿನಿಮಾಗಳ ಚಿತ್ರೀಕರಣ ಹೆಚ್ಚಾಗಿದೆ.

  ಇನ್ನು ಇಮ್ರಾನ್ ಹಶ್ಮಿ ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ, ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್-ಕತ್ರಿನಾ ಕೈಫ್ ನಟಿಸಿರುವ 'ಟೈಗರ್ 3' ಸಿನಿಮಾದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆ 'ಸೆಲ್ಫಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಲಯಾಳಂನ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾದ ರೀಮೇಕ್ ಆಗಿದೆ. ಜೊತೆಗೆ 'ಗ್ರೌಂಡ್ ಝೀರೊ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Emraan Hashmi rubbishes attack on him and Ground Zero movie crew in Kashmir's Srinagar. He clarifies it in his new tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X