For Quick Alerts
  ALLOW NOTIFICATIONS  
  For Daily Alerts

  ಮನಿ ಲಾಂಡರಿಂಗ್ ಪ್ರಕರಣ: ಯಾಮಿ ಗೌತಮ್‌ಗೆ 'ಇಡಿ' ಸಮನ್ಸ್

  |

  ಹೊಸದಾಗಿ ಮದುವೆಯಾಗಿದ್ದ ಬಾಲಿವುಡ್ ನಟಿ ಯಾಮಿ ಗೌತಮ್‌ಗೆ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ (ಜುಲೈ 2) ಸಮನ್ಸ್ ನೀಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿದ ಆರೋಪದಲ್ಲಿ ವಿಚಾರಣೆ ಎದುರಿಸುವಂತೆ 'ಬದ್ಲಾಪುರ್' ನಟಿಗೆ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

  ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಇಡಿ ಎರಡನೇ ವಲಯದ ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ. ಅದಾಗಲೇ ಒಮ್ಮೆ ನೋಟಿಸ್ ಕಳುಹಿಸಲಾಗಿತ್ತು. ಈಗ ಎರಡನೇ ಸಲ ವಿಚಾರಣೆಗೆ ಆಹ್ವಾನಿಸಲಾಗಿದೆ.

  ಮದುವೆಯಾದ 'ಉಲ್ಲಾಸ-ಉತ್ಸಾಹ' ನಾಯಕಿ ಯಾಮಿ ಗೌತಮ್ ಮದುವೆಯಾದ 'ಉಲ್ಲಾಸ-ಉತ್ಸಾಹ' ನಾಯಕಿ ಯಾಮಿ ಗೌತಮ್

  ಮುಂಬೈ ಘಟಕದಿಂದ ನೋಟಿಸ್ ಜಾರಿ ಮಾಡಿದ್ದು, ಜುಲೈ 7 ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ತನ್ನ ಖಾಸಗಿ ಬ್ಯಾಂಕ್ ಖಾತೆಯಲ್ಲಿ ವಿದೇಶಿ ವ್ಯವಹಾರ ಮಾಡಿದ್ದು, ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.

  ಯಾಮಿ ಗೌತಮ್ ನಡೆಸಿರುವ ಕೆಲವು ವ್ಯವಹಾರಗಳು ಇಡಿ ಅಡಿಯಲ್ಲಿ ಬಂದಿರುವ ಕಾರಣ ಪ್ರಾಥಮಿಕ ತನಿಖೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟಿಯ ವಿಚಾರಣೆಗೆ ಮುಂದಾಗಿದೆ. ಇನ್ನು ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಗಳು ಸಹ ಇಡಿ ಕಣ್ಗಾವಲಿನಲ್ಲಿದೆ ಎಂಬ ವಿಚಾರವೂ ಹೊರಬಿದ್ದಿದೆ.

  ಆದಿತ್ಯ ಧಾರ್ ಜೊತೆ ವಿವಾಹ

  ಅಂದ್ಹಾಗೆ, ನಟಿ ಯಾಮಿ ಗೌತಮ್ ಜೂನ್ 5 ರಂದು ಗೆಳೆಯ ಆದಿತ್ಯ ಧಾರ್ ಜೊತೆ ವಿವಾಹವಾದರು. ಒಂದು ತಿಂಗಳ ಬಳಿಕ ಸಿನಿಮಾ ಚಿತ್ರೀಕರಣ ಸಹ ಆರಂಭಿಸಿದ್ದಾರೆ.

  ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada

  2009ರಲ್ಲಿ ಗಣೇಶ್ ಜೊತೆ 'ಉಲ್ಲಾಸ್ ಉತ್ಸಾಹ' ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಪರಿಚಯ ಆದ ನಟಿ ಯಾಮಿ ಗೌತಮ್, 2012ರಲ್ಲಿ 'ವಿಕ್ಕಿ ಡೋನರ್' ಸಿನಿಮಾದೊಂದಿಗೆ ಬಾಲಿವುಡ್ ಪ್ರವೇಶಿಸಿದರು.

  ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಬಹುಭಾಷೆಯಲ್ಲಿ ನಟಿಸುತ್ತಿರುವ ಯಾಮಿ ಗೌತಮ್, ಬದ್ಲಾಪುರ್, ಕಾಬಿಲ್, ಸರ್ಕಾರ್ 3, ಆಕ್ಷನ್ ಜಾಕ್ಸನ್, ಉರಿ, ಭೂತ್ ಪೊಲೀಸ್ ಅಂತಹ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Money laundering case: Enforcement Directorate (ED) summons actor Yami Gautam, asking her her statement in connection with alleged irregularities under FEMA.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X