For Quick Alerts
  ALLOW NOTIFICATIONS  
  For Daily Alerts

  ನವರಾತ್ರಿ ಹಬ್ಬಕ್ಕೆ ಅಶ್ಲೀಲ ಸಂದೇಶ: ಎರೋಸ್ ಅನ್ನು ಪಾರ್ನ್ ಹಬ್‌ ಗೆ ಹೋಲಿಸಿದ ನಟಿ

  |

  ನವರಾತ್ರಿ ಹಬ್ಬ ನಡೆಯುತ್ತಿದೆ. ದೇಶದೆಲ್ಲೆಡೆ ಭಕ್ತಿ ಯಿಂದ ಹಬ್ಬ ಆಚರಿಸಲಾಗುತ್ತಿದೆ. ಉದ್ಯಮಗಳಿಗೂ ಈ ಹಬ್ಬ ಶುಭವೆಂಬುದು ಮಾರುಕಟ್ಟೆ ಲೆಕ್ಕಾಚಾರ. ಹಲವು ಸಂಸ್ಥೆಗಳು, ವಿಶೇಷ ಆಫರ್‌ಗಳನ್ನು ನೀಡುತ್ತವೆ, ಹಬ್ಬಕ್ಕೆ ಶುಭಾಶಯ ಕೋರಿ ಪ್ರಕಟಣೆಗಳನ್ನು ಸಹ ಹೊರಡಿಸುತ್ತದೆ.

  ಆದರೆ ಮನೊರಂಜನಾ ಉದ್ಯಮದಲ್ಲಿ ಹಳೆಯ ಸಂಸ್ಥೆಯಾಗಿರುವ ಎರೋಸ್ ನೌ ನವರಾತ್ರಿ ಹಬ್ಬಕ್ಕೆ ನೀಡಿರುವ ಸಂದೇಶ ಅಥವಾ ಶುಭಾಶಯ ನಿಜಕ್ಕೂ ಅಶ್ಲೀಲವಾಗಿದೆ. ಬಹು ವರ್ಷಗಳಿಂದ ಎರೋಸ್ ಸಂಸ್ಥೆಯು ನಿರ್ಮಾಣ, ವಿತರಣೆ ಕಾರ್ಯ ಮಾಡುತ್ತಾ ಬಂದಿದೆ.

  ತುಸುವೂ ಸದಭಿರುಚಿ ಇಲ್ಲದ ಹಬ್ಬದ ಶುಭಾಶಯ ನೀಡಿರುವ ಎರೋಸ್ ನೌ ಸಂಸ್ಥೆಯ ನಡೆಯನ್ನು ನಟಿ ಕಂಗನಾ ರಣೌತ್ ತೀವ್ರವಾಗಿ ಖಂಡಿಸಿದ್ದಾರೆ. ಮತ್ತು ಎರೋಸ್ ನೌ ಅನ್ನು ವಯಸ್ಕರ ವೆಬ್‌ಸೈಟ್‌ ಗೆ ಹೋಲಿಸಿದ್ದಾರೆ.

  ದ್ವಂದ್ವಾರ್ಥ ಬರುವ ಪೋಸ್ಟರ್‌ಗಳ ಪ್ರಕಟಣೆ

  ದ್ವಂದ್ವಾರ್ಥ ಬರುವ ಪೋಸ್ಟರ್‌ಗಳ ಪ್ರಕಟಣೆ

  ನವರಾತ್ರಿ ಹಬ್ಬಕ್ಕೆ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿರುವ ಎರೋಸ್ ಸಂಸ್ಥೆ, ದ್ವಂದ್ವಾರ್ಥ ಬರುವಂತಹಾ ಹೇಳಿಕೆಗಳನ್ನು ಪೋಸ್ಟರ್‌ನಲ್ಲಿ ಮುದ್ರಿಸಿದೆ. ಈ ಪೋಸ್ಟರ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

  ದ್ವಂದ್ವಾರ್ಥ ಸೃಜಿಸುವ ಪೋಸ್ಟರ್‌ಗಳು

  ದ್ವಂದ್ವಾರ್ಥ ಸೃಜಿಸುವ ಪೋಸ್ಟರ್‌ಗಳು

  'ನಿನ್ನ ರಾತ್ರಿಯನ್ನು ನನ್ನ ನವಾರಾತ್ರಿಯಲ್ಲಿಡು', 'ದಾಂಡಿಯಾ ಆಡಬೇಕೆಂದರೆ ದಾಂಡಿ ಬೇಕು ನನ್ನ ಬಳಿ ಒಂದಿದೆ', 'ನನ್ನ ಪೈಜಾಮಾದಲ್ಲಿ ಮಜಾ ಮಾಡು' ಈ ರೀತಿಯ ತೀರಾ ಅಪಾರ್ಥ ಸೃಜಿಸುತ್ತಿರುವ ವಾಕ್ಯಗಳುಳ್ಳ ಪೋಸ್ಟರ್‌ಗಳನ್ನು ನವಾರಾತ್ರಿ ಶುಭಾಶಯ ಎಂದು ಪ್ರಕಟಿಸಿದೆ ಎರೊಸ್.

  ಎರೋಸ್ ಅನ್ನು ಬ್ಯಾನ್ ಮಾಡಲು ಒತ್ತಾಯ

  ಎರೋಸ್ ಅನ್ನು ಬ್ಯಾನ್ ಮಾಡಲು ಒತ್ತಾಯ

  ಸಾಮಾಜಿಕ ಜಾಲತಾಣದಲ್ಲಿ ಎರೋಸ್‌ ನ ಈ ನಡೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತನ್ನ ಎಲ್ಲಾ ಪೋಸ್ಟರ್‌ಗಳನ್ನು ಹಿಂಪಡೆದಿದೆ. ಆದರೆ ಟ್ವಿಟ್ಟರ್‌ನಲ್ಲಿ ಪೋಸ್ಟರ್‌ಗಳು ವೈರಲ್ ಆಗಿದ್ದು, ಎರೋಸ್ ಅನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ.

  ಪಾರ್ನ್ ಹಬ್‌ಗೆ ಹೋಲಿಸಿದ ಕಂಗನಾ

  ಪಾರ್ನ್ ಹಬ್‌ಗೆ ಹೋಲಿಸಿದ ಕಂಗನಾ

  ಎರೋಸ್ ನ ನಡೆಗೆ ನಟಿ ಕಂಗನಾ ರಣೌತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿನಿಮಾ ಎಂಬುದು ಸಮುದಾಯವನ್ನು ಹತ್ತಿರ ತರಬೇಕು, ಆದರೆ ಕಲೆ ಹೆಸರಲ್ಲಿ ಅಶ್ಲೀಲತೆ ಹರಡಬಾರದು, ಅಶ್ಲೀಲತೆ ವಿಜೃಂಭಿಸುವ ಈ ರೀತಿಯ ಸಂಸ್ಥೆಗಳು ಪಾರ್ನ್‌ ಹಬ್‌ನಂತೆ ಎಂದಿದ್ದಾರೆ ಕಂಗನಾ.

  English summary
  Eros now's Navarathri posters starts outrage in social media. Netizen demand boycott eros now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X