For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಮುತ್ತಿಗೆ: ಫುಲ್ ಖುಷ್ ಆದ ನಟಿ

  |

  ನಟಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿರುವ ರಶ್ಮಿಕಾಗೆ ದಕ್ಷಿಣ ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

  ಸೆಲ್ಫಿ ಕೇಳಿದ ಅಭಿಮಾನಿಗೆ ನೆಕ್ಸ್ಟ್ ಟೈಮ್ ಎಂದ ರಶ್ಮಿಕಾ

  ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರೆ. ಹಿಂದಿಯ ಎರಡು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು ಎರಡೂ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿವೆ.

  ಸಿನಿಮಾ ಬಿಡುಗಡೆ ಆಗುವ ಮುನ್ನವೇ ಮುಂಬೈನಲ್ಲಿ ಅಭಿಮಾನಿವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

  ಇಂದು ರಶ್ಮಿಕಾ ಮಂದಣ್ಣ ರೆಸ್ಟೊರೆಂಟ್ ಒಂದಕ್ಕೆ ತೆರಳಿದ್ದರು. ರೆಸ್ಟೊರೆಂಟ್‌ನಿಂದ ಹೊರಗೆ ಬಂದ ಕೂಡಲೇ ಅಭಿಮಾನಿಗಳು ನಟಿಯನ್ನು ಮುತ್ತಿಕೊಂಡು ಸೆಲ್ಫಿಗಾಗಿ ಮುತ್ತಿಗೆ ಹಾಕಿದರು. ಕೆಲವು ಅಭಿಮಾನಿಗಳೊಂದಿಗೆ ಫೋಸ್ ನೀಡಿದ ನಟಿ ರಶ್ಮಿಕಾ, ಜನ ಹೆಚ್ಚಾದ ಕೂಡಲೇ ನಗುತ್ತಲೇ ನಯವಾಗಿ ಅವರಿಗೆ ಬಾಯ್ ಹೇಳಿ ಕಾರ್ ಹತ್ತಿ ಹೊರಟುಹೋದರು.

  ಅಭಿಮಾನಿಗಳನ್ನು ತಮ್ಮ ಕುಟುಂಬದವರು ಎಂದೇ ಭಾವಿಸಿದ್ದಾರೆ ನಟಿ ರಶ್ಮಿಕಾ, ಈ ಬಗ್ಗೆ ಈ ಹಿಮದೆಯೂ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

  ಕೆಲವು ದಿನಗಳ ಹಿಂದಷ್ಟೆ ನಟಿ ರಶ್ಮಿಕಾ ಮಂದಣ್ಣರ ಮನೆ ಹುಡುಕಿಕೊಂಡು ಆಂಧ್ರದ ಯುವಕನೊಬ್ಬ ಹೈದರಾಬಾದ್‌ನಿಂದ ರೈಲು ಹತ್ತಿ ಕೊಡಗಿಗೆ ಬಂದಿದ್ದ. ವಿರಾಜಪೇಟೆಗೆ ಬಂದಿದ್ದ ಯುವಕ ರಶ್ಮಿಕಾ ಮಂದಣ್ಣರ ಮನೆ ಹುಡುಕುತ್ತಿರುವಾಗ ಪೊಲೀಸರ ಕಣ್ಣಿಗೆ ಬಿದ್ದು ಆತನಿಗೆ ಬುದ್ದಿ ಹೇಳಿ ವಾಪಸ್ ಕಳಿಸಿಕೊಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ರಶ್ಮಿಕಾ, ''ನನ್ನ ಗಮನಕ್ಕೆ ಈಗ ಬಂತು. ನಿಮ್ಮಲ್ಲಿ ಒಬ್ಬರು ತುಂಬಾ ದೂರ ಪ್ರಯಾಣ ಮಾಡಿ ನನ್ನನ್ನು ನೋಡಲು ಮನೆಗೆ ಹೋಗಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ. ನಿಮ್ಮನ್ನು ಭೇಟಿಯಾಗಿಲ್ಲ ಎನ್ನುವ ನೋವು ನನಗಿದೆ. ಒಂದು ದಿನ ಖಂಡಿತ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೀಗ ಪ್ರೀತಿ ತೋರಿಸಿ. ನಾನು ತುಂಬಾ ಪಡುತ್ತೇನೆ'' ಎಂದಿದ್ದರು.

  ರಶ್ಮಿಕಾ ಮಂದಣ್ಣ ಪ್ರಸ್ತುತ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಎರಡೂ ಸಿನಿಮಾಗಳ ಚಿತ್ರೀಕರಣ ಮುಗಿದಿದೆ. ಎರಡೂ ಸಿನಿಮಾಗಳು ಶೀಘ್ರದಲ್ಲಿಯೇ ಬಿಡುಗಡೆ ಆಗಲಿವೆ. ತಮ್ಮ ಬಾಲಿವುಡ್ ಪಯಣದ ಬಗ್ಗೆ ಉತ್ಸುಕರಾಗಿರುವ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಮನೆ ಮಾಡಿಕೊಂಡು ಮುಂದಿನ ಅವಕಾಶಗಳಿಗಾಗಿ ಕಾಯುತ್ತಾ ಕೂತಿದ್ದಾರೆ. ಇತ್ತ ತೆಲುಗಿನಲ್ಲಿ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಜೊತೆಗೆ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿಯೂ ನಟಿಸುತ್ತಿರುವ ರಶ್ಮಿಕಾ ತಮಿಳಿನಲ್ಲಿ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.

  English summary
  Fans took selfie with Rashmika Mandanna in Mumbai. She visited a restaurant in Mumbai today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X