»   » ಜಿಯಾಖಾನ್ ಸಾವಿನ ಪ್ರಕರಣ ಎಫ್ ಬಿಐ ತನಿಖೆಗೆ?

ಜಿಯಾಖಾನ್ ಸಾವಿನ ಪ್ರಕರಣ ಎಫ್ ಬಿಐ ತನಿಖೆಗೆ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟಿ ಜಿಯಾ ಖಾನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸುಮಾರು 500 ಪುಟಗಳ ಚಾರ್ಜ್ ಶೀಟ್ ಕೋರ್ಟಿಗೆ ಸಲ್ಲಿಸಿದ್ದು, ಸೂರಜ್ ಪಂಚೋಲಿಯನ್ನು ಆರೋಪಿ ಎಂದು ಹೆಸರಿಸಲಾಗಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಎಂದು ಹೇಳಿರುವ ರಬಿಯಾ ಅವರು ಈ ಪ್ರಕರಣವನ್ನು ಎಫ್ ಬಿಐಗೆ ಒಪ್ಪಿಸುವುದಾಗಿ ಹೇಳಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಂತೆ ಜಿಯಾ ಅವರದು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನಗಳನ್ನು ಬಲಪಡಿಸಿವೆ ಎಂದಿದ್ದ ಮುಂಬೈ ಪೊಲೀಸರು ಮಂಗಳವಾರ(ಜ.21) ಅಂಧೇರಿ ಕೋರ್ಟಿನಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಬಾಲಿವುಡ್ ನ ಮಾದಕ ಬೆಡಗಿ ನಫೀಸಾ ಅಲಿಯಾಸ್ ಜಿಯಾ ಖಾನ್ ಸೋಮವಾರ (ಜೂ.3) ಮಧ್ಯರಾತ್ರಿ ಜುಹೂನಲ್ಲಿರುವ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಸಾವಪ್ಪಿದ್ದರು. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ದ ಅವರ ದೇಹ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎಂದು ಮೇಲ್ಮೋಟಕ್ಕೆ ಗೊತ್ತಾದರೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹತ್ಯೆ ಇರಬಹುದು ಎಂಬ ಶಂಕೆ ಇತ್ತು. ಈಗ ಮುಂಬೈ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದರೂ ಪ್ರಕರಣದ ತನಿಖೆ ನಡೆಸುವಂತೆ ಎಫ್ ಬಿಐ ಮೊತೆ ಹೊಕ್ಕುವುದಾಗಿ ಜಿಯಾ ಖಾನ್ ತಾಯಿ ಹೇಳಿದ್ದಾರೆ.

'ನಾನು ಅಮೆರಿಕದ ನಿವಾಸಿಯಾಗಿದ್ದು, ನನ್ನ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಸಿಗುವ ತನಕ ಹೋರಾಟ ಮುಂದುವರೆಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಯಿಂದ ಮಾತ್ರ ನನಗೆ ನ್ಯಾಯ ಸಿಗಲು ಸಾಧ್ಯ' ಎಂದು ರಬಿಯಾ ಹೇಳಿದ್ದಾರೆ.

FBI To Investigate Jiah Khan's Suicide Case?
English summary
Jiah Khan's mother plans to take the death case to Bombay High Court , demanding the police to consider the factual material provided by her, which hints that Jiah's death could be a homicide. Meanwhile, she said that FBI offered her their help to investigate Jiah's case as she is an American citizen.
Please Wait while comments are loading...